AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಮೋದಿ ಮತ್ತು ಅಮಿತ್ ಶಾ ಪಾಕಿಸ್ತಾನವನ್ನು ನಾಶ ಮಾಡುತ್ತಾರೆ ಎಂದ ಕೇಜ್ರಿವಾಲ್; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

ಜ್ರಿವಾಲ್ ಅವರ ಭವಿಷ್ಯ ನಿಜವಾಯಿತು. 2019 ರ ಸಂಸತ್ತಿನ ಚುನಾವಣೆಯ ಸಮಯದಲ್ಲಿ ಅವರ ನೋವನ್ನು ನೋಡಿ, ಪಾಕಿಸ್ತಾನದ ವಿನಾಶದ ಬಗ್ಗೆ ಅವರು ತುಂಬಾ ದುಃಖಿತರಾಗಿದ್ದಾರೆಂದು ತೋರಿಸುತ್ತದೆ ಎಂಬ ಬರಹದೊಂದಿಗೆ ವೈರಲ್ ಆಗಿರುವ ವಿಡಿಯೊದ ಫ್ಯಾಕ್ಟ್ ಚೆಕ್ ಇಲ್ಲಿದೆ

Fact Check: ಮೋದಿ ಮತ್ತು ಅಮಿತ್ ಶಾ ಪಾಕಿಸ್ತಾನವನ್ನು ನಾಶ ಮಾಡುತ್ತಾರೆ ಎಂದ ಕೇಜ್ರಿವಾಲ್; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
ಅರವಿಂದ ಕೇಜ್ರಿವಾಲ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Feb 19, 2023 | 9:59 PM

Share

ಪಾಕಿಸ್ತಾನದ ನಾಶ ನರೇಂದ್ರ ಮೋದಿ (Narendra Modi) ಮತ್ತು ಅಮಿತ್ ಶಾ (Amit Shah) ಅವರ ಕೈಯಲ್ಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal )ಹೇಳಿದ್ದಾರೆ ಎನ್ನುವ ವಿಡಿಯೊವೊಂದು ವೈರಲ್ ಆಗಿದೆ. ಕೇಜ್ರಿವಾಲ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ. ಮೋದಿ ಮತ್ತು ಶಾ ಅಲ್ಲಿ ಏನು ಮಾಡುತ್ತಾರೆ ಎಂಬುದರ ಬಗ್ಗೆ ಅವರು ದುಃಖಿತರಾಗಿದ್ದಾರೆ ಎಂಬ ಬರಹದೊಂದಿಗೆ ಈ ವಿಡಿಯೊ ಹಂಚಿಕೊಳ್ಳಲಾಗುತ್ತಿದೆ. ಕೇಜ್ರಿವಾಲ್ ಅವರ ಭವಿಷ್ಯ ನಿಜವಾಯಿತು. 2019 ರ ಸಂಸತ್ತಿನ ಚುನಾವಣೆಯ ಸಮಯದಲ್ಲಿ ಅವರ ನೋವನ್ನು ನೋಡಿ, ಪಾಕಿಸ್ತಾನದ ವಿನಾಶದ ಬಗ್ಗೆ ಅವರು ತುಂಬಾ ದುಃಖಿತರಾಗಿದ್ದಾರೆಂದು ತೋರಿಸುತ್ತದೆ. ಅವರಿಗೆ ಭಯೋತ್ಪಾದಕರು ಅಥವಾ ಪಾಕಿಸ್ತಾನಿಗಳೊಂದಿಗೆ ಸಂಬಂಧವಿದೆ ಎಂದು ನೀವು ಭಾವಿಸುವುದಿಲ್ಲವೇ ಎಂದು ವಿಡಿಯೊಗೆ ಹಿಂದಿಯಲ್ಲಿ ಶೀರ್ಷಿಕೆ ನೀಡಲಾಗಿದೆ. ಕೋಲ್ಕತ್ತಾ ಮಹಾಘಟಬಂಧನ್ ರ್ಯಾಲಿಯಲ್ಲಿ ಕೇಜ್ರಿವಾಲ್ ಇದನ್ನು ಬಹಿರಂಗವಾಗಿ ಘೋಷಿಸಿದ್ದರು ಎಂದು ಹೇಳಲಾಗಿದೆ. ಆದರೆ ಈ ವಿಡಿಯೊ ಎಡಿಟ್ ಮಾಡಿದ್ದು ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಒರಿಜಿನಲ್ ವಿಡಿಯೊದಲ್ಲಿ ಕೇಜ್ರಿವಾಲ್, ದೇಶದಲ್ಲಿ ಸರ್ಕಾರ ರಚಿಸಲು ಮತ್ತೊಂದು ಅವಕಾಶ ಸಿಕ್ಕರೆ ಮೋದಿ ಮತ್ತು ಅಮಿತ್ ಶಾ ಭಾರತವನ್ನು ನಾಶ ಮಾಡುತ್ತಾರೆ. ನಾನು ಹೆಚ್ಚು ಯೋಚಿಸಿದರೆ, ನನ್ನ ದೇಹದಲ್ಲಿ ನಡುಕ ಹೆಚ್ಚುತ್ತಿದೆ. 2019 ರಲ್ಲಿ ಇಬ್ಬರೂ ಮತ್ತೆ ಅಧಿಕಾರಕ್ಕೆ ಬಂದರೆ … 2019 ರಲ್ಲಿ ಮೋದಿ ಮತ್ತು ಅಮಿತ್ ಶಾ ಮತ್ತೆ ಅಧಿಕಾರಕ್ಕೆ ಬಂದರೆ. .. ಸ್ನೇಹಿತರೇ, ದೇಶಕ್ಕೆ ಉಳಿಗಾಲವಿಲ್ಲ, ಅವರು ದೇಶವನ್ನು ನಾಶಪಡಿಸುತ್ತಾರೆ ಎಂದಿದ್ದಾರೆ.

ಫ್ಯಾಕ್ಟ್ ಚೆಕ್

2019 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಿರೋಧ ಪಕ್ಷದ ಬೃಹತ್ ರ್ಯಾಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಭಾಷಣಕ್ಕೆ ಸಂಬಂಧಿಸಿದ ಕೀವರ್ಡ್ ಹುಡುಕಾಟ ನಡೆಸಿದಾಗ ವಿಡಿಯೊವನ್ನು ಹೊಂದಿರುವ ಮೂಲ ETV ತೆಲಂಗಾಣ ಸುದ್ದಿ ಬುಲೆಟಿನ್ ಸಿಕ್ಕಿದೆ. 2019ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಾಕಿಸ್ತಾನದ ಬದಲಿಗೆ ಭಾರತವನ್ನು ನಾಶಪಡಿಸುತ್ತಾರೆ ಎಂದು ಕೇಜ್ರಿವಾಲ್ ಹೇಳಿರುವುದು ಈ ವಿಡಿಯೊದಲ್ಲಿದೆ. 4:50 ನಿಮಿಷಗಳ ನಂತರ ಕೇಜ್ರಿವಾಲ್ ಅವರು ಹೀಗೆ ಹೇಳಿದ್ದಾರೆ: ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನವು ದೇಶವನ್ನು ವಿಭಜಿಸುವ ಕನಸು ಕಂಡಿತ್ತು, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಸಾಧ್ಯವಾಗದ್ದನ್ನು ಮೋದಿ ಮತ್ತು ಅಮಿತ್ ಶಾ ಮಾಡಿದ್ದಾರೆ. 5 ವರ್ಷದೊಳಗೆ ಈ ದೇಶದ ಜನತೆಗೆ ವಿಷ ಉಣಿಸಿದ್ದಾರೆ.(ಅವರು) ಹಿಂದೂ-ಮುಸ್ಲಿಂ, ಮುಸ್ಲಿಂ-ಕ್ರಿಶ್ಚಿಯನ್ ನಡುವೆ ಜಗಳ ಮಾಡಿದ್ದಾರೆ.ಪಾಕಿಸ್ತಾನ ಕಳೆದ 70 ವರ್ಷಗಳಲ್ಲಿ ಮಾಡಲು ಸಾಧ್ಯವಾಗದೇ ಇದ್ದ ಕೆಲಸವನ್ನು ಮೋದಿ ಮತ್ತು ಅಮಿತ್ ಶಾ 5 ವರ್ಷಗಳಲ್ಲಿ ಮಾಡಿದ್ದಾರೆ. ಸ್ನೇಹಿತರೇ, ಇವರಿಬ್ಬರು ಈ ದೇಶವನ್ನು ನಾಶ ಮಾಡುತ್ತಾರೆ. ನಾನು ಈ ಬಗ್ಗೆ ಹೆಚ್ಚು ಯೋಚಿಸಿದರೆ ನನ್ನ ದೇಹದೊಳಗೆ ನಡುಕವುಂಟಾಗುತ್ತದೆ.. 2019 ರಲ್ಲಿ ಇಬ್ಬರೂ ಮತ್ತೆ ಅಧಿಕಾರಕ್ಕೆ ಬಂದರೆ…… 2019 ರಲ್ಲಿ ಮತ್ತೊಮ್ಮೆ ಮೋದಿ ಮತ್ತು ಅಮಿತ್ ಶಾ ಅಧಿಕಾರಕ್ಕೆ ಬಂದರೆ… ಸ್ನೇಹಿತರೇ, ಈ ದೇಶ (ಭಾರತ) ಉಳಿಯುವುದಿಲ್ಲ. ಅವರು ಈ ದೇಶವನ್ನು ನಾಶ ಮಾಡುತ್ತಾರೆ. ಜನವರಿ 19, 2019 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಭಾಷಣವನ್ನು ಲೈವ್ ಸ್ಟ್ರೀಮ್ ಮಾಡಲಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ