ಗುಜರಾತ್​​ನಲ್ಲಿ ನಾಳೆ ಸಂಪುಟ ಪುನರ್​ರಚನೆ; ಸಿಎಂ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ

ಗುಜರಾತ್​ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಹೊರತುಪಡಿಸಿ, ಗುಜರಾತ್‌ನ ಎಲ್ಲಾ ಸಚಿವರು ಇಂದು ರಾಜೀನಾಮೆ ನೀಡಿದ್ದಾರೆ. ನಾಳೆ (ಶುಕ್ರವಾರ) ಗುಜರಾತಿನ ಸಂಪುಟ ವಿಸ್ತರಣೆಗೆ ಮುಂಚಿತವಾಗಿ ಅವರೆಲ್ಲರೂ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಗುಜರಾತ್ ಸಚಿವ ಸಂಪುಟದಲ್ಲಿ ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ 17 ಸಚಿವರು ಇದ್ದಾರೆ.

ಗುಜರಾತ್​​ನಲ್ಲಿ ನಾಳೆ ಸಂಪುಟ ಪುನರ್​ರಚನೆ; ಸಿಎಂ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ
Bhupendra Patel

Updated on: Oct 16, 2025 | 5:03 PM

ಅಹಮದಾಬಾದ್, ಅಕ್ಟೋಬರ್ 16: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಅವರನ್ನು ಹೊರತುಪಡಿಸಿ, ಗುಜರಾತ್‌ನ ಎಲ್ಲಾ 16 ಸಚಿವರು ಇಂದು ರಾಜೀನಾಮೆ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ 12.39ಕ್ಕೆ ಹೊಸ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. “ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಂಪುಟ ಶುಕ್ರವಾರ ಮಧ್ಯಾಹ್ನ 12.39ಕ್ಕೆ ವಿಸ್ತರಣೆಯಾಗಲಿದೆ” ಎಂದು ಗುಜರಾತ್ ಸರ್ಕಾರದ ಪ್ರಕಟಣೆ ತಿಳಿಸಿದೆ.

ಗುಜರಾತ್ ಸಂಪುಟ ವಿಸ್ತರಣೆಯಲ್ಲಿ 10 ಹೊಸ ಸಚಿವರು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ. ಮುಂಬರುವ ಸಂಪುಟ ವಿಸ್ತರಣೆಯಲ್ಲಿ ರಾಜ್ಯವು ಸುಮಾರು 10 ಹೊಸ ಸಚಿವರನ್ನು ಪಡೆಯಬಹುದು ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಪ್ರಸ್ತುತ ಸಚಿವರಲ್ಲಿ ಅರ್ಧದಷ್ಟು ಜನರು ಬದಲಾಗಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಎರಡು ಬಾರಿ ಸಾಮೂಹಿಕ ಅತ್ಯಾಚಾರ

ಪ್ರಸ್ತುತ ಗುಜರಾತ್ ಸಚಿವ ಸಂಪುಟವು ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ 17 ಸಚಿವರನ್ನು ಒಳಗೊಂಡಿದೆ. ಅವರಲ್ಲಿ 8 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರು, ಉಳಿದವರು ರಾಜ್ಯ ಸಚಿವರು.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇಂದು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿ ಹಕ್ಕು ಮಂಡಿಸುವ ಮತ್ತು ಹೊಸ ಸಂಪುಟ ರಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಆರೋಪಿಗಳ ಖುಲಾಸೆಗೆ ಆಕ್ರೋಶ; ಗುಜರಾತ್ ಕೋರ್ಟ್​ನಲ್ಲಿ ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದ ವ್ಯಕ್ತಿ

182 ಸದಸ್ಯರನ್ನು ಹೊಂದಿರುವ ಗುಜರಾತ್ ವಿಧಾನಸಭೆಯು 27 ಸಚಿವರನ್ನು ಅಥವಾ ಸದನದ ಒಟ್ಟು ಬಲದ ಶೇ.15ರಷ್ಟು ಸದಸ್ಯರನ್ನು ಹೊಂದಬಹುದು. 2021ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಭೂಪೇಂದ್ರ ಪಟೇಲ್ ಡಿಸೆಂಬರ್ 12, 2022ರಂದು ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ