ಗ್ರಾಹಕರಿಗೆ ಒಳ್ಳೆ ಸುದ್ದಿ; ಭಾರತದಾದ್ಯಂತ ಅಮುಲ್ ಹಾಲಿನ ಪ್ಯಾಕ್ ಬೆಲೆ ಲೀಟರ್‌ಗೆ 1 ರೂ. ಕಡಿತ
ಅಮುಲ್ ಗೋಲ್ಡ್, ಅಮುಲ್ ತಾಜಾ ಹಾಲು, 1 ಕೆ.ಜಿ ಅಮುಲ್ ಟೀ ಸ್ಪೆಷಲ್ ಬೆಲೆ ಕಡಿಮೆಯಾಗಲಿದೆ. ಅಮುಲ್ ಉತ್ಪನ್ನಗಳ ಬೆಲೆ ಕುಸಿತವು 1 ಲೀಟರ್ ಪ್ಯಾಕ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಇದಕ್ಕೂ ಮೊದಲು, 2024ರ ಜೂನ್ ತಿಂಗಳಲ್ಲಿ ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಿತ್ತು. ಇದೀಗ 1 ರೂ. ಕಡಿತಗೊಳಿಸಲಾಗಿದೆ.
ನವದೆಹಲಿ: ಅಮುಲ್ ತನ್ನ 1 ಲೀಟರ್ ಪ್ಯಾಕ್‌ಗಳಾದ ಗೋಲ್ಡ್, ತಾಜಾ ಮತ್ತು ಟೀ ಸ್ಪೆಷಲ್ ಹಾಲಿನ ಬೆಲೆಯನ್ನು 1 ರೂ. ಕಡಿಮೆ ಮಾಡಿದೆ. ಈ ಕಡಿತವು 1 ಲೀಟರ್ ಪ್ಯಾಕ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಕಳೆದ ವರ್ಷ ಜೂನ್‌ನಲ್ಲಿ ಅಮುಲ್ ತನ್ನ ಎಲ್ಲಾ ಮಾದರಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಿತ್ತು. ಇದೀಗ ಅಮುಲ್ ಹಾಲಿನ ಪ್ಯಾಕ್ಗಳ ಬೆಲೆ ಲೀಟರ್‌ಗೆ 1 ರೂ. ಕಡಿಮೆಯಾಗಿರುವುದನ್ನು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ (GCMMF) ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಘೋಷಿಸಿದ್ದಾರೆ. ಈ ಹೊಸ ಬೆಲೆಗಳು ತಕ್ಷಣದಿಂದ ಜಾರಿಗೆ ಬರುತ್ತವೆ.
ಅಮುಲ್ ಹಾಲಿನ ಬೆಲೆ ಬದಲಾವಣೆಯ ನಂತರ, 1 ಲೀಟರ್ ಅಮುಲ್ ಗೋಲ್ಡ್ ಹಾಲಿನ ಪೌಚ್‌ನ ಬೆಲೆ 66 ರೂ.ಗಳಿಂದ 65 ರೂ.ಗಳಿಗೆ ಇಳಿಯಲಿದೆ. 1 ಲೀಟರ್ ಅಮುಲ್ ಟೀ ಸ್ಪೆಷಲ್ ಹಾಲಿನ ಪೌಚ್‌ನ ಬೆಲೆ 62 ರೂ.ಗಳಿಂದ 61 ರೂ.ಗಳಿಗೆ ಇಳಿಯಲಿದೆ. ಅದೇ ರೀತಿ, ಅಮುಲ್ ತಾಜಾ ಹಾಲಿನ ದರವನ್ನು ಲೀಟರ್‌ಗೆ 54 ರೂ.ಗಳಿಂದ 53 ರೂ.ಗಳಿಗೆ ಇಳಿಸಲಾಗುವುದು.
ಇದನ್ನೂ ಓದಿ: ಸಂಕ್ರಾಂತಿ ಬಳಿಕ ಜನರ ಕೈ ಸುಡಲಿದೆ ನಂದಿನಿ ಹಾಲಿನ ದರ: 5 ರೂ. ಏರಿಕೆ ಸಾಧ್ಯತೆ
ಈ ಮೊದಲು 2024ರ ಜೂನ್ ತಿಂಗಳಲ್ಲಿ ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿತ್ತು. ಅಮುಲ್ ಹಾಲಿನ ಬೆಲೆಯನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಿದ ನಂತರ ಮದರ್ ಡೈರಿ ಕೂಡ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು.
Amul has reduced the price of milk by Re 1 in Amul Gold, Amul Taza and Amul Tea Special 1 kg pack: Gujarat Co-operative Milk Marketing Federation’s Managing Director Jayen Mehta
(File photo) pic.twitter.com/MoxCCB4ljS
— ANI (@ANI) January 24, 2025
ಹಾಲಿನ ಬೆಲೆಗಳನ್ನು ಕಡಿಮೆ ಮಾಡುವ ಅಮುಲ್ ನಿರ್ಧಾರವು ಇತರ ಡೈರಿ ಕಂಪನಿಗಳು ಕೂಡ ಇದನ್ನು ಅನುಸರಿಸುವಂತೆ ಪ್ರಭಾವ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ದೇಶಾದ್ಯಂತ ಹಾಲಿನ ಬೆಲೆಗಳಲ್ಲಿ ವ್ಯಾಪಕ ಕಡಿತಕ್ಕೆ ಕಾರಣವಾಗಬಹುದು. ಬೆಲೆ ಕಡಿತವು ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆಷಲ್‌ನ 1-ಲೀಟರ್ ಪೌಚ್‌ಗಳಿಗೆ ಅನ್ವಯಿಸುತ್ತದೆ. ಪ್ರತಿಯೊಂದೂ 1 ರೂ. ಕಡಿತವನ್ನು ಕಾಣುತ್ತಿದೆ. ಈ ಕ್ರಮವು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Amul Price hike: ಅಮುಲ್ ದರ ಏರಿಕೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
“ಅಮುಲ್ ಗೋಲ್ಡ್, ಅಮುಲ್ ತಾಜಾ ಮತ್ತು ಅಮುಲ್ ಟೀ ಸ್ಪೆಷಲ್ 1 ಕೆ.ಜಿ ಪ್ಯಾಕ್‌ಗಳಲ್ಲಿ ಹಾಲಿನ ಬೆಲೆಯನ್ನು 1 ರೂ. ಕಡಿಮೆ ಮಾಡಿದೆ” ಎಂದು ಅಮುಲ್ ಅನ್ನು ನಡೆಸುವ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್‌ನ ಎಂಡಿ ಜಯೆನ್ ಮೆಹ್ತಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Fri, 24 January 25