Amul Price hike: ಅಮುಲ್ ದರ ಏರಿಕೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

ಅಮುಲ್​ ಬ್ರ್ಯಾಂಡ್​ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್​​ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಅಮುಲ್​ ಕಂಪನಿಯ ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್​ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಈ ಬೆಲೆ ಏರಿಕೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ಜಿಸಿಎಂಎಂಎಫ್​ ತಿಳಿಸಿದೆ.

Amul Price hike: ಅಮುಲ್ ದರ ಏರಿಕೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಅಮುಲ್​
Follow us
ವಿವೇಕ ಬಿರಾದಾರ
|

Updated on:Jun 03, 2024 | 7:23 AM

ನವದೆಹಲಿ, ಜೂನ್​. 03: ದೇಶದ ಗಮನ ಲೋಕಸಭೆ ಚುನಾವಣೆ (Lok Sabha Election) ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ಅಮುಲ್​ ಕಂಪನಿ (Amul Company) ಇಂದಿನಿಂದಲೇ (ಜೂ. 03 ಸೋಮವಾರ) ಜಾರಿಗೆ ಬರುವಂತೆ ಎಲ್ಲ ರೀತಿಯ ಹಾಲಿನ (Milk) ಬೆಲೆಯನ್ನು ಲೀಟರ್​ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಈ ಕುರಿತು ಗುಜರಾತ್​​ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್​ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ಈ ಬೆಲೆ ಏರಿಕೆ ಅಮುಲ್​ ಗೋಲ್ಡ್​, ಅಮುಲ್​ ತಾಜಾ ಮತ್ತು ಅಮುಲ್​ ಶಕ್ತಿ ಅಂಗ ಉತ್ಪನ್ನಗಳಿಗೂ ಅನ್ವಯವಾಗಲಿದೆ. ಆದರೆ ಈ ಬೆಲೆ ಏರಿಕೆ ಅಮುಲ್​ ತಾಜಾದ ಸಣ್ಣ ಪಾಕೇಟ್​​ನ ಅನ್ವಯವಾಗುವುದಿಲ್ಲವೆಂದು ಜಿಸಿಎಂಎಂಎಫ್​​ ಹೇಳಿದೆ. ಪ್ರತಿ ಲೀಟರ್​ಗೆ 2 ರೂ. ಹೆಚ್ಚಳದೊಂದಿಗೆ ದರ ಶೇ 3-4ರಷ್ಟು ಅಧಿಕವಾಗಲಿದೆ.

ಈ ಬಗ್ಗೆ ಅಮುಲ್​ ಬ್ರ್ಯಾಂಡ್​ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್​ನ ಎಂಡಿ ಜಯೇನ್​ ಮೆಹ್ತಾ ಮಾತನಾಡಿ, ಹೆಚ್ಚಿದ ಉತ್ಪಾದಾನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.

ಪರಿಷ್ಕೃತ ದರ ಹೀಗಿದೆ

500 ಎಂಎಲ್​ನ ಅಮುಲ್​ ಗೋಲ್ಡ್​ ಬೆಲೆ 33ರೂ.ಗೆ ಆಗಿದೆ. ಒಂದು ಲೀಟರ್​ಗೆ 64 ರೂ. ನಿಂದ 66 ರೂ.ಗೆ ಆಗಿದೆ.

500 ಎಂಎಲ್​ನ ಅಮುಲ್​ ಎಮ್ಮೆಯ ಹಾಲಿನ ದರ 36 ರೂ.ಗೆ ಆಗಿದೆ.

500 ಎಂಎಲ್​ನ ಅಮುಲ್​ ಶಕ್ತಿ ಹಾಲಿನ ಬೆಲೆ 30ರೂ. ಆಗಿದೆ.

ಜೆಸಿಎಂಎಂಎಫ್​ ಕೊನೆಯ ಬಾರಿಗೆ ಹಾಲಿನ ಬೆಲೆಯನ್ನು 2023ರ ಫೆಬ್ರವರಿಯಲ್ಲಿ ಹೆಚ್ಚಿಸಿತ್ತು.

ನಂದಿನಿ ಹಾಲಿನ ದರ

ನಂದಿನಿ ಹಾಲಿನ ದರವನ್ನು ಕೆಎಂಎಫ್​​​ ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರತಿ ಲೀಟರ್​ಗೆ 3 ರೂ. ಹೆಚ್ಚಳ ಮಾಡಿತ್ತು. ಬೆಲೆ ಏರಿಕೆ ನಂತರ ಲೀಟರ್‌ ಟೋನ್ಡ್ ಹಾಲಿಗೆ 42 ರೂ., ಹೋಮೋಜೆನೈಸ್ಡ್ ಹಾಲಿಗೆ 43 ರೂ., ಪಾಶ್ಚರೀಕರಿಸಿದ ಹಾಲಿಗೆ 46 ರೂ. ಮತ್ತು ಶುಭಂ ವಿಶೇಷ ಹಾಲಿಗೆ 48 ರೂ. ಆಗಿದೆ. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 am, Mon, 3 June 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ