Acid Attack: ಮದುವೆ ಮಂಟಪದಲ್ಲಿ ಘೋರ: ವಧು-ವರ ಸೇರಿದಂತೆ 12 ಮಂದಿ ಮೇಲೆ ಆಸಿಡ್‌ ಎರಚಿದ ದುಷ್ಕರ್ಮಿಗಳು!

Chhattisgarh Crime: ಮದುವೆ ಸಮಾರಂಭದಲ್ಲಿ ಕರೆಂಟ್ ಹೋದಾಗ ಅಸಿಡ್​ ದಾಳಿ ಮಾಡಿದ್ದು ಯಾರು, ಜೊತೆಗೆ ಯಾಕಾಗಿ ಆಸಿಡ್ ಸುರಿದರು ಎಂಬುದೂ ಸದ್ಯಕ್ಕೆ ಗೊತ್ತಾಗಿಲ್ಲ.

Acid Attack: ಮದುವೆ ಮಂಟಪದಲ್ಲಿ ಘೋರ: ವಧು-ವರ ಸೇರಿದಂತೆ 12 ಮಂದಿ ಮೇಲೆ ಆಸಿಡ್‌ ಎರಚಿದ ದುಷ್ಕರ್ಮಿಗಳು!
ವಧು-ವರ ಸೇರಿದಂತೆ 12 ಮಂದಿ ಮೇಲೆ ಆಸಿಡ್‌ ದಾಳಿ
Follow us
|

Updated on: Apr 20, 2023 | 2:02 PM

ಛತ್ತೀಸ್‌ಗಢ್ ರಾಜ್ಯದಲ್ಲಿ ಮದುವೆ ಮಂಟಪದಲ್ಲಿ ಘೋರ ಘಟನೆ ಸಂಭವಿಸಿದೆ. ದುಷ್ಕರ್ಮಿಗಳು ವಧು-ವರ ( Bride- Bridegroom) ಇಬ್ಬರ ಮೇಲೆಯೂ ಆಸಿಡ್‌ ಹಾಕಿ (Acid Attack) ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಭಾವಿ ದಂಪತಿಯಿಬ್ಬರು, ಇಬ್ಬರು ಮಕ್ಕಳು ಸೇರಿದಂತೆ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಛತ್ತೀಸ್‌ಗಢ್ ಪೊಲೀಸರು (Chhattisgarh Crime) ನೀಡಿರುವ ವಿವರಗಳ ಪ್ರಕಾರ…

ಸ್ತರ್ ಜಿಲ್ಲೆಯ ಛೋಟೆ ಅಮಾಬಲ್ ಗ್ರಾಮದಲ್ಲಿ ಸುಧಾಪಾಲ್ ನಿವಾಸಿ ದಮ್ರು ಬಾಘೇಲ್ (23), ಸುನೀತಾ ಕಶ್ಯಪ್ (19) ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಅಷ್ಟರಲ್ಲಿ ಇದ್ದಿಕ್ಕಿದ್ದಂತೆ ಕರೆಂಟ್ ಹೋಯಿತು. ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವೇದಿಕೆಯೇರಿ ವಧು ವರರ ಮೇಲೆ ಆಸಿಡ್ ಹಾಕಿದ್ದಾನೆ. ಆಸಿಡ್ ವಧು ವರರಷ್ಟೇ ಅಲ್ಲದೆ ಅವರ ಜೊತೆಯಲ್ಲಿ ಪಕ್ಕದಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 12 ಮಂದಿಯ ಮೇಲೆ ಸಹ ಆಸಿಡ್​ ಎರಚಿದ್ದಾರೆ. ಇದರಿಂದ ಮದುವೆ ಮಂಟಪದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಒಂಟಿತನ ಕಾಡುತ್ತಿದೆ ಎಂದು ಆಸ್ಪತ್ರೆಯಿಂದ ಮಗು ಕಳ್ಳತನ, 600 ಸಿಸಿಟಿವಿ ಪರಿಶೀಲನೆ ಬಳಿಕ ಸಿಕ್ಕ ಕಳ್ಳಿ

ಮಾಹಿತಿ ಪಡೆದ ಪೊಲೀಸರು ಘಟನೆಯ ಸ್ಥಳವನ್ನು ತಲುಪಿ ಸಂತ್ರಸ್ತರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಕರೆಂಟ್ ಹೋದ ಸಮಯದಲ್ಲಿ ಈ ದಾಳಿ ನಡೆದಾಗ ಅಸಿಡ್​ ದಾಳಿ ಮಾಡಿದ್ದು ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಜೊತೆಗೆ ಯಾಕಾಗಿ ಆಸಿಡ್ ಸುರಿದರು ಎಂಬುದೂ ಸದ್ಯಕ್ಕೆ ಗೊತ್ತಾಗಿಲ್ಲ. ಭಾನ್‌ಪುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ