Wrestlers Protest: ಮಾನವೀಯತೆ ಮರೆತು ಮಹಿಳಾ ಕುಸ್ತಿಪಟುಗಳನ್ನು ರಸ್ತೆಯಲ್ಲಿ ಎಳೆದೊಯ್ದ ಪೊಲೀಸರು ಜಗತ್ತು ನೋಡುತ್ತಿದೆ ಎಂದ ಅಥ್ಲೀಟ್ಗಳು
ಭಾರತದ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದ ಕಡೆ ಮೆರವಣಿಗೆಗೆ ಯತ್ನಿಸಿದ ಕುಸ್ತಿಪಟುಗಳನ್ನು ಪೊಲೀಸರು ಭಾನುವಾರ ಬಂಧಿಸಿದರು.
ಭಾರತದ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದ ಕಡೆ ಮೆರವಣಿಗೆಗೆ ಯತ್ನಿಸಿದ ಕುಸ್ತಿಪಟುಗಳನ್ನು ಪೊಲೀಸರು ಭಾನುವಾರ ಬಂಧಿಸಿದರು. ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಭಾರತದ ಹಲವು ಪ್ರಮುಖ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾ ನಿರತ ಅಥ್ಲೀಟ್ಗಳು ತಕ್ಷಣದ ಬಂಧನಕ್ಕೆ ಒತ್ತಾಯಿಸಿದ್ದಾರೆ, ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಕೋರಿದ್ದಾರೆ. ಮೋದಿಯವರು ಭಾರತದ ನೂತನ ಸಂಸತ್ ಭವನವನ್ನು ಉದ್ಘಾಟಿಸುತ್ತಿದ್ದಂತೆಯೇ ಕುಸ್ತಿಪಟುಗಳು ಅದನ್ನು ಮೆರವಣಿಗೆ ಮಾಡಲು ಪ್ರಯತ್ನಿಸಿದರು, ಆದರೆ ನೂರಾರು ಪೊಲೀಸ್ ಅಧಿಕಾರಿಗಳು ಅವರನ್ನು ತಡೆದರು.
ಸಾಕ್ಷಿ ಮಲಿಕ್ ಹಾಗೂ ಪುನಿಯಾರನ್ನು ಪೊಲೀಸರು ಎಳೆದೊಯ್ದಿದ್ದಾರೆ,ಒಂದೆಡೆ ಸಂಸತ್ತು ಉದ್ಘಾಟನೆಯಾಗುತ್ತಿದೆ, ಮತ್ತೊಂದೆಡೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
This is how our champions are being treated. The world is watching us! #WrestlersProtest pic.twitter.com/rjrZvgAlSO
— Sakshee Malikkh (@SakshiMalik) May 28, 2023
ಮಹಿಳೆಯರ 58 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಪದಕ ಗೆದ್ದಿರುವ ಮಲಿಕ್, ಕುಸ್ತಿಪಟುಗಳನ್ನು ಪೊಲೀಸರು ಎಳೆದೊಯ್ದ ಫೋಟೋಗಳು ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹೆಚ್ಚಿನ ಕುಸ್ತಿಪಟುಗಳು ಹಳ್ಳಿಗಳಿಂದ ಬಂದಿದ್ದಾರೆ, ಭ್ರೂಣಹತ್ಯೆ ನಡೆಯುತ್ತಿರುವ ಹಳ್ಳಿಗಳಲ್ಲಿ ಹೆಣ್ಣುಮಕ್ಕಳನ್ನು ಉಳಿಸಿಕೊಳ್ಳಲು, ಅವರನ್ನು ಮನೆಯಿಂದ ಹೊರಗೆ ಕಳುಹಿಸಲು ತುಂಬಾ ಹೋರಾಟ ಮಾಡಬೇಕಾಗುತ್ತದೆ, ಆದರೆ ಇಂತಹ ಸಂದರ್ಭದಲ್ಲಿ ಈ ರೀತಿ ಕಿರುಕುಳ, ದೌರ್ಜನ್ಯಗಳು ನಡೆದಾಗ ಹೆಣ್ಣುಮಕ್ಕಳನ್ನು ಪೋಷಕರು ಮನೆಯಿಂದ ಕಳುಹಿಸಲು ಧೈರ್ಯ ಮಾಡುವುದೇ ಇಲ್ಲ ಎಂದು ಅಥ್ಲೀಟ್ಗಳು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕುಸ್ತಿಪಟುಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:03 am, Mon, 29 May 23