Same-sex marriage hearing: ಸಲಿಂಗ ಸಂಬಂಧ ಎಂಬುದು ಕೇವಲ ದೈಹಿಕ ಮಾತ್ರವಲ್ಲ: ಸಿಜೆಐ ಡಿವೈ ಚಂದ್ರಚೂಡ್

ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಹೇಳುವ ಮೂಲಕ ನಾವು ಒಂದೇ ಲಿಂಗಕ್ಕೆ ಸೇರಿದ ಇಬ್ಬರು ವಯಸ್ಕರ ಸಂಬಂಧವನ್ನು ಗುರುತಿಸುವುದು ಮಾತ್ರವಲ್ಲದೆ, ಒಂದೇ ಲಿಂಗಕ್ಕೆ ಸೇರಿದವರ ನಡುವಿನ ಸಂಬಂಧವು ಸ್ಥಿರವಾಗಿಯೂ ಇರುತ್ತದೆ ಎಂಬುದನ್ನು ಕಂಡುಕೊಂಡಿದ್ದೇವೆ

Same-sex marriage hearing: ಸಲಿಂಗ ಸಂಬಂಧ ಎಂಬುದು ಕೇವಲ ದೈಹಿಕ ಮಾತ್ರವಲ್ಲ: ಸಿಜೆಐ ಡಿವೈ ಚಂದ್ರಚೂಡ್
ಸುಪ್ರೀಂಕೋರ್ಟ್ ವಿಚಾರಣೆ
Follow us
|

Updated on: Apr 20, 2023 | 3:41 PM

ದೆಹಲಿ: ಸಲಿಂಗ ವಿವಾಹವನ್ನು (same-sex marriages) ಕಾನೂನುಬದ್ಧಗೊಳಿಸುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ (Supreme Court) ಗುರುವಾರ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Chief Justice DY Chandrachud) ಅವರು ವಿವಾಹಕ್ಕೆ ಎರಡು ಲಿಂಗಕ್ಕೆ ಸೇರಿದ ಇಬ್ಬರು ಸಂಗಾತಿಗಳು ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ. ನಾವು ಈ ಸಲಿಂಗ ಸಂಬಂಧಗಳನ್ನು ಕೇವಲ ದೈಹಿಕ ಸಂಬಂಧಗಳಾಗಿ ನೋಡುತ್ತೇವೆ ಆದರೆ ಅಲ್ಲಿ ಹೆಚ್ಚು ಸ್ಥಿರವಾದ, ಭಾವನಾತ್ಮಕ ಸಂಬಂಧವೂ ಇರುತ್ತದೆ ಎಂದು ಸಲಿಂಗ ವಿವಾಹ ಮಾನ್ಯತೆ ವಿಚಾರದಲ್ಲಿ ಐವರು ನ್ಯಾಯಾಧೀಶರ ಪೀಠ ನಡೆಸುವ ವಿಚಾರಣೆಯ ಮೂರನೇ ದಿನ ನ್ಯಾಯಮೂರ್ತಿ ಚಂದ್ರಚೂಡ್ ಈ ರೀತಿ ಹೇಳಿದ್ದಾರೆ. ನ್ಯಾಯಾಲಯದ ವೆಬ್‌ಸೈಟ್ ಮತ್ತು ಯುಟ್ಯೂಬ್ ನಲ್ಲಿ ವಿಚಾರಣೆ ನೇರ ಪ್ರಸಾರವಾಗಿದೆ. ಸಲಿಂಗ ವಿವಾಹವನ್ನು ಕಾನೂನಾತ್ಮಕವಾಗಿ ಮಾಡುವುದಕ್ಕೆ ನಾವು ಮದುವೆಯ ಕಲ್ಪನೆಯನ್ನು ಮರುವ್ಯಾಖ್ಯಾನಿಸಬೇಕು. ಮದುವೆಯಾಗುವುದಕ್ಕೆ ಎರಡು ಭಿನ್ನ ಲಿಂಗಕ್ಕೆ ಸೇರಿದವರು ಅಗತ್ಯವೇ ಎಂದು ಸಿಜೆಐ ಕೇಳಿದ್ದಾರೆ.

1954 ರಲ್ಲಿ ವಿಶೇಷ ವಿವಾಹ ಕಾಯ್ದೆ ಜಾರಿಗೆ ಬಂದ ನಂತರ ಕಳೆದ 69 ವರ್ಷಗಳಲ್ಲಿ ಕಾನೂನು ಗಮನಾರ್ಹವಾಗಿ ವಿಕಸನಗೊಂಡಿದೆ. ಇದು ಅವರ ವೈಯಕ್ತಿಕ ಕಾನೂನುಗಳನ್ನು ಅನುಸರಿಸಲು ಇಷ್ಟಪಡದ ಜನರಿಗೆ ನಾಗರಿಕ ವಿವಾಹದ ರೂಪವನ್ನು ಒದಗಿಸಿದೆ. ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಹೇಳುವ ಮೂಲಕ ನಾವು ಒಂದೇ ಲಿಂಗಕ್ಕೆ ಸೇರಿದ ಇಬ್ಬರು ವಯಸ್ಕರ ಸಂಬಂಧವನ್ನು ಗುರುತಿಸುವುದು ಮಾತ್ರವಲ್ಲದೆ, ಒಂದೇ ಲಿಂಗಕ್ಕೆ ಸೇರಿದವರ ನಡುವಿನ ಸಂಬಂಧವು ಸ್ಥಿರವಾಗಿಯೂ ಇರುತ್ತದೆ ಎಂಬುದನ್ನು ಕಂಡುಕೊಂಡಿದ್ದೇವೆ ಎಂದು 2018ರ ಐತಿಹಾಸಿಕ ಆದೇಶವನ್ನು ಉಲ್ಲೇಖಿಸಿ ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

ಆದಾಗ್ಯೂ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರದ ವಿರೋಧದ ನಡುವೆಯೇ ಸಿಜೆಐ ಈ ರೀತಿ ಹೇಳಿದ್ದಾರೆ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕಾಗಿ ಬೇಡಿಕೆ ಸಲ್ಲಿಸಿದ ಅರ್ಜಿಗಳನ್ನು ನಗರದ ಗಣ್ಯರ ದೃಷ್ಟಿಕೋನ ಎಂದು ಹೇಳಿದ್ದು, ಈ ವಿಚಾರವನ್ನು ಚರ್ಚಿಸಲು ಸಂಸತ್ ಸರಿಯಾದ ವೇದಿಕೆ ಎಂದು ಹೇಳಿದೆ.

ಕೆಲವೊಂದು ಗೇ-ದಂಪತಿಗಳು ಸೇರಿದಂತೆ ಸಲಿಂಗ ವಿವಾಹದ ಮಾನ್ಯತೆಗಾಗಿ ಸಲ್ಲಿಸಿದ ಮೇಲ್ಮನವಿಯನ್ನು ವಿರೋಧಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ,ಸಲಿಂಗ ವಿವಾಹವು ಭಾರತದಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಇರುವ ಕುಟುಂಬ ಕಲ್ಪನೆಯಿಂದ ವ್ಯತಿರಿಕ್ತವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಸಂಶೋಧನೆ: ತಾಪಮಾನ ಏರಿಕೆಯಿಂದ ಭಾರತದ 90 ಪ್ರತಿಶತದಷ್ಟು ಜನರ ಮೇಲೆ ತೀವ್ರ ಪರಿಣಾಮ

ಕೇವಲ ನಗರ ಗಣ್ಯರ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವ ಅರ್ಜಿಗಳನ್ನು ಸೂಕ್ತ ಶಾಸಕಾಂಗದೊಂದಿಗೆ ಹೋಲಿಸಲಾಗುವುದಿಲ್ಲ. ಇದು ವಿಶಾಲ ವ್ಯಾಪ್ತಿಯ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶಾದ್ಯಂತ ವಿಸ್ತರಿಸುತ್ತದೆ ಎಂದು ಸರ್ಕಾರ ಭಾನುವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಕನಿಷ್ಠ 15 ಮೇಲ್ಮನವಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕಾನೂನು ಮಾನ್ಯತೆ ಇಲ್ಲದೆ, ಅನೇಕ ಸಲಿಂಗ ದಂಪತಿಗಳು ವೈದ್ಯಕೀಯ ಒಪ್ಪಿಗೆ, ಪಿಂಚಣಿ, ದತ್ತು ಅಥವಾ ಕ್ಲಬ್ ಸದಸ್ಯತ್ವಗಳಿಗೆ ಸಂಬಂಧಿಸಿರುವ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?