Fact Check: ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್ ಗಾಂಧಿ ಅವಮಾನ?, ನಿಜಾಂಶ ಏನು?

| Updated By: Vinay Bhat

Updated on: Jan 24, 2025 | 6:15 PM

ಈ ಸುದ್ದಿಯ ಸತ್ಯಾಸತ್ಯತೆನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋದ ವಿಸ್ತೃತ ಆವೃತ್ತಿಯಲ್ಲಿ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಲು ಆಹ್ವಾನಿಸಿದ ನಂತರ ವೇದಿಕೆಯನ್ನು ತಲುಪಲು ಸಹಾಯ ಮಾಡುವುದು ವಿಡಿಯೋದಲ್ಲಿದೆ.

Fact Check: ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್ ಗಾಂಧಿ ಅವಮಾನ?, ನಿಜಾಂಶ ಏನು?
Rahul Gandhi Malllikarjuna Kharge Fc
Follow us on

ಕಾಂಗ್ರೆಸ್ ತನ್ನ ಹೊಸ ಪ್ರಧಾನ ಕಛೇರಿ ಇಂದಿರಾ ಭವನವನ್ನು ಜನವರಿ 17 ರಂದು ದೆಹಲಿಯ ಕೋಟ್ಲಾ ರಸ್ತೆಯ 9A ನಲ್ಲಿ ಉದ್ಘಾಟಿಸಿದೆ. ಪ್ರಧಾನ ಕಚೇರಿಗೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಇಡಲಾಗಿದೆ. ಅವರ ಪರಂಪರೆ ಮತ್ತು ರಾಷ್ಟ್ರ ಮತ್ತು ಪಕ್ಷಕ್ಕೆ ನೀಡಿದ ಕೊಡುಗೆಗಳಿಗೆ ಗೌರವಾರ್ಥವಾಗಿ ಈ ಹೆಸರು ಇಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕುರ್ಚಿಯನ್ನು ಸರಿಸುತ್ತಿರುವುದನ್ನು ಕಾಣಬಹುದು.

ಈ ವಿಡಿಯೋವನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಸೋನಿಯಾ ಗಾಂಧಿ ಅವರ ಪಕ್ಕದಲ್ಲಿ ಕುಳಿತಿದ್ದ ಖರ್ಗೆ ಅವರನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಹೇಳಿಕೊಂಡಿದ್ದಾರೆ. ‘‘ಕಾಂಗ್ರೆಸ್​ನ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಕುಟುಂಬ ನಡೆಸಿಕೊಳ್ಳುವ ರೀತಿ ನೋಡಿ. ಇಷ್ಟೆಲ್ಲ ಅವಮಾನ ಆದರೂ ಅಲ್ಲಿರಬೇಕೇ’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋದ ವಿಸ್ತೃತ ಆವೃತ್ತಿಯಲ್ಲಿ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಲು ಆಹ್ವಾನಿಸಿದ ನಂತರ ವೇದಿಕೆಯನ್ನು ತಲುಪಲು ಸಹಾಯ ಮಾಡುವುದು ವಿಡಿಯೋದಲ್ಲಿದೆ.

ನಿಜಾಂಶವನ್ನು ತಿಳಿಯಲು ವೈರಲ್ ಕ್ಲಿಪ್‌ನ ಫೋಟೋ ತೆಗೆದು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜನವರಿ 15 ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ‘ಹೊಸ ಎಐಸಿಸಿ ಹೆಚ್ಕ್ಯು ಇಂದಿರಾ ಭವನ ಉದ್ಘಾಟನೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಲೈವ್-ಸ್ಟ್ರೀಮ್ ಮಾಡಿರುವುದು ಕಂಡುಬಂತು.

ವಿಡಿಯೋದಲ್ಲಿ ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಖಜಾಂಚಿ ಅಜಯ್ ಮಾಕೆನ್ ಅವರು 28 ನಿಮಿಷಗಳ ಅವಧಿಯಲ್ಲಿ ರಾಹುಲ್ ಗಾಂಧಿಯನ್ನು ಮಾತನಾಡಲು ಆಹ್ವಾನಿಸಿದರು, ರಾಹುಲ್ ತಮ್ಮ ಭಾಷಣವನ್ನು 46:06 ನಿಮಿಷಗಳಲ್ಲಿ ಮುಗಿಸಿದರು. ಮಾಕೆನ್ ನಂತರ ವೇದಿಕೆಗೆ ಹಿಂತಿರುಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತನಾಡಲು ಆಹ್ವಾನಿಸಿದರು. ನಿಖರವಾಗಿ 46:45 ನಿಮಿಷಗಳಲ್ಲಿ, ವೈರಲ್ ಕ್ಲಿಪ್ ಕಾಣಿಸಿಕೊಳ್ಳುತ್ತದೆ. ರಾಹುಲ್ ಅವರು ಖರ್ಗೆ ಅವರ ಭಾಷಣಕ್ಕೆ ಎದ್ದೇಳಲು ಸಹಾಯ ಮಾಡಲು ಅವರ ಕುರ್ಚಿಯನ್ನು ಹಿಂದೆ ಸರಿಸಿ ಸಹಾಯ ಮಾಡುತ್ತಾರೆ. ವಿಸ್ತೃತ ಆವೃತ್ತಿಯಲ್ಲಿ ರಾಹುಲ್ ಅವರು ಸೌಜನ್ಯಕ್ಕಾಗಿ ಖರ್ಗೆ ಅವರಿಗೆ ನೆರವು ನೀಡುತ್ತಿದ್ದಾರೆ, ಅವರನ್ನು ಅವಮಾನಿಸಿಲ್ಲ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.

Fact Check: ಪ್ರಿಯಾಂಕಾ ಚೋಪ್ರಾ ಮಹಾಕುಂಭಕ್ಕೆ ಬಂದು ಪವಿತ್ರ ಸ್ನಾನ ಮಾಡಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ

ಜನವರಿ 15 ರಂದು ಪ್ರಿಯಾಂಕಾ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈವೆಂಟ್‌ನ ವಿಡಿಯೋವನ್ನು ಲೈವ್-ಸ್ಟ್ರೀಮ್ ಮಾಡಿರುವುದನ್ನು ಕೂಡ ನಾವು ಕಂಡುಕೊಂಡಿದ್ದೇವೆ. ಈ ವಿಡಿಯೋ ಕೂಡ 45:04-ನಿಮಿಷಗಳ ನಂತರ ಅದೇ ಅನುಕ್ರಮವನ್ನು ತೋರಿಸುತ್ತದೆ, ಅಲ್ಲಿ ರಾಹುಲ್ ಖರ್ಗೆ ಅವರನ್ನು ಕುರ್ಚಿಯಿಂದ ಏಳಲು ಸಹಾಯ ಮಾಡುವುದನ್ನು ಕಾಣಬಹುದು.

ಆದ್ದರಿಂದ, ವೈರಲ್ ವಿಡಿಯೋವನ್ನು ಸಣ್ಣ ಕ್ಲಿಪ್ ಮಾಡಿ ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ಕುರ್ಚಿಯಿಂದ ಕೆಳಗಿಳಿಸುವ ಮೂಲಕ ಅವಮಾನಿಸಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಕೇಂದ್ರದಲ್ಲಿ ಕಾಂಗ್ರೆಸ್ ತನ್ನ ಸರ್ಕಾರವನ್ನು ಕಳೆದುಕೊಂಡಾಗಿನಿಂದ ಹೊಸ ಎಐಸಿಸಿ ಪ್ರಧಾನ ಕಚೇರಿಯ ನಿರ್ಮಾಣವು ಹಣದ ಕೊರತೆ ಯಿಂದ ಹಲವಾರು ವರ್ಷಗಳ ಕಾಲ ವಿಳಂಬವಾಯಿತು. ಸದ್ಯ ಇಂದಿರಾ ಭವನ ಪಕ್ಷ ಮತ್ತು ಅದರ ನಾಯಕರ ಹೆಚ್ಚುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಆಡಳಿತಾತ್ಮಕ, ಸಾಂಸ್ಥಿಕ ಮತ್ತು ಕಾರ್ಯತಂತ್ರದ ಕಾರ್ಯಗಳನ್ನು ಬೆಂಬಲಿಸಲು ಇದು ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ