ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಸೆ 17) ಶನಿವಾರ ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ವಿಶೇಷ ಆವರಣದಲ್ಲಿ ನಮೀಬಿಯಾದಿಂದ ವಿಮಾನದಲ್ಲಿ ತಂದ ಚೀತಾಗಳನ್ನು (cheetah) ಬಿಡುಗಡೆ ಮಾಡಿದರು. ಭಾರತಕ್ಕೆ ಇದು ಐತಿಹಾಸಿಕ ಕ್ಷಣವಾಗಿದ್ದು, ಏಕೆಂದರೆ 70 ವರ್ಷಗಳ ನಂತರ ಚೀತಾಗಳು ಭಾರತದಲ್ಲಿ ಕಾಣಿಸಿಕೊಂಡಿವೆ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ ಕ್ಯಾಪ್ ಮತ್ತು ಸನ್‌ಗ್ಲಾಸ್‌ನೊಂದಿಗೆ ಚೀತಾಗಳ ಫೋಟೋಗಳನ್ನು ಸೆರೆಹಿಡಿದಿದ್ದು, ವೃತ್ತಿಪರರಿಗಿಂತ ಕಡಿಮೆ ಇರಲಿಲ್ಲ. ಆದರೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ವಿರೋಧ ಪಕ್ಷಗಳು ಪ್ರಧಾನಿಯವರ ಎಡಿಟ್ ಮಾಡಲಾದ ಫೋಟೋವನ್ನು ಶೇರ್ ಮಾಡಿ ಅಪಹಾಸ್ಯ ಮಾಡಲಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಅವರು ಕ್ಯಾಮೆರಾದ ಲೆನ್ಸ್ ಕವರ್ ತೆಗೆಯದೆ ಚಿರತೆಗಳ ಚಿತ್ರವನ್ನು ತೆಗೆಯುತ್ತಿರುವ ಪ್ರಧಾನಿಯ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪ್ರತಿಯೊಂದು ವಸ್ತುಗಳ ಮೇಲೆ ಮುಚ್ಚಳವನ್ನು ಮುಚ್ಚುವುದು ಒಂದು ಸಂಗತಿಯಾದರೆ, ಕ್ಯಾಮೆರಾದ ಲೆನ್ಸ್ ಕವರ್ನ್ನು ತೆಗೆಯದೆ ಫೋಟೋ ಕ್ಲಿಕ್ಕಿಸುವುದು ಸಂಪೂರ್ಣ ದೂರದೃಷ್ಟಿ ಎಂದು ಟಿಎಂಸಿ ನಾಯಕ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಟಿಎಂಸಿ ನಾಯಕ ಪ್ರಧಾನಿ ಮೋದಿಯವರ ಈ ಎಡಿಟ್ ಮಾಡಿದ ಫೋಟೋವನ್ನು ಶೇರ್ ಮಾಡಿದ ತಕ್ಷಣ. ಬಿಜೆಪಿ ಮುಖಂಡ ಸುಕಾಂತ್ ಮಜುಂದಾರ್ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ. ಟಿಎಂಸಿ ರಾಜ್ಯಸಭಾ ಸಂಸದರು ಕ್ಯಾನನ್ ಕವರ್‌ನೊಂದಿಗೆ ನಿಕಾನ್ ಕ್ಯಾಮೆರಾದ ಎಡಿಟ್ ಮಾಡಿದ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತು ಇದು ಸುಳ್ಳು ಪ್ರಚಾರಕ್ಕೆ ಮಾಡುತ್ತಿರುವ ಕೆಟ್ಟ ಪ್ರಯತ್ನ ಎಂದು ಸುಕಾಂತ್ ಮಜುಂದಾರ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಟಿಎಂಸಿ ರಾಜ್ಯಸಭಾ ಸಂಸದ ನಿಕಾನ್ ಕ್ಯಾಮೆರಾದ ಎಡಿಟ್ ಚಿತ್ರವನ್ನು ಕ್ಯಾನನ್ ಕವರ್‌ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಸುಳ್ಳು ಪ್ರಚಾರ ಮಾಡುವ ಕೆಟ್ಟ ಪ್ರಯತ್ನವಾಗಿದೆ. ಜೊತೆಗೆ ಮಮತಾ ಬ್ಯಾನರ್ಜಿ ವಿರುದ್ಧ ಕೂಡ ಹರಿಹಾಯಲಾಗಿದ್ದು, ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರುವ ಉತ್ತಮ ವ್ಯಕ್ತಿಯನ್ನು ನೇಮಿಸಿಕೊಳ್ಳಿ ಎಂದು ಸುಕಾಂತ ಮಜುಂದಾರ್ ಟಾಂಗ್ ನೀಡಿದ್ದಾರೆ. ಇದಾದ ಕೂಡಲೇ ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ತಮ್ಮ ಟ್ವೀಟ್ನ್ನು ಡಿಲೀಟ್ ಮಾಡಿದ್ದಾರೆ. ಎಡಿಟ್ ಮಾಡಿದ ಫೋಟೋವನ್ನು ಕಾಂಗ್ರೆಸ್ ಪಕ್ಷದ ದಮನ್ ಮತ್ತು ದಿಯು ಘಟಕದ ಸ್ಥಳೀಯ ಹ್ಯಾಂಡಲ್ ಮತ್ತು ಇತರ ಹಲವು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ.
TMC Rajya Sabha MP is sharing an edited image of Nikon camera with canon cover.
Such a bad attempt to spread fake propaganda. @MamataOfficial ..hire someone better who can atleast have common sense. https://t.co/rPgNb3mmM0
— Dr. Sukanta Majumdar (@DrSukantaBJP) September 17, 2022
ನಮೀಬಿಯಾದಿಂದ 8 ಆಫ್ರಿಕನ್ ಚೀತಾಗಳು ಮಧ್ಯಪ್ರದೇಶಕ್ಕೆ ಬಂದಿಳಿದಿವೆ. ಅಲ್ಲಿಂದ ಕುನೋ ನ್ಯಾಷನಲ್ ಪಾರ್ಕ್ಗೆ (Kuno National Park) ಚೀತಾಗಳನ್ನು ಸಾಗಿಸಲಾಗಿದೆ. 4ರಿಂದ 6 ವರ್ಷ ವಯಸ್ಸಿನ 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ವಿಶೇಷ ವಿಮಾನದ ಮೂಲಕ ಕರೆತರಲಾಗಿದೆ. ಚೀತಾವನ್ನು ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ವಿಮಾನದ ಮೂಲಕ ಸಾಗಿಸಿರುವುದು ವಿಶ್ವದಲ್ಲೇ ಇದು ಮೊದಲ ಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:49 pm, Sun, 18 September 22