Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರ, ಉದ್ಯಮ, ಲೋಕೋಪಕಾರದ ಟೈಟಾನ್: ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ರತನ್ ಟಾಟಾ

ರತನ್ ಎನ್ ಟಾಟಾ ಅವರು 1991 ರಿಂದ ಡಿಸೆಂಬರ್ 28, 2012 ರಂದು ತಮ್ಮ ನಿವೃತ್ತಿಯ ತನಕ ಟಾಟಾ ಗ್ರೂಪ್​ನ ಕಂಪನಿಯಾದ ಟಾಟಾ ಸನ್ಸ್‌ ಕಂಪನಿಯ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್​ನ ಆದಾಯವು 2011-12 ರಲ್ಲಿ $ 100 ಶತಕೋಟಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಿತು. ಭಾರತ ಸರ್ಕಾರವು 2008 ರಲ್ಲಿ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ರತನ್ ಟಾಟಾ ಅವರಿಗೆ ನೀಡಿ ಗೌರವಿಸಿತು.

ವ್ಯಾಪಾರ, ಉದ್ಯಮ, ಲೋಕೋಪಕಾರದ ಟೈಟಾನ್: ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ರತನ್ ಟಾಟಾ
ರತನ್ ಟಾಟಾ ಅವರು ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿದರುImage Credit source: ET Now Digital
Follow us
ನಯನಾ ಎಸ್​ಪಿ
|

Updated on: Apr 25, 2023 | 12:27 PM

ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ (Ratan Tata) ಅವರು ಭಾರತದಲ್ಲಿ ಮಾತ್ರ ವ್ಯಾಪಾರ, ಉದ್ಯಮ ಮತ್ತು ಲೋಕೋಪಕಾರದ ಕ್ಷೇತ್ರಗಳಲ್ಲಿ ಪ್ರಚಂಡ ಅಲ್ಲ, ಅವರ ಕೊಡುಗೆಗಳು ಇತರ ದೇಶಗಳಲ್ಲಿಯೂ ಸಹ ಪ್ರಭಾವ ಬೀರಿದೆ. 85 ವರ್ಷ ವಯಸ್ಸಿನ ಕೈಗಾರಿಕೋದ್ಯಮಿಯ (Industrialist) ಕೆಲಸವನ್ನು ಆಚರಿಸಲು, ಆಸ್ಟ್ರೇಲಿಯಾ ಸರ್ಕಾರವು ರತನ್ ಟಾಟಾ ಅವರಿಗೆ ತಮ್ಮ ಅತ್ಯುನ್ನತ ನಾಗರಿಕ ಗೌರವ – ಆರ್ಡರ್ ಆಫ್ ಆಸ್ಟ್ರೇಲಿಯಾವನ್ನು (Order of Australia) ನೀಡಿ ಗೌರವಿಸಿದೆ. ಈ ಸಮಾರಂಭದ ಚಿತ್ರಗಳನ್ನು ಭಾರತದಲ್ಲಿನ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ’ಫಾರೆಲ್ ( Barry O’ Farrell) ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

“ರತನ್ ಟಾಟಾ ಅವರು ಉದ್ಯಮ, ಕ್ಯೆಗಾರಿಕೆ ಮತ್ತು ಲೋಕೋಪಕಾರದ ಟೈಟನ್ ಆಗಿದ್ದಾರೆ, ಆದರೆ ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿಯೂ ಗಮನಾರ್ಹ ಪ್ರಭಾವ ಬೀರಿವೆ. ಆಸ್ಟ್ರೇಲಿಯ-ಭಾರತ ಸಂಬಂಧಕ್ಕೆ ರತನ್ ಟಾಟಾ ಅವರ ದೀರ್ಘಕಾಲದ ಬದ್ಧತೆಯನ್ನು ಗುರುತಿಸಿ ಆರ್ಡರ್ ಆಫ್ ಆಸ್ಟ್ರೇಲಿಯ (ಎಒ) ಗೌರವವನ್ನು ನೀಡಲು ಸಂತೋಷವಾಗಿದೆ” ಎಂದು ಫಾರೆಲ್ ಹೇಳಿದರು.

ಕೇವಲ ಒಂದು ತಿಂಗಳ ಹಿಂದೆ ಆಸ್ಟ್ರೇಲಿಯಾ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ, ವಿಶೇಷವಾಗಿ ವ್ಯಾಪಾರ, ಹೂಡಿಕೆ ಮತ್ತು ಲೋಕೋಪಕಾರದ ವಿಶಿಷ್ಟ ಸೇವೆಗಾಗಿ ಆರ್ಡರ್ ಆಫ್ ಆಸ್ಟ್ರೇಲಿಯಾ (AO) ಜನರಲ್ ವಿಭಾಗದಲ್ಲಿ ಗೌರವ ಅಧಿಕಾರಿಯಾಗಿ ರತನ್ ಟಾಟಾ ನೇಮಕ ಮಾಡಲಾಗಿತ್ತು.

“ಭಾರತದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ರತನ್ ಟಾಟಾ ಅವರ ಕೊಡುಗೆಯ ವಿಸ್ತಾರವು ಅವರ ವ್ಯವಹಾರಗಳ ನೈತಿಕ ನಡವಳಿಕೆ ಮತ್ತು ದತ್ತಿ ಉದ್ದೇಶಗಳಿಗೆ ಅವರ ಬೆಂಬಲದೊಂದಿಗೆ ಹೊಂದಾಣಿಕೆಯಾಗುತ್ತದೆ” ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.

ಇದನ್ನೂ ಓದಿ: ಮೋದಿಯವರ ಮನ್​ ಕಿ ಬಾತ್ ಸಮಾಜದ ಮೇಲೆ ಬೀರಿದ ಪ್ರಭಾವದ ವಿಶ್ಲೇಷಣೆ ಆಧಾರಿತ ಪುಸ್ತಕ ಬಿಡುಗಡೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕೈಗಾರಿಕೋದ್ಯಮಿಗೆ ಆರ್‌ಎಸ್‌ಎಸ್-ಸಂಯೋಜಿತ ಸೇವಾ ಭಾರತಿಯು ಲೋಕೋಪಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ‘ಸೇವಾ ರತ್ನ’ ಪ್ರಶಸ್ತಿಯನ್ನು ನೀಡಿತು. “ಸಾಮಾಜಿಕ ಕಾರ್ಯಗಳಲ್ಲಿ ಅಮೂಲ್ಯ ಕೊಡುಗೆ ಅಥವಾ ಸಾಮಾಜಿಕ ಅಭಿವೃದ್ಧಿಗೆ ನಿಧಿಯನ್ನು ಒದಗಿಸಿದ” ಆಧಾರದ ಮೇಲೆ ಪ್ರತಿಷ್ಠಿತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಸೇವಾ ಭಾರತಿ ಪ್ರಕಟಣೆಯಲ್ಲಿ ತಿಳಿಸಿದೆ.

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ