ಬೆಂಗಳೂರು: ಭಾರತೀಯ ರೈಲ್ವೆಯನ್ನು ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಖರೀದಿಸಿದೆ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. WAP 7 ರೈಲು ಎಂಜಿನ್ನ್ನು ತೋರಿಸುವ ವಿಡಿಯೊ ಇದಾಗಿದ್ದು ಇದರಲ್ಲಿ ವಡೋದರಾದ ಸ್ಟೇಷನ್ ಕೋಡ್ ಬಿಆರ್ಸಿ ಎಂದು ಇದೆ. ಈ ಎಂಜಿನ್ನ ಬದಿಯಲ್ಲಿ ಅದಾನಿ ವಿಲ್ಮರ್ ಹೆಸರು ಮತ್ತು ಸಫೋಲಾ ಗೋಧಿ ಹಿಟ್ಟಿನ ಜಾಹೀರಾತು ಕಾಣಿಸುತ್ತದೆ. ಅದಾನಿ ಗ್ರೂಪ್ ಮತ್ತು ಸಿಂಗಾಪುರದ ವಿಲ್ಮರ್ ಇಂಟರ್ ನ್ಯಾಷನಲ್ ಲಿಮಿಟೆಡ್ನ ಜಂಟಿ ವ್ಯಾಪಾರ ಸಂಸ್ಥೆಯಾಗಿದೆ. ಅಡುಗೆ ತೈಲ ಮತ್ತು ಆಹಾರ ಧಾನ್ಯಗಳು ಈ ಸಂಸ್ಥೆಯ ಉತ್ಪನ್ನಗಳು.
ದೆಹಲಿಯಲ್ಲಿ ರೈತರು ಕೇಂದ್ರದ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲಿಯೇ ಈ ವಿಡಿಯೊ ವೈರಲ್ ಆಗಿದೆ. ಅದಾನಿ ವಿಮಾನ ನಿಲ್ದಾಣ, ಅದಾನಿ ಬಂದರು, ಅದಾನಿ ಪವರ್, ಅದಾನಿ ಕಲ್ಲಿದ್ದಲು, ಅದಾನಿ ರೈಲ್ವೆ ಎಂಬ ಶೀರ್ಷಿಕೆಯೊಂದಿಗೆ ಹಲವಾರು ನೆಟ್ಟಿಗರು ಈ ವಿಡಿಯೊ ಶೇರ್ ಮಾಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಫೇಸ್ಬುಕ್ ಪುಟದಲ್ಲಿಯೂ ಇದೇ ವಿಡಿಯೊ ಶೇರ್ ಆಗಿತ್ತು. ಕಾಂಗ್ರೆಸ್ ಪಕ್ಷದ ಗುಜರಾತ್ ಘಟಕದ ಅಧ್ಯಕ್ಷ ಹಾರ್ದಿಕ್ ಪಟೇಲ್ ಈ ವಿಡಿಯೊವನ್ನು ಶೇರ್ ಮಾಡಿದ್ದರು.
भारतीय रेल पर अदानी के फ़्रेश आटे का विज्ञापन देखने लायक़ हैं। अब तो दावे के साथ कह सकते है की किसानों की लड़ाई सत्य के मार्ग पर हैं। pic.twitter.com/WB97kaG6Fe
— Hardik Patel (@HardikPatel_) December 12, 2020
ಫ್ಯಾಕ್ಟ್ ಚೆಕ್
ಈ ವೈರಲ್ ವಿಡಿಯೊದ ಫ್ಯಾಕ್ಟ್ಚೆಕ್ ಮಾಡಿದ ಬೂಮ್ ಲೈವ್, ಇದು ಲೋಕೋಮೋಟಿವ್ ಎಂಜಿನ್ನಲ್ಲಿರುವ ಜಾಹೀರಾತು ಅದು ಎಂದು ವರದಿ ಮಾಡಿದೆ. ವಿಡಿಯೊದಲ್ಲಿರುವ ಎಂಜಿನ್ ನಂಬರ್ WAP7 30502 ಆಗಿದೆ. Adani WAP 7 Engines ಎಂಬ ಕೀವರ್ಡ್ ಬಳಸಿ ಗೂಗಲಿಸಿದಾಗ ಲೋಕೋಮೋಟಿವ್ ಬ್ರಾಂಡಿಂಗ್ ಬಗ್ಗೆ ಇರುವ ಪುಟವೊಂದು ಸಿಗುತ್ತದೆ. ರೈಲ್ವೆ ಎಂಜಿನ್ಗಳ ಮೇಲೆ ಜಾಹೀರಾತು ಪ್ರದರ್ಶಿಸಿರುವುದು ಇಲ್ಲಿ ಕಾಣಿಸುತ್ತದೆ.
ಫೈನಾನ್ಶಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ವರದಿ ಪ್ರಕಾರ ವಡೋದರಲ್ಲಿ (ಪಶ್ಚಿಮ ರೈಲ್ವೆಯ ಗುಜರಾತ್ ವಿಭಾಗದಲ್ಲಿ) ಕೋಮೋಟಿವ್ ಬ್ರಾಂಡಿಂಗ್ನಿಂದ ಭಾರತೀಯ ರೈಲ್ವೆ ವಾರ್ಷಿಕ ₹73.26 ಲಕ್ಷ ಆದಾಯ ಗಳಿಸುತ್ತದೆ. 2020ರ ಫೆಬ್ರುವರಿ 27ರಂದು ಐದು WAP 7 ಲೋಕೋಮೋಟಿವ್ಗಳಲ್ಲಿ ಅದಾನಿ-ವಿಲ್ಮರ್ ಕಂಪನಿಯ ಜಾಹೀರಾತು ಪ್ರಕಟಿಸಲಾಗಿತ್ತು. The Rail Zone ಯುಟ್ಯೂಬ್ ಖಾತೆಯಲ್ಲಿರುವ ವಿಡಿಯೊದಲ್ಲಿ ಜಾಹೀರಾತುಗಳನ್ನು ಕಾಣಬಹುದು. ಅದಾನಿ ವಿಲ್ಮರ್ ವೆಬ್ಸೈಟ್ನ ಪತ್ರಿಕಾ ಪ್ರಕಟಣೆಯಲ್ಲಿಯೂ ಲೋಕೊಮೋಟಿವ್ ಎಂಜಿನ್ಗಳಲ್ಲಿನ ಜಾಹೀರಾತು ಬಗ್ಗೆ ಇದೆ.
ಸರ್ಕಾರದ ಫ್ಯಾಕ್ಟ್ ಚೆಕಿಂಗ್ ವಿಭಾಗವಾದ ಪಿಐಬಿ ಫ್ಯಾಕ್ಟ್ ಚೆಕ್ ಕೂಡಾ ವೈರಲ್ ವಿಡಿಯೊ ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿದೆ.
दावा: #फेसबुक पर एक वीडियो के साथ यह दावा किया जा रहा है कि सरकार ने भारतीय रेल पर एक निजी कंपनी का ठप्पा लगवा दिया है। #PIBFactCheck: यह दावा भ्रामक है। यह केवल एक वाणिज्यिक विज्ञापन है जिसका उद्देश्य केवल 'गैर किराया राजस्व' को बेहतर बनाना है। pic.twitter.com/vSmK8Xgdis
— PIB Fact Check (@PIBFactCheck) December 16, 2020
Fact Check | ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನ್ ಪೋಸ್ಟರ್: ವೈರಲ್ ಫೋಟೊ ಹಿಂದಿರುವ ಸತ್ಯಾಸತ್ಯತೆ ಏನು?
Published On - 8:59 pm, Wed, 16 December 20