Fact Check: ಮೋದಿ ಮತ್ತು ಅಮಿತ್ ಶಾ ಪಾಕಿಸ್ತಾನವನ್ನು ನಾಶ ಮಾಡುತ್ತಾರೆ ಎಂದ ಕೇಜ್ರಿವಾಲ್; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

|

Updated on: Feb 19, 2023 | 9:59 PM

ಜ್ರಿವಾಲ್ ಅವರ ಭವಿಷ್ಯ ನಿಜವಾಯಿತು. 2019 ರ ಸಂಸತ್ತಿನ ಚುನಾವಣೆಯ ಸಮಯದಲ್ಲಿ ಅವರ ನೋವನ್ನು ನೋಡಿ, ಪಾಕಿಸ್ತಾನದ ವಿನಾಶದ ಬಗ್ಗೆ ಅವರು ತುಂಬಾ ದುಃಖಿತರಾಗಿದ್ದಾರೆಂದು ತೋರಿಸುತ್ತದೆ ಎಂಬ ಬರಹದೊಂದಿಗೆ ವೈರಲ್ ಆಗಿರುವ ವಿಡಿಯೊದ ಫ್ಯಾಕ್ಟ್ ಚೆಕ್ ಇಲ್ಲಿದೆ

Fact Check: ಮೋದಿ ಮತ್ತು ಅಮಿತ್ ಶಾ ಪಾಕಿಸ್ತಾನವನ್ನು ನಾಶ ಮಾಡುತ್ತಾರೆ ಎಂದ ಕೇಜ್ರಿವಾಲ್; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
ಅರವಿಂದ ಕೇಜ್ರಿವಾಲ್
Follow us on

ಪಾಕಿಸ್ತಾನದ ನಾಶ ನರೇಂದ್ರ ಮೋದಿ (Narendra Modi) ಮತ್ತು ಅಮಿತ್ ಶಾ (Amit Shah) ಅವರ ಕೈಯಲ್ಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal )ಹೇಳಿದ್ದಾರೆ ಎನ್ನುವ ವಿಡಿಯೊವೊಂದು ವೈರಲ್ ಆಗಿದೆ. ಕೇಜ್ರಿವಾಲ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ. ಮೋದಿ ಮತ್ತು ಶಾ ಅಲ್ಲಿ ಏನು ಮಾಡುತ್ತಾರೆ ಎಂಬುದರ ಬಗ್ಗೆ ಅವರು ದುಃಖಿತರಾಗಿದ್ದಾರೆ ಎಂಬ ಬರಹದೊಂದಿಗೆ ಈ ವಿಡಿಯೊ ಹಂಚಿಕೊಳ್ಳಲಾಗುತ್ತಿದೆ. ಕೇಜ್ರಿವಾಲ್ ಅವರ ಭವಿಷ್ಯ ನಿಜವಾಯಿತು. 2019 ರ ಸಂಸತ್ತಿನ ಚುನಾವಣೆಯ ಸಮಯದಲ್ಲಿ ಅವರ ನೋವನ್ನು ನೋಡಿ, ಪಾಕಿಸ್ತಾನದ ವಿನಾಶದ ಬಗ್ಗೆ ಅವರು ತುಂಬಾ ದುಃಖಿತರಾಗಿದ್ದಾರೆಂದು ತೋರಿಸುತ್ತದೆ. ಅವರಿಗೆ ಭಯೋತ್ಪಾದಕರು ಅಥವಾ ಪಾಕಿಸ್ತಾನಿಗಳೊಂದಿಗೆ ಸಂಬಂಧವಿದೆ ಎಂದು ನೀವು ಭಾವಿಸುವುದಿಲ್ಲವೇ ಎಂದು ವಿಡಿಯೊಗೆ ಹಿಂದಿಯಲ್ಲಿ ಶೀರ್ಷಿಕೆ ನೀಡಲಾಗಿದೆ. ಕೋಲ್ಕತ್ತಾ ಮಹಾಘಟಬಂಧನ್ ರ್ಯಾಲಿಯಲ್ಲಿ ಕೇಜ್ರಿವಾಲ್ ಇದನ್ನು ಬಹಿರಂಗವಾಗಿ ಘೋಷಿಸಿದ್ದರು ಎಂದು ಹೇಳಲಾಗಿದೆ. ಆದರೆ ಈ ವಿಡಿಯೊ ಎಡಿಟ್ ಮಾಡಿದ್ದು ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಒರಿಜಿನಲ್ ವಿಡಿಯೊದಲ್ಲಿ ಕೇಜ್ರಿವಾಲ್, ದೇಶದಲ್ಲಿ ಸರ್ಕಾರ ರಚಿಸಲು ಮತ್ತೊಂದು ಅವಕಾಶ ಸಿಕ್ಕರೆ ಮೋದಿ ಮತ್ತು ಅಮಿತ್ ಶಾ ಭಾರತವನ್ನು ನಾಶ ಮಾಡುತ್ತಾರೆ. ನಾನು ಹೆಚ್ಚು ಯೋಚಿಸಿದರೆ, ನನ್ನ ದೇಹದಲ್ಲಿ ನಡುಕ ಹೆಚ್ಚುತ್ತಿದೆ. 2019 ರಲ್ಲಿ ಇಬ್ಬರೂ ಮತ್ತೆ ಅಧಿಕಾರಕ್ಕೆ ಬಂದರೆ … 2019 ರಲ್ಲಿ ಮೋದಿ ಮತ್ತು ಅಮಿತ್ ಶಾ ಮತ್ತೆ ಅಧಿಕಾರಕ್ಕೆ ಬಂದರೆ. .. ಸ್ನೇಹಿತರೇ, ದೇಶಕ್ಕೆ ಉಳಿಗಾಲವಿಲ್ಲ, ಅವರು ದೇಶವನ್ನು ನಾಶಪಡಿಸುತ್ತಾರೆ ಎಂದಿದ್ದಾರೆ.

ಫ್ಯಾಕ್ಟ್ ಚೆಕ್

2019 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಿರೋಧ ಪಕ್ಷದ ಬೃಹತ್ ರ್ಯಾಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಭಾಷಣಕ್ಕೆ ಸಂಬಂಧಿಸಿದ ಕೀವರ್ಡ್ ಹುಡುಕಾಟ ನಡೆಸಿದಾಗ ವಿಡಿಯೊವನ್ನು ಹೊಂದಿರುವ ಮೂಲ ETV ತೆಲಂಗಾಣ ಸುದ್ದಿ ಬುಲೆಟಿನ್ ಸಿಕ್ಕಿದೆ. 2019ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಾಕಿಸ್ತಾನದ ಬದಲಿಗೆ ಭಾರತವನ್ನು ನಾಶಪಡಿಸುತ್ತಾರೆ ಎಂದು ಕೇಜ್ರಿವಾಲ್ ಹೇಳಿರುವುದು ಈ ವಿಡಿಯೊದಲ್ಲಿದೆ.

4:50 ನಿಮಿಷಗಳ ನಂತರ ಕೇಜ್ರಿವಾಲ್ ಅವರು ಹೀಗೆ ಹೇಳಿದ್ದಾರೆ: ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನವು ದೇಶವನ್ನು ವಿಭಜಿಸುವ ಕನಸು ಕಂಡಿತ್ತು, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಸಾಧ್ಯವಾಗದ್ದನ್ನು ಮೋದಿ ಮತ್ತು ಅಮಿತ್ ಶಾ ಮಾಡಿದ್ದಾರೆ. 5 ವರ್ಷದೊಳಗೆ ಈ ದೇಶದ ಜನತೆಗೆ ವಿಷ ಉಣಿಸಿದ್ದಾರೆ.(ಅವರು) ಹಿಂದೂ-ಮುಸ್ಲಿಂ, ಮುಸ್ಲಿಂ-ಕ್ರಿಶ್ಚಿಯನ್ ನಡುವೆ ಜಗಳ ಮಾಡಿದ್ದಾರೆ.ಪಾಕಿಸ್ತಾನ ಕಳೆದ 70 ವರ್ಷಗಳಲ್ಲಿ ಮಾಡಲು ಸಾಧ್ಯವಾಗದೇ ಇದ್ದ ಕೆಲಸವನ್ನು ಮೋದಿ ಮತ್ತು ಅಮಿತ್ ಶಾ 5 ವರ್ಷಗಳಲ್ಲಿ ಮಾಡಿದ್ದಾರೆ. ಸ್ನೇಹಿತರೇ, ಇವರಿಬ್ಬರು ಈ ದೇಶವನ್ನು ನಾಶ ಮಾಡುತ್ತಾರೆ. ನಾನು ಈ ಬಗ್ಗೆ ಹೆಚ್ಚು ಯೋಚಿಸಿದರೆ ನನ್ನ ದೇಹದೊಳಗೆ ನಡುಕವುಂಟಾಗುತ್ತದೆ.. 2019 ರಲ್ಲಿ ಇಬ್ಬರೂ ಮತ್ತೆ ಅಧಿಕಾರಕ್ಕೆ ಬಂದರೆ…… 2019 ರಲ್ಲಿ ಮತ್ತೊಮ್ಮೆ ಮೋದಿ ಮತ್ತು ಅಮಿತ್ ಶಾ ಅಧಿಕಾರಕ್ಕೆ ಬಂದರೆ… ಸ್ನೇಹಿತರೇ, ಈ ದೇಶ (ಭಾರತ) ಉಳಿಯುವುದಿಲ್ಲ. ಅವರು ಈ ದೇಶವನ್ನು ನಾಶ ಮಾಡುತ್ತಾರೆ.

ಜನವರಿ 19, 2019 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಭಾಷಣವನ್ನು ಲೈವ್ ಸ್ಟ್ರೀಮ್ ಮಾಡಲಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ