Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch: ತೆಲಂಗಾಣ ಭಾರತದ ಅಫ್ಘಾನಿಸ್ತಾನ, ಕೆಸಿಆರ್ ತಾಲಿಬಾನ್: ವೈಎಸ್ ಶರ್ಮಿಳಾ ವಾಗ್ದಾಳಿ

ಮಹಬೂಬಾಬಾದ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರ್ಮಿಳಾ, ತೆಲಂಗಾಣ ಸಿಎಂ ಕೆಸಿಆರ್ ಸರ್ವಾಧಿಕಾರಿ, ಅವರು ನಿರಂಕುಶಾಧಿಕಾರಿ, ತೆಲಂಗಾಣದಲ್ಲಿ ಭಾರತೀಯ ಸಂವಿಧಾನವಿಲ್ಲ, ಕೆಸಿಆರ್ ಅವರ ಸಂವಿಧಾನವಿದೆ ಎಂದಿದ್ದಾರೆ.

Watch: ತೆಲಂಗಾಣ ಭಾರತದ ಅಫ್ಘಾನಿಸ್ತಾನ, ಕೆಸಿಆರ್ ತಾಲಿಬಾನ್: ವೈಎಸ್ ಶರ್ಮಿಳಾ ವಾಗ್ದಾಳಿ
ವೈಎಸ್ ಶರ್ಮಿಳಾ
Follow us
ರಶ್ಮಿ ಕಲ್ಲಕಟ್ಟ
|

Updated on:Feb 19, 2023 | 7:45 PM

ಮಹಬೂಬಾಬಾದ್ : ತೆಲಂಗಾಣ ಭಾರತದ ಅಫ್ಘಾನಿಸ್ತಾನ (Afghanistan) ಮತ್ತು ಕೆಸಿಆರ್(KCR) ಅದರ ತಾಲಿಬಾನ್ (Taliban)ಎಂದು ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ(YS Sharmila) ಭಾನುವಾರ ಹೇಳಿದ್ದಾರೆ. ಮಹಬೂಬಾಬಾದ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರ್ಮಿಳಾ, ತೆಲಂಗಾಣ ಸಿಎಂ ಕೆಸಿಆರ್ ಸರ್ವಾಧಿಕಾರಿ, ಅವರು ನಿರಂಕುಶಾಧಿಕಾರಿ, ತೆಲಂಗಾಣದಲ್ಲಿ ಭಾರತೀಯ ಸಂವಿಧಾನವಿಲ್ಲ, ಕೆಸಿಆರ್ ಅವರ ಸಂವಿಧಾನವಿದೆ, ತೆಲಂಗಾಣ ಭಾರತದ ಆಫ್ಘಾನಿಸ್ತಾನ ಮತ್ತು ಕೆಸಿಆರ್ ಅದರ ತಾಲಿಬಾನ್ ಎಂದಿದ್ದಾರೆ. ಮಹಬೂಬಾಬಾದ್ ಶಾಸಕ ಮತ್ತು ಬಿಆರ್‌ಎಸ್ ನಾಯಕ ಶಂಕರ್ ನಾಯ್ಕ್ ವಿರುದ್ಧ ಅನುಚಿತ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು ವೈಎಸ್ ಶರ್ಮಿಳಾ ಅವರನ್ನು ಭಾನುವಾರ ಬಂಧಿಸಿದ್ದಾರೆ.

ಮಹಬೂಬಾಬಾದ್ ಪಟ್ಟಣದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ಪೊಲೀಸರು ಆಕೆಯನ್ನು ಹೈದರಾಬಾದ್‌ಗೆ ಸ್ಥಳಾಂತರಿಸಿದರು. ಅವರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 ರ ಅಡಿಯಲ್ಲಿ ಶಾಂತಿ ಭಂಗವನ್ನು ಪ್ರಚೋದಿಸುವ ಮತ್ತು SC ST POA ಕಾಯಿದೆಯ ಸೆಕ್ಷನ್ 3(1)r ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವೈಎಸ್ ಶರ್ಮಿಳಾ, ಮಹಬೂಬಾಬಾದ್ ಶಾಸಕರು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ನೀವು ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದೀರಿ, ನೀವು ಅದನ್ನು ಈಡೇರಿಸಿಲ್ಲ, ನಿಮ್ಮ ಭರವಸೆಗಳನ್ನು ಈಡೇರಿಸದಿದ್ದರೆ ನೀವು ಕೊಜ್ಜಾ ಎಂದು ಅರ್ಥ ಎಂದಿದ್ದಾರೆ.

ಇದನ್ನೂ ಓದಿ: ತಮ್ಮ ಖಾಸಗಿ ಫೋಟೋಗಳಿಗೆ ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ, IPS ರೂಪಾ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ

ಘಟನೆಯ ನಂತರ, ಮಹಬೂಬಾಬಾದ್ ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಾಗಿ ವೈಎಸ್ ಶರ್ಮಿಳಾ ವಿರುದ್ಧ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಜಿಲ್ಲೆಯಲ್ಲಿ ಧರಣಿ ಪ್ರತಿಭಟನೆ ನಡೆಸಿದೆ. ರಸ್ತೆಯಲ್ಲಿದ್ದ ಪ್ರತಿಭಟನಾಕಾರರು ವೈಎಸ್‌ಆರ್‌ಟಿಪಿ ಮುಖ್ಯಸ್ಥರ ವಿರುದ್ಧ “ಗೋ ಬ್ಯಾಕ್ ಶರ್ಮಿಳಾ” ಎಂದು ಘೋಷಣೆ ಕೂಗುತ್ತಾ ಪಕ್ಷದ ಹೋರ್ಡಿಂಗ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ಸುಟ್ಟುಹಾಕಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Sun, 19 February 23

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !