Bharat Chemicals: ಮಹಾರಾಷ್ಟ್ರದ ಭಾರತ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; ಹಲವರಿಗೆ ಗಾಯ

| Updated By: Lakshmi Hegde

Updated on: Jul 04, 2021 | 9:21 AM

Maharashtra: ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಳಗಿದ್ದವರನ್ನೆಲ್ಲ ರಕ್ಷಣೆ ಮಾಡಿದ್ದಾರೆ.

Bharat Chemicals: ಮಹಾರಾಷ್ಟ್ರದ ಭಾರತ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; ಹಲವರಿಗೆ ಗಾಯ
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ
Follow us on

ಮಹಾರಾಷ್ಟ್ರದ ಪಾಲ್ಗಾರ್​ ಜಿಲ್ಲೆಯಲ್ಲಿರುವ ಭಾರತ್​ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಶನಿವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಅಗ್ನಿಶಾಮಕ ದಳಗಳು, ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಫೋಟದಲ್ಲಿ ಅನೇಕರು ಗಾಯಗೊಂಡಿದ್ದಾಗಿ ವರದಿಯಾಗಿದೆ. ಗಾಯಗೊಂಡವರನ್ನೆಲ್ಲ ತುಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಲ್ಗಾರ್​ ಜಿಲ್ಲೆಯ ಬೋಯಿಸರ್​ ತಾರಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಭಾರತ್​ ಕೆಮಿಕಲ್ಸ್​ ಫ್ಯಾಕ್ಟರಿಯಲ್ಲಿ ನಿನ್ನೆ ರಾತ್ರಿ ನಡೆದ ಸ್ಫೋಟದ ಸಾಂಧ್ರತೆ ತೀವ್ರವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಳಗಿದ್ದವರನ್ನೆಲ್ಲ ರಕ್ಷಣೆ ಮಾಡಿದ್ದಾರೆ. ಹಾಗಿದ್ದಾಗ್ಯೂ ಹಲವರು ಗಾಯಗೊಂಡಿದ್ದಾರೆ. ಕೆಲವರು ಉಸಿರಾಡಲಾಗದೆ ಅಸ್ವಸ್ಥರಾಗಿದ್ದಾರೆ. ಪಾಲ್ಗಾರ್​​ನಲ್ಲಿ ಜೂ.17ರಂದು ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟವಾಗಿ ಹಲವರು ಗಾಯಗೊಂಡಿದ್ದರು.

2019ರಲ್ಲಿ ಸ್ಫೋಟ
ಪಾಲ್ಗಾರ್​ ಕೈಗಾರಿಕಾ ಪ್ರದೇಶವಾಗಿದ್ದರಿಂದ ಅಲ್ಲಿ ಒಂದಲ್ಲ ಒಂದು ಕಾರ್ಖಾನೆಯಲ್ಲಿ ಪದೇಪದೆ ಸ್ಫೋಟವಾಗುತ್ತಲೇ ಇರುತ್ತದೆ. 2019ರಲ್ಲಿ ವರ್ಷಾ ಆರ್ಗಾನಿಕ್​ ಪ್ರೈವೇಟ್​ ಲಿಮಿಟೆಡ್​ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿ, ಇಬ್ಬರು ಕೆಲಸಗಾರರು ಗಂಭೀರವಾಗಿ ಗಾಯಗೊಂಡಿದ್ದರು.

 

ಇದನ್ನೂ ಓದಿ: Karnataka Weather: ಹವಾಮಾನ ವರದಿ- ಮುಂದಿನ 5 ದಿನ ವರುಣನ ಆರ್ಭಟ.. ಕರ್ನಾಟಕ ಸೇರಿ ಅನೇಕ ರಾಜ್ಯದಲ್ಲಿ ಮಳೆ

(Explosion Reported at Bharat Chemicals Factory in Maharashtra)