AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Morbi Bridge Collapse: ತುಕ್ಕು ಹಿಡಿದ ಕೇಬಲ್​ನಿಂದ ಅಪಘಾತ, ಮೊದಲೇ 12 ತಂತಿಗಳು ಮುರಿದಿದ್ದವು

ಗುಜರಾತ್​ನ ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಎಸ್​ಐಟಿಯ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ಮೊರ್ಬಿ ಅಪಘಾತದ ಪ್ರಾಥಮಿಕ ತನಿಖೆಯಲ್ಲಿ ಸೇತುವೆಯ ಅರ್ಧದಷ್ಟು ಕೇಬಲ್ ತಂತಿಗಳು ತುಕ್ಕು ಹಿಡಿದಿದ್ದವು, ದುರಸ್ತಿ ಸಮಯದಲ್ಲಿ ಹಳೆಯ ಮತ್ತು ಹೊಸ ತಂತಿಗಳನ್ನು ಒಟ್ಟಿಗೆ ಬೆಸುಗೆ ಹಾಕಿರುವುದು ಇತ್ಯಾದಿ ವಿಚಾರಗಳು ಬೆಳಕಿಗೆ ಬಂದಿವೆ.

Morbi Bridge Collapse: ತುಕ್ಕು ಹಿಡಿದ ಕೇಬಲ್​ನಿಂದ ಅಪಘಾತ, ಮೊದಲೇ 12 ತಂತಿಗಳು ಮುರಿದಿದ್ದವು
ಮೊರ್ಬಿ ಸೇತುವೆ
ನಯನಾ ರಾಜೀವ್
|

Updated on: Feb 20, 2023 | 9:41 AM

Share

ಗುಜರಾತ್​ನ ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಎಸ್​ಐಟಿಯ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ಮೊರ್ಬಿ ಅಪಘಾತದ ಪ್ರಾಥಮಿಕ ತನಿಖೆಯಲ್ಲಿ ಸೇತುವೆಯ ಅರ್ಧದಷ್ಟು ಕೇಬಲ್ ತಂತಿಗಳು ತುಕ್ಕು ಹಿಡಿದಿದ್ದವು, ದುರಸ್ತಿ ಸಮಯದಲ್ಲಿ ಹಳೆಯ ಮತ್ತು ಹೊಸ ತಂತಿಗಳನ್ನು ಒಟ್ಟಿಗೆ ಬೆಸುಗೆ ಹಾಕಿರುವುದು ಇತ್ಯಾದಿ ವಿಚಾರಗಳು ಬೆಳಕಿಗೆ ಬಂದಿವೆ. ಇದರಿಂದ ಸೇತುವೆಯ ದುರ್ಬಲ ತಂತಿಗಳು ತುಂಡಾಗಿವೆ. ಕಳೆದ ವರ್ಷ ಅಕ್ಟೋಬರ್ 30 ರಂದು ಮೊರ್ಬಿಯ ತೂಗು ಸೇತುವೆ ಕುಸಿದು 135 ಜನರು ಮೃತಪಟ್ಟಿದ್ದರು.

ಈ SIT ವರದಿಯನ್ನು ಇತ್ತೀಚೆಗೆ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಮೊರ್ಬಿ ಪುರಸಭೆಯೊಂದಿಗೆ ಹಂಚಿಕೊಂಡಿದೆ. ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ (ಒರೆವಾ ಗ್ರೂಪ್) ನದಿಯ ಮೇಲೆ ಬ್ರಿಟಿಷ್ ಕಾಲದ ತೂಗು ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿತ್ತು. ಸೇತುವೆಯ ದುರಸ್ತಿ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಹಲವು ಲೋಪದೋಷಗಳನ್ನು ಎಸ್‌ಐಟಿ ಪತ್ತೆ ಮಾಡಿದೆ.

ಮತ್ತಷ್ಟು ಓದಿ: Morbi bridge collapse: ಕಳೆದ ವಾರವಷ್ಟೇ ನವೀಕರಿಸಲಾಗಿದ್ದ ಮೊರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು?

1887ರಲ್ಲಿ ಅಂದಿನ ಆಡಳಿತಗಾರರು ನಿರ್ಮಿಸಿದ ನದಿಯ ಸೇತುವೆಯ ಎರಡು ಮುಖ್ಯ ಕೇಬಲ್‌ಗಳಲ್ಲಿ ಒಂದರಲ್ಲಿ ತುಕ್ಕು ಸಮಸ್ಯೆ ಇತ್ತು ಮತ್ತು ಅಕ್ಟೋಬರ್ 30 ರಂದು ಕೇಬಲ್ ತುಂಟಾಗುವ ಮೊದಲು ಅದರ ಅರ್ಧದಷ್ಟು ತಂತಿಗಳು ಮುರಿದುಹೋಗಿವೆ ಎಂದು ಎಸ್‌ಐಟಿ ಪತ್ತೆ ಮಾಡಿದೆ. ಐಎಎಸ್ ಅಧಿಕಾರಿ ರಾಜ್‌ಕುಮಾರ್ ಬೇನಿವಾಲ್, ಐಪಿಎಸ್ ಸುಭಾಷ್ ತ್ರಿವೇದಿ, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರು ಐವರು ಎಸ್‌ಐಟಿಯ ಸದಸ್ಯರಾಗಿದ್ದರು.

ಎಸ್‌ಐಟಿ ಪ್ರಕಾರ, ನದಿಯ ಮೇಲ್ಭಾಗದ ಮುಖ್ಯ ಕೇಬಲ್ ಮುರಿದಿರುವುದು ಅಪಘಾತಕ್ಕೆ ಕಾರಣವಾಯಿತು. ತನಿಖೆಯ ವೇಳೆ ಕೇಬಲ್‌ನ 49 ವೈರ್‌ಗಳಲ್ಲಿ 22 ತುಕ್ಕು ಹಿಡಿದಿರುವುದು ಕಂಡುಬಂದಿದ್ದು, ಘಟನೆಗೂ ಮುನ್ನವೇ ಆ ತಂತಿಗಳು ತುಂಡಾಗಿರಬಹುದು ಎಂದು ಎಸ್‌ಐಟಿ ತನ್ನ ವರದಿಯಲ್ಲಿ ತಿಳಿಸಿದೆ. ಅಪಘಾತದ ವೇಳೆ ಉಳಿದ ತಂತಿಗಳು ತುಂಡಾಗಿವೆ.

SIT ಪ್ರಕಾರ, ಸೇತುವೆಯ ಮೇಲೆ ಸುಮಾರು 300 ಜನರಿದ್ದರು, ಇದು ಸೇತುವೆಯ ಭಾರ ಹೊರುವ ಸಾಮರ್ಥ್ಯಕ್ಕಿಂತ ಹೆಚ್ಚಾದ ಕಾರಣ ಸೇತುವೆ ಕುಸಿದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ