Fact Check: ಇನ್ಮುಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಲ್ಲ ಎಂಬ ವಾಟ್ಸಾಪ್ ಸಂದೇಶ ಫೇಕ್

|

Updated on: Mar 17, 2023 | 8:30 PM

ಆದರೆ ಈ ಸಂದೇಶ ನಕಲಿ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ಭಾರತ ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಪಿಐಬಿ ಹೇಳಿದೆ.

Fact Check: ಇನ್ಮುಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಲ್ಲ ಎಂಬ ವಾಟ್ಸಾಪ್ ಸಂದೇಶ ಫೇಕ್
ವಾಟ್ಸಾಪ್ ಸಂದೇಶ ನಕಲಿ
Follow us on

ಇನ್ನು ಮುಂದೆ ಯಾವುದೇ ನಗರದಿಂದ ನಾಗರಿಕ ಸಂಸ್ಥೆಗಳ ವ್ಯಾಪ್ತಿಯೊಳಗೆ ಬೈಕ್ ಸವಾರರು ಹೆಲ್ಮೆಟ್ (Helmet) ಧರಿಸುವ ಅಗತ್ಯವಿಲ್ಲ ಎಂಬ ನಕಲಿ ಸಂದೇಶ ವಾಟ್ಸಾಪ್​​ನಲ್ಲಿ (WhatsApp) ಹರಿದಾಡುತ್ತಿದೆ. ಸಾಗರ್ ಕುಮಾರ್ ಜೈನ್ ಎಂಬ ವ್ಯಕ್ತಿ ಸಲ್ಲಿಸಿದ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. “ಹೆಲ್ಮೆಟ್ ಬಳಕೆ ಹೆದ್ದಾರಿಗಳಲ್ಲಿ ಕಡ್ಡಾಯವಾಗಿದೆ. ಯಾವುದೇ ಟ್ರಾಫಿಕ್ ಅಥವಾ ಪೊಲೀಸರು ಹೆಲ್ಮೆಟ್ ಧರಿಸದಿರುವ ಬಗ್ಗೆ ನಿಮ್ಮನ್ನು ಕೇಳಿದರೆ ನಿಮ್ಮ ಬೈಕ್ ಮುನ್ಸಿಪಲ್ ಕಾರ್ಪೋರೇಷನ್ ಮಿತಿಯಲ್ಲಿದೆ ಎಂದು ಹೇಳಬಹುದು” ಎಂದು ಈ ಸಂದೇಶ ಹೇಳುತ್ತದೆ.

ಆದರೆ ಈ ಸಂದೇಶ ನಕಲಿ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ಭಾರತ ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಪಿಐಬಿ ಹೇಳಿದೆ.

ಭಾರತದಲ್ಲಿ ಹೆಲ್ಮೆಟ್ ಕಾನೂನು

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 129 ರ ಪ್ರಕಾರ 4 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕ ಪ್ರದೇಶದಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುವಾಗ “ರಕ್ಷಣಾತ್ಮಕ ಹೆಲ್ಮೆಟ್ ಧರಿಸಬೇಕು”. ಮೋಟಾರ್‌ಸೈಕಲ್‌ಗಳು ಅಥವಾ 2-ವೀಲರ್‌ಗಳಲ್ಲಿ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಕೂಡಾ ಹೆಲ್ಮೆಟ್ ಧರಿಸಬೇಕು ಎಂದು ಕಾನೂನು ಹೇಳುತ್ತದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ