Collective Spirit Concrete Action: ಮೋದಿಯವರ ಮನ್​ ಕಿ ಬಾತ್ ಸಮಾಜದ ಮೇಲೆ ಬೀರಿದ ಪ್ರಭಾವದ ವಿಶ್ಲೇಷಣೆ ಆಧಾರಿತ ಪುಸ್ತಕ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ನಡೆಸಿಕೊಡುವ ಮನ್​ ಕಿ ಬಾತ್​ ಕಾರ್ಯಕ್ರಮವು 99ನೇ ಸಂಚಿಕೆಯನ್ನು ಮುಗಿಸಿದ್ದು, ಇದೀಗ 100ನೇ ಸಂಚಿಕೆಗೆ ಸಿದ್ಧತೆ ನಡೆಸಿದೆ.

Collective Spirit Concrete Action: ಮೋದಿಯವರ  ಮನ್​ ಕಿ ಬಾತ್ ಸಮಾಜದ ಮೇಲೆ ಬೀರಿದ ಪ್ರಭಾವದ ವಿಶ್ಲೇಷಣೆ ಆಧಾರಿತ ಪುಸ್ತಕ ಬಿಡುಗಡೆ
ಮನ್ ಕಿ ಬಾತ್
Follow us
ನಯನಾ ರಾಜೀವ್
|

Updated on: Apr 25, 2023 | 12:17 PM

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ನಡೆಸಿಕೊಡುವ ಮನ್​ ಕಿ ಬಾತ್​ ಕಾರ್ಯಕ್ರಮವು 99ನೇ ಸಂಚಿಕೆಯನ್ನು ಮುಗಿಸಿದ್ದು, ಇದೀಗ 100ನೇ ಸಂಚಿಕೆಗೆ ಸಿದ್ಧತೆ ನಡೆಸಿದೆ. ಈ ಹೊತ್ತಿನಲ್ಲಿ ಈ ಮನ್​ ಕಿ ಬಾತ್ ಕಾರ್ಯಕ್ರಮವು ಸಮಾಜದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎಂದು ವಿಶ್ಲೇಷಿಸಿರುವ ಪ್ರಸಾರ್ ಭಾರತಿ ಮಾಜಿ ಸಿಇಒ ಶಶಿ ಶೇಖರ್ ಬರೆದಿರುವ ‘ಕಲೆಕ್ಟೀವ್ ಸ್ಪಿರಿಟ್, ಕಾಂಕ್ರೀಟ್ ಆಕ್ಷನ್’(Collective Spirit Concrete Action) ಎಂಬ ಪುಸ್ತಕವನ್ನು ಹೊರತರುತ್ತಿದ್ದಾರೆ.

ಸರ್ವೆ ವರದಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿಯುತ ಮತ್ತು ನಿರ್ಣಾಯಕ ನಾಯಕತ್ವ, ಕೇಳುಗರೊಂದಿಗೆ ಭಾವನಾತ್ಮಕ ಸಂಪರ್ಕ, ಕೇಳುಗರಿಂದ ಜನಪ್ರಿಯತೆಗೆ ಕಾರಣವೆಂದು ಉಲ್ಲೇಖಿಸಲಾಗಿದೆ. ಅಲ್ಲದೇ ಮನ್ ಕಿ ಬಾತ್ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ, 60% ಜನರು ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದಾರೆ, 73% ಜನರು ದೇಶವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾಗಿ ವರದಿ ಹೇಳಿದೆ.

ಮತ್ತಷ್ಟು ಓದಿ: Mann Ki Baat@100: ಪ್ರಧಾನಿ ಮೋದಿ 100ನೇ ಮನ್​ ಕಿ ಬಾತ್​​ಗೆ ಗದಗಿನ ಕಾಂವೇಂಶ್ರಿಗೆ ಆಹ್ವಾನ

100 ನೇ ಸಂಚಿಕೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೆಡಿಯೋ ಕಾರ್ಯಕ್ರಮವು ಬರೋಬ್ಬರಿ ದೇಶದ 100 ಕೋಟಿ ಕೇಳುಗರನ್ನು ತಲುಪಿದೆ ಎಂದು IIM ಸಮೀಕ್ಷಾ ವರದಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರ 100ನೇ ಮನಕೀ ಬಾತ್​​ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

ಅಲ್ಲದೇ ಅನೇಕ ಗಣ್ಯಾತಿ ಗಣ್ಯರು ಕೂಡಾ ಭಾಗಿಯಾಗಲಿದ್ದು, ಇವರೊಂದಿಗೆ ನಾನು ಕೂಡ ಕಾರ್ಯಕ್ರಮದ ಭಾಗವಾಗುತ್ತಿರುವುದು ಸಂತಸ ತಂದಿದೆ ಎಂದು ಕಾವೇಂಶ್ರೀ ಅವರು ಹೇಳಿದ್ದಾರೆ.

ಕಾವೇಂಶ್ರೀಯವರು ಏಪ್ರಿಲ್ 26 ರಂದು ‘ಮನ್ ಕಿ ಬಾತ್@100’ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮರುದಿನ ಏಪ್ರಿಲ್ 27 ರಂದು ಕರ್ತವ್ಯ ಪಥ, ರಾಷ್ಟ್ರಪತಿ ಭವನ ಮತ್ತು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 28 ರಂದು ಕೆಂಪು ಕೋಟೆ, ರಾಜ್‌ ಘಾಟ್​ ಮತ್ತು ಮಹಾತ್ಮಾ ಗಾಂಧಿ ಮ್ಯೂಸಿಯಂ ವೀಕ್ಷಿಸುತ್ತಾರೆ. ಏಪ್ರಿಲ್ 29 ರಂದು ಬೆಂಗಳೂರಿಗೆ ಮರಳಲಿದ್ದಾರೆ.

ಇನ್ನು ಮನ್​ಕಿ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ಕೇಳಿಸಿಕೊಳ್ಳಲು ಈ 7 ಜನ ಅತಿಥಿಗಳನ್ನು ರಾಜಭವನಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಲೆ ಮತ್ತು ಸಂಸ್ಕೃತಿಯ ರಕ್ಷಣೆಗೋಸ್ಕರ 1996 ಕಾವೇಂಶ್ರೀ ಅವರು ಕಲಾ ಚೇತನ ವೇದಿಕೆಯನ್ನು ಸ್ಥಾಪಿಸಿದರು. ಕಳೆದ 26 ವರ್ಷಗಳಿಂದ ಈ ವೇದಿಕೆ ಮುಖಾಂತರ ತಪೋ ಸದೃಶ ಕೊಡುಗೆ ನೀಡುತ್ತಿದ್ದಾರೆ. ಈ ಕಾಲಾ ಚೇತನ 2022ರ ನವೆಂಬರ್‌ನಲ್ಲಿ 25 ವರ್ಷ ಪೂರೈಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ