ವಕೀಲರ ಮೇಲೆ ಹಲ್ಲೆ ನಡೆಸಿದರೆ ಅಪಾಯ ಖಚಿತ; ಸಿದ್ಧವಾಯಿತು ಹೊಸ ಕಾಯ್ದೆಯ ಕರಡು
ಸದ್ಯ ಪ್ರಸ್ತಾಪಿಯ ಕಾಯ್ದೆಯ ಕರಡಿನಲ್ಲಿ ಭಾರತೀಯ ವಕೀಲರ ಪರಿಷತ್ನಿಂದ ನೇಮಕಗೊಂಡ ವಕೀಲರು ಅಥವಾ ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆ ನಡೆಸಿದಲ್ಲಿ ಕಠಿಣ ಕ್ರಮ ಕೈಗೊಳ್ಳು ಅವಕಾಶ ನೀಡಲಾಗಿದೆ. 6 ತಿಂಗಳನಿಂದ ಹಿಡಿದು 2 ವರ್ಷಗಳ ವರೆಗೆ ಜೈಲು ಮತ್ತು 10 ಲಕ್ಷಗಳವರೆಗೆ ದಂಡ ವಿಧಿಸುವ ಅವಕಾಶವೂ ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದಲ್ಲಿ ವಿಧಿಸಬಹುದಾಗಿದೆ.
ತಮ್ಮ ವೃತ್ತಿಯಿಂದಲೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇರುವ ವಕೀಲರ ರಕ್ಷಣೆಗೆ ಕಾಯ್ದೆಯನ್ನು ರಚಿಸಲು ಕರಡನ್ನು ಸಿದ್ಧಪಡಿಸಲಾಗಿದ್ದು, ವಕೀಲರು ಅಥವಾ ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆ ನಡೆಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಕುರಿತು ಪ್ರಸ್ತಾಪಿಸಲಾಗಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ನೇಮಿಸಿದ್ದ 7 ಹಿರಿಯ ವಕೀಲರ ಸಮಿತಿ ಈ ಕಾಯ್ದೆಯ ಕರಡನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಸಂಸತ್ನಲ್ಲಿ ಮಂಡಿಸುವ ಕುರಿತು ಪ್ರಯತ್ನ ನಡೆಯಲಿದೆ ಎಂದು ತಿಳಿದುಬಂದಿದೆ.
ವಕೀಲರ ಮೇಲಿನ ಹಲ್ಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಈ ಕಾಯ್ದೆಯನ್ನು ರಚಿಸಲು ಉದ್ದೇಶಿಸಲಾಗಿದ್ದು, ಒಟ್ಟು 16 ಭಾಗಗಳನ್ನು ಕರಡಿನಲ್ಲಿ ಅಳವಡಿಸಲಾಗಿದೆ. ಸಂಸತ್ ಸಭೆಯಲ್ಲಿ ಚರ್ಚೆಯ ನಂತರ ಈ ಕಾಯ್ದೆಯ ಕರಡು ಪಡೆಯಲಿರುವ ಅಂತಿಮ ಸ್ವರೂಪ ಇನ್ನಷ್ಟೇ ತಿಳಿಯಬೇಕಿದೆ.
ಸದ್ಯ ಪ್ರಸ್ತಾಪಿಯ ಕಾಯ್ದೆಯ ಕರಡಿನಲ್ಲಿ ಭಾರತೀಯ ವಕೀಲರ ಪರಿಷತ್ನಿಂದ ನೇಮಕಗೊಂಡ ವಕೀಲರು ಅಥವಾ ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆ ನಡೆಸಿದಲ್ಲಿ ಕಠಿಣ ಕ್ರಮ ಕೈಗೊಳ್ಳು ಅವಕಾಶ ನೀಡಲಾಗಿದೆ. 6 ತಿಂಗಳನಿಂದ ಹಿಡಿದು 2 ವರ್ಷಗಳ ವರೆಗೆ ಜೈಲು ಮತ್ತು 10 ಲಕ್ಷಗಳವರೆಗೆ ದಂಡ ವಿಧಿಸುವ ಅವಕಾಶವೂ ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದಲ್ಲಿ ವಿಧಿಸಬಹುದಾಗಿದೆ.
ಪೊಲೀಸರು ಯಾವುದೇ ನ್ಯಾಯವಾದಿ ವಿರುದ್ದದ ಪ್ರಕರಣದಲ್ಲಿ ನ್ಯಾಯವಾದಿಯನ್ನು ಜಿಲ್ಲೆಯ ಮುಖ್ಯ ದಂಡಾಧಿಕಾರಿ ಆದೇಶವಿಲ್ಲದ ಯಾವುದೇ ಪ್ರಕರಣದಲ್ಲಿ ಬಂಧಿಸುವಂತಿಲ್ಲ. ಭಾರತೀಯ ವಕೀಲರ ಪರಿಷತ್ನಿಂದ ನೇಮಿತ 7 ಹಿರಿಯ ವಕೀಲರ ಸಮಿತಿ ವಕೀಲರ ರಕ್ಷಣ ಕಾಯಿದೆ ಸಿದ್ದಪಡಿಸಿದ್ದು, ವಕೀಲರು ಅಥವಾ ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆಗೆ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ. ವಕೀಲರಿಗೆ ಕೋರ್ಟ್ ಆಫೀಸರ್ ಎಂದು ಮಾನ್ಯತೆ ನೀಡುವ ಕುರಿತೂ ಕರಡಿನಲ್ಲಿ ಪ್ರಸ್ತಾಪಿಸಲಾಗಿದ್ದು, ಅವರ ವಿರುದ್ದದ ಯಾವುದೇ ಪ್ರಕರಣವನ್ನು 30ದಿನದಲ್ಲಿ ಮುಗಿಸಬೇಕು ಎಂದು ಉಲ್ಲೇಖಿಸಲಾಗಿರುವ 16ಸೆಕ್ಷನ್ಗಳ ಕಾಯಿದೆಯ ಡ್ರಾಫ್ಟ್ ಸಿದ್ಧವಾಗಿದೆ.
ಇದನ್ನೂ ಓದಿ:
Karnataka Unlock 3.0: ಹೊಸ ಅನ್ಲಾಕ್ ಮಾರ್ಗಸೂಚಿ ಪ್ರಕಟ; ಏನೆಲ್ಲಾ ಬದಲಾವಣೆ? ಯಾವುದಕ್ಕೆಲ್ಲಾ ಅವಕಾಶ?
(7 member committee of BCI prepared Advocate Protection Act draft to protect lawyers)