Fact Check ಸಂವಿಧಾನದ ಪೀಠಿಕೆಯ ಹಿಂಭಾಗದ ಖಾಲಿ ಪುಟ ಓದುತ್ತಿರುವ ಅಮಿತ್ ಶಾ; ವೈರಲ್ ಚಿತ್ರದ ಸತ್ಯಾಸತ್ಯತೆ ಏನು?

| Updated By: ರಶ್ಮಿ ಕಲ್ಲಕಟ್ಟ

Updated on: Nov 29, 2021 | 6:34 PM

ಸಂವಿಧಾನದ ಪೀಠಿಕೆ ಮುದ್ರಿತವಾಗಿರುವ ಕರಪತ್ರವು ಕ್ರಮವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪಠ್ಯದೊಂದಿಗೆ ಎರಡು ಬದಿಗಳನ್ನು ಹೊಂದಿದೆ. ಅಮಿತ್ ಶಾ ಹಿಂದಿಯಲ್ಲಿರುವ ಪೀಠಿಕೆಯನ್ನು ಓದುತ್ತಿದ್ದರು.

Fact Check ಸಂವಿಧಾನದ ಪೀಠಿಕೆಯ ಹಿಂಭಾಗದ ಖಾಲಿ ಪುಟ ಓದುತ್ತಿರುವ ಅಮಿತ್ ಶಾ; ವೈರಲ್ ಚಿತ್ರದ ಸತ್ಯಾಸತ್ಯತೆ ಏನು?
ಅಮಿತ್ ಶಾ ಅವರ ವೈರಲ್ ಚಿತ್ರ
Follow us on

ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah)  ಸಂವಿಧಾನದ ಪೀಠಿಕೆಯ (Preamble) ಹಿಂಭಾಗದ ಖಾಲಿ ಪುಟ ಓದುತ್ತಿದ್ದಾರೆ ಎಂದು ಹೇಳುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ (Saket Gokhale) ಅಮಿತ್ ಶಾ ಅವರ ಚಿತ್ರವನ್ನು ಟ್ವೀಟ್ ಮಾಡಿ, “ಅಮಿತ್ ಶಾ ಅವರೇ, ಕನಿಷ್ಠ ಮುದ್ರಿತ ಪೀಠಿಕೆಯ ಸರಿಯಾದ ಭಾಗವನ್ನು ಓದುವಂತೆ ನಟಿಸಿ ಮತ್ತು ಹಿಂಬದಿಯ ಖಾಲಿ ಭಾಗವನ್ನು ಅಲ್ಲ ಎಂದಿದ್ದರು. ಹಲವಾರು ಫೇಸ್​​ಬುಕ್ ಬಳಕೆದಾರರು ಇದೇ ಚಿತ್ರವನ್ನು ಪೋಸ್ಟ್ ಮಾಡಿ ನಗೆಯಾಡಿದ್ದಾರೆ.

ಫ್ಯಾಕ್ಟ್ ಚೆಕ್
ಈ ವೈರಲ್ ಚಿತ್ರದ ಫ್ಯಾಕ್ಟ್ ಚೆಕ್ ಮಾಡಿದ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ನವೆಂಬರ್ 26 ರಂದು ಸಂಸತ್ತಿನಲ್ಲಿ ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ತೆಗೆದ ಚಿತ್ರ ಇದು ಎಂದು ಪತ್ತೆ ಹಚ್ಚಿದೆ. ಸಂವಿಧಾನದ ಪೀಠಿಕೆ ಮುದ್ರಿತವಾಗಿರುವ ಕರಪತ್ರವು ಕ್ರಮವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪಠ್ಯದೊಂದಿಗೆ ಎರಡು ಬದಿಗಳನ್ನು ಹೊಂದಿದೆ. ಅಮಿತ್ ಶಾ ಹಿಂದಿಯಲ್ಲಿರುವ ಪೀಠಿಕೆಯನ್ನು ಓದುತ್ತಿದ್ದರು.ನವೆಂಬರ್ 26 ರಂದು, ಸಂವಿಧಾನ ದಿನವನ್ನು ಸಂಸತ್ತಿನಲ್ಲಿ ಆಚರಿಸಲಾಯಿತು, ಅಲ್ಲಿ ಸದಸ್ಯರು ಭಾರತದ ರಾಷ್ಟ್ರಪತಿಗಳ ನಂತರ ಸಂವಿಧಾನದ ಪೀಠಿಕೆ ಓದಿದರು. “ಸಂಸದ್ ಟಿವಿ” ಯ ಯುಟ್ಯೂಬ್ ಚಾನಲ್‌ನಲ್ಲಿ ಈ ಕಾರ್ಯಕ್ರಮದ ಸಂಪೂರ್ಣ ವಿಡಿಯೊ ಇದೆ.

ಈ ವಿಡಿಯೊದಲ್ಲಿ 1 ಗಂಟೆ 20 ನಿಮಿಷಗಳ ನಂತರ,ಸದಸ್ಯರು ಎದ್ದುನಿಂತು ರಾಷ್ಟ್ರಪತಿಗಳ ನಂತರ ಪೀಠಿಕೆಯನ್ನು ಪುನರಾವರ್ತಿಸುವುದನ್ನು ಕಾಣಬಹುದು. ಅಮಿತ್ ಶಾ, ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರಂತಹ ಸದನದ ಇತರ ಸದಸ್ಯರು ಹಿಂದಿಯಲ್ಲಿನ ಕರಪತ್ರದಿಂದ ಪೀಠಿಕೆಯನ್ನು ಓದುವುದನ್ನು ಸಹ ಕಾಣಬಹುದು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಲ್ಲಿ ಒಬ್ಬರಾದ ಬಿಜೆಡಿಯ ಹಿರಿಯ ರಾಜ್ಯಸಭಾ ಸಂಸದ ಪ್ರಸನ್ನ ಆಚಾರ್ಯ ಅವರೊಂದಿಗೆ AFWA ಮಾತನಾಡಿದೆ. “ಪೀಠಿಕೆ ಕರಪತ್ರವು ಕ್ರಮವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪಠ್ಯದೊಂದಿಗೆ ಎರಡು ಬದಿಗಳನ್ನು ಹೊಂದಿತ್ತು. ಸದಸ್ಯರು ಹಿಂದಿಯಲ್ಲಿ ಪಿಠೀಕೆ ಓದುತ್ತಿದ್ದರು. ಹಾಗಾಗಿ ಸಹಜವಾಗಿಯೇ ಅವರು ಹಿಂದಿ ಪಠ್ಯವನ್ನು ಮುದ್ರಿಸಿರುವ ಕಡೆ ನೋಡುತ್ತಿದ್ದರು,” ಎಂದು ಅವರು ಖಚಿತಪಡಿಸಿದರು.

Narendra Modi ವೆಬ್‌ಸೈಟ್‌ನಲ್ಲಿ ಸಂಸತ್​ನಲ್ಲಿ ಸಂವಿಧಾನ ದಿನಾಚರಣೆಯ ಹಲವಾರು ಚಿತ್ರಗಳನ್ನು ಪ್ರಕಟಿಸಲಾಗಿದೆ. ಒಂದು ಚಿತ್ರದಲ್ಲಿ ಪ್ರಧಾನಿಯವರು ಅಮಿತ್ ಶಾ ಅವರಂತೆಯೇ ಪೀಠಿಕೆ ಕರಪತ್ರವನ್ನು ಓದುತ್ತಿರುವುದನ್ನು ಕಾಣಬಹುದು. ಅಲ್ಲಿ ಇನ್ನೊಂದು ಬದಿಯಲ್ಲಿ ಇಂಗ್ಲಿಷ್ ಪಠ್ಯವು ಗೋಚರಿಸುತ್ತದೆ.
ಆದ್ದರಿಂದ ಮೇಲಿನ ಪುರಾವೆಗಳಿಂದ ಅಮಿತ್ ಶಾ ಅವರನ್ನು ಅಪಹಾಸ್ಯ ಮಾಡುವ ವೈರಲ್ ಹೇಳಿಕೆ ಮತ್ತು ಅವರು ಪೀಠಿಕೆಯ ಹಿಂದಿರುವ ಖಾಲಿ ಪುಟ ಓದುತ್ತಿದ್ದಾರೆ ಎಂದು ಹೇಳುವುದು ಸುಳ್ಳು ಎಂದು ನಾವು ತೀರ್ಮಾನಿಸಬಹುದು. ಅಮಿತ್ ಶಾ ಇತರ ಎಲ್ಲ ಸದಸ್ಯರಂತೆ, ವಾಸ್ತವವಾಗಿ ಪೀಠಿಕೆಯ ಹಿಂದಿ ಪಠ್ಯವನ್ನು ಓದುತ್ತಿದ್ದರು. ಆದ್ದರಿಂದ, ಕರಪತ್ರದ ಇನ್ನೊಂದು ಬದಿಯಲ್ಲಿರುವ ಇಂಗ್ಲಿಷ್ ಪಠ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಅಶಿಸ್ತು ತೋರಿದ್ದ ವಿಪಕ್ಷದ 12 ಸಂಸದರು ರಾಜ್ಯಸಭೆಯಿಂದ ಅಮಾನತು

Published On - 6:32 pm, Mon, 29 November 21