Fact Check: ಪೊಲೀಸ್ ವ್ಯಾನ್​​ನಲ್ಲಿ ನಗುತ್ತಿರುವ ಫೋಗಟ್ ಸಹೋದರಿಯರು; ವೈರಲ್ ಆಗಿದ್ದು ಎಡಿಟ್ ಮಾಡಿದ ಫೋಟೊ

|

Updated on: May 29, 2023 | 9:00 PM

ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಪೊಲೀಸರು ವ್ಯಾನ್ ನಲ್ಲಿ ಕರೆದೊಯ್ಯುತ್ತಿದ್ದಾಗ ನಗುತ್ತಿರುವ ಫೋಟೊವನ್ನು ಟ್ವೀಟ್ ಮಾಡಿದ ಟ್ವೀಟಿಗರು ಇದು ನಾಟಕ, ಇದು ಟೂಲ್ ಕಿಟ್ ನ ಭಾಗ ಎಂದು ಹೇಳಿದ್ದಾರೆ. ಆದರೆ ಈ ವೈರಲ್ ಫೋಟೊ Face App ಬಳಸಿ ನಗುತ್ತಿರುವಂತೆ ಎಡಿಟ್ ಮಾಡಿದ್ದು.

Fact Check: ಪೊಲೀಸ್ ವ್ಯಾನ್​​ನಲ್ಲಿ ನಗುತ್ತಿರುವ ಫೋಗಟ್ ಸಹೋದರಿಯರು; ವೈರಲ್ ಆಗಿದ್ದು ಎಡಿಟ್ ಮಾಡಿದ ಫೋಟೊ
ವೈರಲ್ ಆಗಿರುವ ಫೇಕ್ ಫೋಟೊ
Follow us on

ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಸಂಗೀತಾ ಫೋಗಟ್  (Sangeeta Phogat) ಮತ್ತು ಇತರರು ಪೊಲೀಸ್ ವ್ಯಾನ್‌ನಲ್ಲಿ ನಗುತ್ತಿರುವುದನ್ನು ತೋರಿಸುವ ಎಡಿಟ್ ಮಾಡಿದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Photo) ಆಗಿದೆ. ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಿರತ ಕುಸ್ತಿಪಟುಗಳನ್ನು ಭಾನುವಾರ ಪೊಲೀಸರು ವಶಕ್ಕೆ ತೆಗೆದುಕೊಂಡು ವ್ಯಾನ್​​ನಲ್ಲಿ ಕರೆದೊಯ್ಯುತ್ತಿದ್ದಾಗ ತೆಗೆದ ಸೆಲ್ಫಿ ಎಂದು ಈ ಫೋಟೊ ವೈರಲ್ ಆಗಿದೆ.

ಫ್ಯಾಕ್ಟ್ ಚೆಕ್

ವೈರಲ್ ಫೋಟೊದ ಫ್ಯಾಕ್ಟ್ ಚೆಕ್ ಮಾಡಿದ ಬೂಮ್, ಈ ಫೋಟೊವನ್ನು Face App ಬಳಸಿ ಎಡಿಟ್ ಮಾಡಲಾಗಿದೆ ಎಂದು ಹೇಳಿದೆ. ಪೊಲೀಸರು ಮತ್ತು ಪ್ರತಿಭಟನಾ ನಿರತ ಕುಸ್ತಿಪಟುಗಳ ನಡುವಿನ ಘರ್ಷಣೆಯ ನಂತರ ಫೋಗಟ್ ಮತ್ತು ಇತರರನ್ನು ಭಾನುವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾ ನಿರತ ಕುಸ್ತಿಪಟುಗಳು ಉದ್ಘಾಟನೆಯಾಗುತ್ತಿರುವ ಹೊಸ ಸಂಸತ್ತಿನ ಕಟ್ಟಡಕ್ಕೆ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ತಡೆದು ಎಳೆದಾಡಿದ್ದರು.

ಟ್ವಿಟರ್ ಬಳಕೆದಾರ ಅಶೋಕ್ ಪಂಡಿತ್ ಅವರು ಪೋಲೀಸ್ ವ್ಯಾನ್‌ನಲ್ಲಿ ನಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಇವರು, ಗೌರವಾನ್ವಿತ ರಾಜ್ ಜೀ ರಸ್ತೆಯಲ್ಲಿ ನಾಟಕ ಮಾಡಿದ ನಂತರ ನೋಡಿ ಇವರ ನಿಜವಾದಮುಖ. ಇದು ನಮ್ಮ ದೇಶವನ್ನು ಒಡೆಯಲು ಕೆಲಸ ಮಾಡುವ ಟೂಲ್ ಕಿಟ್‌ನ ಒಂದು ಭಾಗವಾಗಿದೆ.ದೇಶದ ಹೆಮ್ಮೆ ಕುಸಿಯುತ್ತಿದೆ ಎಂದಿದ್ದಾರೆ.

ಅಶೋಕ್ ಪಂಡಿತ್​​ರ ಟ್ವೀಟ್‌ಗೆ ಪ್ರತಿಕ್ರಿಯೆಗಳಲ್ಲಿ ಕೆಲವರು ಇದು ಡಿಜಿಟಲ್ ಆಗಿ ನಗು ಸೇರಿಸಿ ಎಡಿಟ್ ಮಾಡಿದ್ದು ಎಂದಿದ್ದಾರೆ. ಪಂಡಿತ್ ಅವರು ಈಗ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

IT Cell वाले ये झूठी तस्वीर फैला रहे हैं। हम ये साफ़ कर देते हैं की जो भी ये फ़र्ज़ी तस्वीर पोस्ट करेगा उसके ख़िलाफ़ शिकायत दर्ज की जाएगी। #WrestlersProtest pic.twitter.com/a0MngT1kUa


ಪ್ರತಿಭಟನಾ ನಿರತ ಕುಸ್ತಿಪಟು ಬಜರಂಗ್ ಪುನಿಯಾ ಈ ಬಗ್ಗೆ ಟ್ವೀಟ್ ಮಾಡಿದ್ದು, ನಗುತ್ತಿರುವ ಫೋಟೊ ಫೇಕ್ ಎಂದಿದ್ದಾರೆ. ಪುನಿಯಾ ಒರಿಜಿನಲ್ ಫೋಟೊ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲಿಗೆ ಬರಬೇಕು ಹೇಳಿ, ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತೇನೆ: ಮಾಜಿ ಡಿಜಿಪಿ ಎನ್‌ಸಿ ಅಸ್ತಾನಾ ಟ್ವೀಟ್​​ಗೆ ಬಜರಂಗ್​​ ಪುನಿಯಾ ಪ್ರತಿಕ್ರಿಯೆ

Face App ಎಂಬ ಎಡಿಟಿಂಗ್ ಅಪ್ಲಿಕೇಶನ್ ಬಳಸಿ ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Mon, 29 May 23