Morbi bridge collapse: ಕಳೆದ ವಾರವಷ್ಟೇ ನವೀಕರಿಸಲಾಗಿದ್ದ ಮೊರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು?

ಗುಜರಾತ್‌ನ ಮೋರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಕಳೆದ ವಾರಷ್ಟೇ ಅದನ್ನು ನವೀಕರಿಸಲಾಗಿತ್ತು. ಆದ್ರೆ, ಇದೀಗ ಏಕಾಏಕಿ ಕುಸಿದ್ದಿದ್ಯಾಕೆ? ಸೇರುವೆ ಕುಸಿಯಲು ಪ್ರಮುಖ ಕಾರಣವೇನು?

Morbi bridge collapse: ಕಳೆದ ವಾರವಷ್ಟೇ ನವೀಕರಿಸಲಾಗಿದ್ದ ಮೊರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು?
Gujarat cable bridge collapse
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 31, 2022 | 12:01 PM

ಗಾಂಧಿನಗರ: ಗುಜರಾತ್‌ನ ಮೊರ್ಬಿಯ  ಮಚ್ಚು ನದಿಯ (Machchhu river) ಮೇಲೆ ನಿರ್ಮಿಸಲಾದ ಸುಮಾರು ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ (cable bridge) ಇಂದು (ಅಕ್ಟೋಬರ್‌ 30) ಸಂಜೆ ಕುಸಿದಿದೆ. ಸೇತುವೆ ಮೇಲಿದ್ದ ಹಲವರು ನದಿಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ ಗುಜರಾತ್ ಸೇತುವೆ ದುರಂತದಲ್ಲಿ ಈವರೆಗೆ ಬಂದ ಮಾಹಿತಿ ಪ್ರಕಾರ 30 ಮಕ್ಕಳು ಸೇರಿದಂತೆ 90 ಜನರು ಸಾವನ್ನಪ್ಪಿದ್ದಾರೆ.  ಇನ್ನು ಕಳೆದ ವಾರವಷ್ಟೇ ನವೀಕರಣಗೊಂಡಿದ್ದ ಸೇತುವೆ ಕುಸಿಯಲು ಕಾರಣವೇನು ಎನ್ನುವುದು ಹಲವರ ಪ್ರಶ್ನೆಯಾಗಿದ್ದು, ಮಾಹಿತಿಯ ಪ್ರಕಾರ  ಹೆಚ್ಚು ಜನರು ಸೇತುವೆ ಮೇಲೆ ಜಮಾಯಿಸಿದ್ದರಿಂದ ಓವರ್ ಲೋಡ್ ಆಗಿ ಸೇತುವೆ ಕುಸಿದುಬಿದ್ದಿದೆ ಎನ್ನಲಾಗಿದೆ.

ಮೋರ್ಬಿಯಲ್ಲಿರುವ ಕೇಬಲ್ ಸೇತುವೆಯು ಐತಿಹಾಸಿಕವಾದದ್ದು. ಕಳೆದ ವಾರ ಅದನ್ನು ನವೀಕರಿಸಲಾಗಿತ್ತು. ನವೀಕರಣದ ನಂತರ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಟಿಕೆಟ್ ಖರೀದಿಸಿ ಸೇತುವೆ ವೀಕ್ಷಿಸಿ ಆಗಮಿಸಿದ್ದರು. ಸಿಬ್ಬಂದಿ ಇಡೀ ದಿನ 675 ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗುಜರಾತ್‌ನಲ್ಲಿ ಕೇಬಲ್ ಸೇತುವೆ ಕುಸಿದು ದುರಂತ: ಸಾವಿನ ಸಂಖ್ಯೆ 90ಕ್ಕೆ ಏರಿಕೆ, ಮೋದಿ ರೋಡ್ ಶೋ ಕ್ಯಾನ್ಸಲ್

ಇನ್ನೊಂದು ಮೂಲಗಳ ಪ್ರಕಾರ ಅಕ್ಟೋಬರ್ 30ರಂದು ಸಂಜೆ ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸೇತುವೆ ಮೇಲೆ ಬಹಳಷ್ಟು ಜನರು ಜಮಾಯಿಸಿದ್ದರು. ಕುಸಿದಾಗ ಸೇತುವೆ ಮೇಲೆ ಸುಮಾರು 500 ಜನರು ಇದ್ದರು ಎನ್ನಲಾಗಿದ್ದು, ಭಾರ ಹೆಚ್ಚಾಗಿದ್ದಕ್ಕೆ ಸೇತುವೆ ಕುಸಿದಿದೆ ಎಂದು ತಿಳಿದುಬಂದಿದೆ.

ಇನ್ನು ಸೇತುವೆ ನವೀಕರಣದ ಬಳಿಕ ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ. ಮಾಹಿತಿಯ ಪ್ರಕಾರ ದುರಂತ ಸಂಭವಿಸಿದ ತೂಗು ಸೇತುವೆ ಮೇಲೆ ಅಬ್ಬಬ್ಬಾ ಅಂದ್ರೆ 150 ಜನರು ಒಟ್ಟಿಗೆ ಓಡಾಡಬಹುದು ಅಥವಾ ನಿಲ್ಲಬಹುದು. ಆದ್ರೆ, ಪೂಜೆ ಎಂದು ಸಾಮರ್ಥ್ಯಕ್ಕಿಂತ ಮೂರು ಪಟ್ಟು ಅಂದ್ರೆ ಸುಮಾರು 500 ಜನರು ಸೇತುವೆ ಮೇಲೆ ನಿಂತಿದ್ದಕ್ಕೆ ಸೇತುವೆ ಕುಸಿದುಬೀಳಲು ಪ್ರಮುಖ ಕಾರಣ ಎನ್ನಲಾಗಿದೆ.

ಇನ್ನು ಈ ದುರಂತಕ್ಕೆ ಕಾರಣವೇನು ಎನ್ನುವುದನ್ನು ತಿಳಿಯಲು ಗುಜರಾತ್ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಸೇತುವೆ ಕುಸಿಯಲು ಕಾರಣ ಏನು ಎನ್ನುವುದು ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

Published On - 1:03 am, Mon, 31 October 22