Fact Check: ಮದ್ಯ ಮಾರಾಟ ಮಾಡಲು ಆಧಾರ್ ಕಾರ್ಡ್ ಲಿಂಕ್; ರತನ್ ಟಾಟಾ ಹೇಳಿದ್ದಾರೆ ಎನ್ನುವ ಹೇಳಿಕೆ ಫೇಕ್

|

Updated on: Jun 10, 2023 | 8:56 PM

ಯಾರು ಆಲ್ಕೋಹಾಲನ್ನು ಹಣಕೊಟ್ಟು ಕೊಳ್ಳಬಲ್ಲರೋ ಅವರು ಆಹಾರವನ್ನು ಸಹ ಹಣಕೊಟ್ಟು ಕೊಳ್ಳಬಲ್ಲರು. ಅವರಿಗೆ ನಾವು ಆಹಾರವನ್ನು ಉಚಿತವಾಗಿ ಹೀಗೆ ನೀಡುತ್ತಲೇ ಹೋದರೆ ಅವರು ಹೀಗೆ ಹಣಕೊಟ್ಟು ಕುಡಿಯುತ್ತಲೇ ಇರುತ್ತಾರೆ ಎಂದು ರತನ್ ಟಾಟಾ ಹೇಳಿದ್ದಾರೆ ಎನ್ನಲಾಗುವ ವೈರಲ್ ಪೋಸ್ಟ್ ಫೇಕ್.

Fact Check: ಮದ್ಯ ಮಾರಾಟ ಮಾಡಲು ಆಧಾರ್ ಕಾರ್ಡ್ ಲಿಂಕ್; ರತನ್ ಟಾಟಾ ಹೇಳಿದ್ದಾರೆ ಎನ್ನುವ ಹೇಳಿಕೆ ಫೇಕ್
ವೈರಲ್ ಪೋಸ್ಟ್ ಫೇಕ್
Follow us on

ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ (Ratan Tata) ಅವರು ಮದ್ಯ ಮಾರಾಟಕ್ಕೆ(Alcohol sale) ಆಧಾರ್ ಕಾರ್ಡ್‌ಗೆ (Aadhar cards)ಲಿಂಕ್ ಮಾಡಬೇಕೆಂದು ಹೇಳಿದ್ದಾರೆ ಎನ್ನುವ ಪೋಸ್ಟ್ ಈಗ ಮತ್ತೆ ವೈರಲ್ ಆಗಿದೆ. ಎರಡು ವರ್ಷಗಳ ಹಿಂದೆಯೂ ಈ ಪೋಸ್ಟ್ ವೈರಲ್ ಆಗಿತ್ತು. ‘ಮದ್ಯವನ್ನು ಆಧಾರ್ ಕಾರ್ಡಿನ ಮೂಲಕವೇ ವಿಕ್ರಯಿಸಬೇಕು. ಯಾರು ಮದ್ಯವನ್ನು ಕೊಳ್ಳುತ್ತಾರೋ ಅವರಿಗೆ ಸರ್ಕಾರ ನೀಡುವ ಸವಲತ್ತು ಹಾಗೂ ಸಬ್ಸಿಡಿಗಳನ್ನು ರದ್ದು ಪಡಿಸಬೇಕು.ಯಾರು ಆಲ್ಕೋಹಾಲನ್ನು ಹಣಕೊಟ್ಟು ಕೊಳ್ಳಬಲ್ಲರೋ ಅವರು ಆಹಾರವನ್ನು ಸಹ ಹಣಕೊಟ್ಟು ಕೊಳ್ಳಬಲ್ಲರು. ಅವರಿಗೆ ನಾವು ಆಹಾರವನ್ನು ಉಚಿತವಾಗಿ ಹೀಗೆ ನೀಡುತ್ತಲೇ ಹೋದರೆ ಅವರು ಹೀಗೆ ಹಣಕೊಟ್ಟು ಕುಡಿಯುತ್ತಲೇ ಇರುತ್ತಾರೆ’ ಎಂದು ರತನ್ ಟಾಟಾ ಹೇಳಿರುವುದಾಗಿ ಅವರ ಫೋಟೊದಿಂದಿಗೆ ಕನ್ನಡದಲ್ಲಿ ಬರೆದಿರುವ ಬರಹ ಸಾಮಾಜಿಕ ಮಾಧ್ಯಗಳಲ್ಲಿ ಶೇರ್ ಆಗುತ್ತಿದೆ.

ಎರಡು ವರ್ಷಗಳ ಹಿಂದೆ ಇದೇ ಪೋಸ್ಟ್ ಇಂಗ್ಲಿಷ್ ನಲ್ಲಿ ಹರಿದಾಡಿತ್ತು. ಆಗ ಬೂಮ್​​ಲೈವ್  ಆ ಪೋಸ್ಟ್​​ನ ಫ್ಯಾಕ್ಟ್ ಚೆಕ್ ಮಾಡಿ ವೈರಲ್ ಪೋಸ್ಟ್ ಸುಳ್ಳು ಎಂದಿತ್ತು.

ಫ್ಯಾಕ್ಟ್ ಚೆಕ್

ಆದರೆ ನಾನು ಈ ರೀತಿ ಹೇಳಿಲ್ಲ ಎಂದು ಟಾಟಾ ಅವರೇ ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿದ್ದಾರೆ. ಇದನ್ನು ನಾನು ಹೇಳಿಲ್ಲ. ಧನ್ಯವಾದಗಳು ಎಂದು ರತನ್ ಟಾಟಾ ಅವರು ವೈರಲ್ ಪೋಸ್ಟ್ ನ ಸ್ಕ್ರೀನ್ ಶಾಟ್ ನ್ನು ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ.

ಇನ್​​ಸ್ಟಾಗ್ರಾಮ್​​ನಲ್ಲಿ ರತನ್ ಟಾಟಾ ಸ್ಟೋರಿ

ಈ ಹಿಂದೆಯೂ ಟಾಟಾ ಹೇಳಿದ್ದಾರೆ ಎನ್ನಲಾಗುವ ಪೋಸ್ಟ್ ಗಳು ವೈರಲ್ ಆಗಿತ್ತು. ಟಾಟಾ ಗ್ರೂಪ್ ಆಫ್ ಕಂಪನಿಗಳು ಇನ್ನು ಮುಂದೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವುದಿಲ್ಲ ಎಂಬ ಸುಳ್ಳು ಸುದ್ದಿಯೂ ವೈರಲ್ ಆಗಿತ್ತು.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ