Narendra Modi: ಕೇರಳದ ಮಹಾನ್ ವ್ಯಕ್ತಿಗಳು ಯುವಕರಿಗೆ ಸ್ಫೂರ್ತಿಯಾಗಬೇಕು: ನರೇಂದ್ರ ಮೋದಿ

ದೇಶದ ಭರವಸೆ ಯುವಕರಲ್ಲಿದೆ. ಬಿಜೆಪಿ ಮತ್ತು ಯುವಕರ ದೃಷ್ಟಿಕೋನ ಒಂದೇ. ಬಿಜೆಪಿ ಯುವಕರಿಗೆ ಅವಕಾಶ ನೀಡಿದೆ. ಬಿಜೆಪಿ ಸೃಷ್ಟಿಸಿರುವ ಬದಲಾವಣೆ ಯುವಕರಿಗೆ ಅನುಕೂಲವಾಗಲಿದೆ. ಕೇರಳ ಸರಕಾರ ಯುವಕರನ್ನು ಕಡೆಗಣಿಸಿದೆ. ಉದ್ಯೋಗ ಮೇಳ ನಡೆಸಲು ಕೇರಳ ಹಿಂದೇಟು ಹಾಕುತ್ತಿದೆ

Narendra Modi: ಕೇರಳದ ಮಹಾನ್ ವ್ಯಕ್ತಿಗಳು ಯುವಕರಿಗೆ ಸ್ಫೂರ್ತಿಯಾಗಬೇಕು: ನರೇಂದ್ರ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Apr 25, 2023 | 4:26 PM

ಕೊಚ್ಚಿ: ಇತ್ತೀಚೆಗೆ ಕೇರಳದ (Kerala) 99 ವರ್ಷದ ಯುವಕರೊಬ್ಬರನ್ನು ಭೇಟಿ ಮಾಡಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಕೊಚ್ಚಿಯಲ್ಲಿ ನಡೆದ ಯುವಂ-23 (Yuvam 2023) ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಪ್ರಮುಖ ಗಾಂಧಿವಾದಿ ವಿ.ಪಿ ಅಪ್ಪುಕುಟ್ಟನ್ ಪೊದುವಾಳ್ ಅವರನ್ನು 99ರ ಹರೆಯದ ಯುವಕ ಎಂದು ಹೇಳಿದ್ದಾರೆ.ಪ್ರಿಯ ಮಲಯಾಳಿ ಯುವ ಸುಹುರ್ತುಕ್ಕಳೇ ನಮಸ್ಕಾರಂ (‘ನನ್ನ ಪ್ರೀತಿಯ ಮಲಯಾಳಿ ಯುವ ಗೆಳೆಯರಿಗೆ ನಮಸ್ಕಾರಗಳು’) ಎಂದು ಮಲಯಾಳಂನಲ್ಲಿ ಹೇಳುತ್ತಾ ಮೋದಿ ಭಾಷಣ ಆರಂಭಿಸಿದ್ದಾರೆ.. ಕೇರಳವನ್ನು ಪರಿವರ್ತಿಸಲು ಮುಂದೆ ಬಂದ ಯುವಕ ಯುವತಿಯರಿಗೆ ಅಭಿನಂದನೆಗಳು. ಯುವಕ ಯುವತಿಯರ ಶಕ್ತಿ ಒಗ್ಗೂಡಿದಾಗ ಯಾವುದೇ ಕಾರ್ಯಾಚರಣೆ ಯಶಸ್ವಿಯಾಗುತ್ತದೆ. ದೇಶ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು 75ನೇ ವರ್ಷ ಆಚರಿಸುತ್ತಿರುವಾಗ ಇಲ್ಲಿಗೆ ಬಂದಿರುವುದು ಸಂತೋಷ ತಂದಿದೆ. ನಾನು ಕೆಲವು ವಾರಗಳ ಹಿಂದೆ ಕೇರಳದ 99 ವರ್ಷದ ಯುವಕರನ್ನು ಭೇಟಿಯಾಗಿದ್ದೆ.ಅವರೇ ಗಾಂಧಿವಾದಿ ವಿ.ಪಿ. ಅಪ್ಪುಕುಟ್ಟ ಪೊದುವಾಳ್.ಬಿಜೆಪಿ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿತು ಎಂದು ಮೋದಿ ಹೇಳಿದ್ದಾರೆ.

ಕಳರಿಪಯಟ್ಟ್ ಗುರು ಎಸ್.ಆರ್.ಡಿ. ಪ್ರಸಾದ್‌ನಿಂದ ಹಿಡಿದು ಚೆರುವಯಲ್ ರಾಮನ್‌ವರೆಗೆ ಪ್ರತಿಯೊಬ್ಬ ಪ್ರತಿಭಾವಂತರಿಂದ ಕಲಿಯುವುದು ಬಹಳಷ್ಟಿದೆ. ನಂಬಿ ನಾರಾಯಣರಿಂದ ಸ್ಫೂರ್ತಿ ಪಡೆದ ಅನೇಕ ಯುವಕರು ಇದ್ದಾರೆ ಎಂದು ಮೋದಿ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿದ ಮೋದಿ ಕೇರಳದ ಮಹಾನ್ ವ್ಯಕ್ತಿಗಳು ಯುವಕರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು. ಆದಿ ಶಂಕರನ್, ಶ್ರೀ ನಾರಾಯಣ ಗುರುಗಳನ್ನೂ ಮೋದಿ ಸ್ಮರಿಸಿದ್ದಾರೆ.

ದೇಶದ ಭರವಸೆ ಯುವಕರಲ್ಲಿದೆ. ಬಿಜೆಪಿ ಮತ್ತು ಯುವಕರ ದೃಷ್ಟಿಕೋನ ಒಂದೇ. ಬಿಜೆಪಿ ಯುವಕರಿಗೆ ಅವಕಾಶ ನೀಡಿದೆ. ಬಿಜೆಪಿ ಸೃಷ್ಟಿಸಿರುವ ಬದಲಾವಣೆ ಯುವಕರಿಗೆ ಅನುಕೂಲವಾಗಲಿದೆ. ಕೇರಳ ಸರಕಾರ ಯುವಕರನ್ನು ಕಡೆಗಣಿಸಿದೆ. ಉದ್ಯೋಗ ಮೇಳ ನಡೆಸಲು ಕೇರಳ ಹಿಂದೇಟು ಹಾಕುತ್ತಿದೆ. ಆದರೆ, ಬಿಜೆಪಿ ಆಡಳಿತವಿರುವಲ್ಲೆಲ್ಲ ಉದ್ಯೋಗ ಮೇಳ ನಡೆಯುತ್ತಿತ್ತು. ಬಿಜೆಪಿ ಸರಕಾರದಿಂದ ಅನೇಕ ಪ್ರತಿಭಾವಂತರನ್ನು ಸನ್ಮಾನಿಸಲಾಗಿದೆ. ಹಿಂದಿನ ಆಡಳಿತಗಾರರು ಹಗರಣ ಮಾಡಿದ್ದಾರೆ ಎಂದು ಪ್ರಧಾನಿ ಆರೋಪಿಸಿದ್ದಾರೆ.

ಕೇರಳಕ್ಕೆ ಬರುವಾಗ ವಿಶೇಷ ಶಕ್ತಿ ಬರುತ್ತದೆ. ಜಿ20 ಸಭೆ ನಡೆದಾಗ ಕೇರಳಿಗರು ಮಿಂಚಿದ್ದರು. ರಾಜ್ಯದ ಮೂಲಸೌಕರ್ಯವನ್ನು ಇನ್ನಷ್ಟು ಸುಧಾರಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಈ ಶತಮಾನ ಭಾರತದ್ದಾಗಿದೆ ಎಂದು ಹೇಳಿದ ಪ್ರಧಾನಿ, ಭಾರತವು ಜಗತ್ತನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ದೇಶವಾಗಿದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ಬಿಜೆಪಿಯ ಹಿರಿಯ ನಾಯಕರಾದ ಅನಿಲ್ ಆಂಟನಿ, ನಟಿಯರಾದ ಅಪರ್ಣಾ ಬಾಲಮುರಳಿ ಮತ್ತು ನವ್ಯಾ ನಾಯರ್, ಗಾಯಕರಾದ ವಿಜಯ್ ಯೇಸುದಾಸ್ ಮತ್ತು ಹರಿಶಂಕರ್ ಮತ್ತು ನಟರಾದ ಉಣ್ಣಿ ಮುಕುಂದನ್ ಮತ್ತು ಸುರೇಶ್ ಗೋಪಿ ಕೂಡ ಪ್ರಧಾನಿ ಜೊತೆ ವೇದಿಕೆಯಲ್ಲಿ ಆಸೀನರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:38 pm, Mon, 24 April 23

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ