AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂಕೋರ್ಟಿನ ಐವರು ನ್ಯಾಯಾಧೀಶರಿಗೆ ಅನಾರೋಗ್ಯ, ಶೀಘ್ರದಲ್ಲೇ ಉಳಿದಿರುವ ಪ್ರಕರಣಗಳ ವಿಚಾರಣೆ: ಮುಖ್ಯ ನ್ಯಾಯಮೂರ್ತಿ

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ, ಪೀಠದಲ್ಲಿರುವ ಕೆಲವು ನ್ಯಾಯಾಧೀಶರು ಕೋವಿಡ್ ಸೋಂಕಿಗೆ ಒಳಗಾಗಿರುವ ಕಾರಣ ಏಪ್ರಿಲ್ 24ಕ್ಕೆ ನಿಗದಿಯಾಗಿದ್ದ ವಿಚಾರಣೆಯನ್ನು ರದ್ದುಗೊಳಿಸಿದೆ.

ಸುಪ್ರೀಂಕೋರ್ಟಿನ ಐವರು ನ್ಯಾಯಾಧೀಶರಿಗೆ ಅನಾರೋಗ್ಯ, ಶೀಘ್ರದಲ್ಲೇ ಉಳಿದಿರುವ ಪ್ರಕರಣಗಳ ವಿಚಾರಣೆ: ಮುಖ್ಯ ನ್ಯಾಯಮೂರ್ತಿ
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 24, 2023 | 8:13 PM

ದೆಹಲಿ: ಸುಪ್ರೀಂಕೋರ್ಟ್‌ನ (Supreme Court) ಐವರು ನ್ಯಾಯಾಧೀಶರ ಆರೋಗ್ಯ ಸರಿ ಇಲ್ಲ ಎಂದು ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಹೇಳಿದ್ದು, ಪ್ರಕರಣಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಮಾಡಲಾಗುವುದು ಎಂದು ವಕೀಲರಿಗೆ ಭರವಸೆ ನೀಡಿದ್ದಾರೆ. ತಮ್ಮ ಪ್ರಕರಣಗಳ ಆರಂಭಿಕ ಅಥವಾ ತುರ್ತು ವಿಚಾರಣೆ ಕೋರುತ್ತಿರುವ ವಕೀಲರ ಪ್ರಸ್ತಾಪವನ್ನು ಆಲಿಸಿದ ಸಿಜೆಐ, ಕೆಲವು ನ್ಯಾಯಾಧೀಶರು ಲಭ್ಯವಿಲ್ಲದ ಕಾರಣ ಇಂದಿನ ದಿನಾಂಕಗಳನ್ನು ನೀಡಲಾದ ಪ್ರಕರಣಗಳನ್ನು ಮುಚ್ಚಿಹಾಕಲಾಗುವುದಿಲ್ಲ ಎಂದು ಹೇಳಿದರು.  ನಾವು ಇಂದು ಪ್ರಕರಣಗಳಿಗೆ ಕೆಲವು ದಿನಾಂಕಗಳನ್ನು ನೀಡಿದ್ದೇವೆ. ನ್ಯಾಯಾಧೀಶರು ಲಭ್ಯವಿಲ್ಲದ ಕಾರಣ ಪ್ರಕರಣಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಬಾರ್‌ನ ಸದಸ್ಯರಿಗೆ ಭರವಸೆ ನೀಡಬಹುದು. ಐವರು ನ್ಯಾಯಾಧೀಶರು ಅಸ್ವಸ್ಥರಾಗಿದ್ದಾರೆ. ನಾವು ಅವುಗಳನ್ನು ಮುಂದಿನ ಲಭ್ಯವಿರುವ ದಿನಾಂಕ ಅಥವಾ ಮುಂದಿನ ಇತರ ದಿನಾಂಕದಂದು ವಿಚಾರಣೆ ನಡೆಸುತ್ತೇವೆ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ, ಪೀಠದಲ್ಲಿರುವ ಕೆಲವು ನ್ಯಾಯಾಧೀಶರು ಕೋವಿಡ್ ಸೋಂಕಿಗೆ ಒಳಗಾಗಿರುವ ಕಾರಣ ಏಪ್ರಿಲ್ 24ಕ್ಕೆ ನಿಗದಿಯಾಗಿದ್ದ ವಿಚಾರಣೆಯನ್ನು ರದ್ದುಗೊಳಿಸಿದೆ.

ಭಾರತೀಯ ಸಂವಿಧಾನದ ಮೂಲ ರಚನೆ ಸಿದ್ಧಾಂತವನ್ನು ಸ್ಥಾಪಿಸಿದ ಸುಪ್ರೀಂಕೋರ್ಟ್‌ನ ಐತಿಹಾಸಿಕ ಕೇಶವಾನಂದ ಭಾರತಿ ತೀರ್ಪಿನ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, 13 ನ್ಯಾಯಾಧೀಶರ ಪೀಠದ 13 ಅಭಿಪ್ರಾಯಗಳನ್ನು ಒಳಗೊಂಡಿರುವ ವಿಶೇಷ ವೆಬ್ ಪುಟವನ್ನು ಸುಪ್ರೀಂಕೋರ್ಟ್ ರಚಿಸಿದೆ ಎಂದು ಸಿಜೆಐ ಘೋಷಿಸಿದರು.

7 ರಲ್ಲಿ 6 ರ ಬಹುಮತದಿಂದ, ಏಪ್ರಿಲ್ 24, 1973 ರಂದು ಕೇಶವಾನಂದ ಭಾರತಿ ಅವರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಮೂಲ ರಚನೆಯನ್ನು ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಗುವುದಿಲ್ಲ ಎಂದು ತೀರ್ಪು ನೀಡಿತು.

ಇದನ್ನೂ ಓದಿ: PM Narendra Modi: ಎಲ್ಲ ಸಮುದಾಯ ಗೌರವಿಸುವ ಗುಣಕ್ಕೆ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಧಾರ್ಮಿಕ ಮುಖಂಡರು

ನ್ಯಾಯಾಧೀಶರ ಎಲ್ಲಾ 13 ಅಭಿಪ್ರಾಯಗಳು, ವಕೀಲರು ನೀಡಿದ ಲಿಖಿತ ಸಲ್ಲಿಕೆಗಳು ಮತ್ತು ಏಪ್ರಿಲ್ 24, 1973 ರಂದು ಕೇಶವಾನಂದ ಭಾರತಿ ತೀರ್ಪಿಗೆ ಸಂಬಂಧಿಸಿದ ದಾಖಲೆಗಳನ್ನು ಒಳಗೊಂಡಿರುವವೆಬ್ ಪುಟವನ್ನು ನಾವು ರಚಿಸಿದ್ದೇವೆ ಎಂದು ಸಿಜೆಐ ಚಂದ್ರಚೂಡ್ ವಕೀಲರಿಗೆ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Mon, 24 April 23

ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್