Sign In

By signing in or creating an account, you agree with Associated Broadcasting Company's Terms & Conditions and Privacy Policy.

Mann Ki Baat@100: ಪ್ರಧಾನಿ ಮೋದಿ 100ನೇ ಮನ್​ ಕಿ ಬಾತ್​​ಗೆ ಗದಗಿನ ಕಾಂವೇಂಶ್ರಿಗೆ ಆಹ್ವಾನ

ಗದಗಿನ ಕಲಾ ಚೇತನದ ಅಧ್ಯಕ್ಷ ಕಾವೇಂಶ್ರೀ ಅವರನ್ನು ಏಪ್ರಿಲ್ ಕೊನೆಯ ವಾರದಲ್ಲಿ ನಡೆಯುವ ಪ್ರಧಾನಿ ಮೋದಿಯವರ 100ನೇ ಮನ್‌ಕಿ ಬಾತ್‌ನ ವಿಶೇಷ ಕಾರ್ಯಕ್ರಮಕ್ಕೆ ಪ್ರಸಾರ ಭಾರತಿ ಆಹ್ವಾನಿಸಿದೆ.

Mann Ki Baat@100: ಪ್ರಧಾನಿ ಮೋದಿ 100ನೇ ಮನ್​ ಕಿ ಬಾತ್​​ಗೆ ಗದಗಿನ ಕಾಂವೇಂಶ್ರಿಗೆ ಆಹ್ವಾನ
ಕಾವೇಂಶ್ರೀ
Follow us
ವಿವೇಕ ಬಿರಾದಾರ
|

Updated on:Apr 23, 2023 | 10:42 AM

ಗದಗ: ಕಲೆ ಮತ್ತು ಸಂಸ್ಕೃತಿಯ ರಕ್ಷಣೆಗೋಸ್ಕರ ಎರಡು ದಶಕಗಳಿಮದ ಶ್ರಮಿಸುತ್ತಿರುವ ಗದಗ (Gadag) ಜಿಲ್ಲೆಯ ಕಾವೇಂಶ್ರೀ (Kavemshri) (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) 96ನೇ ಮನ್‌ಕಿ ಬಾತ್‌ನಲ್ಲಿ ಶ್ಲಾಘಿಸಿದ್ದರು. ಇದೀಗ ಕಲಾ ಚೇತನದ ಅಧ್ಯಕ್ಷ ಕಾವೇಂಶ್ರೀ ಅವರನ್ನು ಏಪ್ರಿಲ್ 30ರಂದು ನಡೆಯುವ ಪ್ರಧಾನಿ ಮೋದಿಯವರ 100ನೇ ಮನ್‌ಕಿ ಬಾತ್‌ (Mann Ki Baat@100) ನ ವಿಶೇಷ ಕಾರ್ಯಕ್ರಮಕ್ಕೆ ಪ್ರಸಾರ ಭಾರತಿ (Prasar Bharati) ಆಹ್ವಾನಿಸಿದೆ. ಕರ್ನಾಟಕದಿಂದ ಆಹ್ವಾನಿಸಲಾದ 7 ಜನ ಅತಿಥಿಗಳಲ್ಲಿ ಕಾವೇಂಶ್ರೀ ಕೂಡ ಒಬ್ಬರಾಗಿದ್ದಾರೆ ಎಂದು ಖಾಸಗಿ ಸದ್ದಿ ಸಂಸ್ಥೆ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರ 100ನೇ ಮನಕೀ ಬಾತ್​​ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೇ ಅನೇಕ ಗಣ್ಯಾತಿ ಗಣ್ಯರು ಕೂಡಾ ಭಾಗಿಯಾಗಲಿದ್ದು, ಇವರೊಂದಿಗೆ ನಾನು ಕೂಡ ಕಾರ್ಯಕ್ರಮದ ಭಾಗವಾಗುತ್ತಿರುವುದು ಸಂತಸ ತಂದಿದೆ ಎಂದು ಕಾವೇಂಶ್ರೀ ಅವರು ಹೇಳಿದ್ದಾರೆ.

ಕಾವೇಂಶ್ರೀಯವರು ಏಪ್ರಿಲ್ 26 ರಂದು ‘ಮನ್ ಕಿ ಬಾತ್@100’ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮರುದಿನ ಏಪ್ರಿಲ್ 27 ರಂದು ಕರ್ತವ್ಯ ಪಥ, ರಾಷ್ಟ್ರಪತಿ ಭವನ ಮತ್ತು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 28 ರಂದು ಕೆಂಪು ಕೋಟೆ, ರಾಜ್‌ ಘಾಟ್​ ಮತ್ತು ಮಹಾತ್ಮಾ ಗಾಂಧಿ ಮ್ಯೂಸಿಯಂ ವೀಕ್ಷಿಸುತ್ತಾರೆ. ಏಪ್ರಿಲ್ 29 ರಂದು ಬೆಂಗಳೂರಿಗೆ ಮರಳಲಿದ್ದಾರೆ. ಇನ್ನು ಮನ್​ಕಿ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ಕೇಳಿಸಿಕೊಳ್ಳಲು ಈ 7 ಜನ ಅತಿಥಿಗಳನ್ನು ರಾಜಭವನಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗದಗದಲ್ಲಿ ಅರಳಿದ ಕಲಾಚೇತನ; ಕಾವೆಂಶ್ರೀ ಎಂಬ ಹೋಟೆಲ್ ಉದ್ಯಮಿಯ ಕಲಾಸೇವೆಯ ಯಶೋಗಾಥೆಗೆ ನಮೋ

ಕಲೆ ಮತ್ತು ಸಂಸ್ಕೃತಿಯ ರಕ್ಷಣೆಗೋಸ್ಕರ 1996 ಕಾವೇಂಶ್ರೀ ಅವರು ಕಲಾ ಚೇತನ ವೇದಿಕೆಯನ್ನು ಸ್ಥಾಪಿಸಿದರು. ಕಳೆದ 26 ವರ್ಷಗಳಿಂದ ಈ ವೇದಿಕೆ ಮುಖಾಂತರ ತಪೋ ಸದೃಶ ಕೊಡುಗೆ ನೀಡುತ್ತಿದ್ದಾರೆ. ಈ ಕಾಲಾ ಚೇತನ 2022ರ ನವೆಂಬರ್‌ನಲ್ಲಿ 25 ವರ್ಷ ಪೂರೈಸಿತು.

ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಕಾವೇಂಶ್ರೀ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, 25 ವರ್ಷಗಳ ಅವರ ಸೇವೆ ಅವಿಸ್ಮರಣೀಯ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ತಮ್ಮ ಕಲಾ ಚೇತಕ್ಕೆ ಆಹ್ವಾನಿಸಿದ್ದಾರೆ. ಅವರು ಮಾಡಿದ ಸೇವೆ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಅವರು 2022 ರ ಡಿಸೆಂಬರ್ 25ರ ಮನ್ ಕಿ ಬಾತ್‌ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ಪ್ರಧಾನಮಂತ್ರಿಯವರ ಮೆಚ್ಚುಗೆಗೆ ಪಾತ್ರರಾಗಿರುವುದು ಮತ್ತು ಪ್ರಸಾರ ಭಾರತಿ 100ನೇ ಮನ್​ ಕಿ ಬಾತ್​ಗೆ  ಆಹ್ವಾನಿಸಿರುವುದು ನನ್ನ ಅದೃಷ್ಟ. ಅಕಾಡೆಮಿಯ ಚಟುವಟಿಕೆಗಳನ್ನು ಬೆಂಬಲಿಸಿದ ಗದಗನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರಿಗೆ ನಾನು ಈ ಗೌರವವನ್ನು ಅರ್ಪಿಸುತ್ತೇನೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಿದ ನನ್ನ ಹಿತೈಷಿಗಳು, ಸ್ನೇಹಿತರು ಮತ್ತು ಗದಗಿನ ಸಾರ್ವಜನಿಕರಿಗೆ ಚಿರ ಋಣಿಯಾಗಿರುತ್ತೇನೆ ಎಂದು ಕಾವೇಂಶ್ರೀ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Sun, 23 April 23

ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ