ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಎಸ್‌ಪಿ ನಾಯಕ ಅಜಂ ಖಾನ್ ಸೇರಿ ಮಗ, ಪತ್ನಿಗೆ 7 ವರ್ಷ ಜೈಲು ಶಿಕ್ಷೆ
fake birth certificate case: ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್ ಸೇರಿದಂತೆ ಅವರ ಪತ್ನಿ ತಂಝೀಮ್ ಫಾತಿಮಾ ಮತ್ತು ಅವರ ಪುತ್ರ ಅಬ್ದುಲ್ಲಾ ಅಜಮ್ ಖಾನ್ ಅವರನ್ನು ದೋಷಿ ಎಂದು ಉತ್ತರ ಪ್ರದೇಶದ ರಾಮ್‌ಪುರದ ನ್ಯಾಯಾಲಯವು ಇಂದು (ಅ.18)ಘೋಷಿಸಿ, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಜಂ ಖಾನ್ ಅವರ ಮಗ ಅಬ್ದುಲ್ಲಾ ಅಜಮ್ ಖಾನ್ ಎರಡು ಪ್ರಮಾಣ ಪತ್ರವನ್ನು ನೀಡಿದ್ದಾರೆ ಎಂಬ ಆರೋಪವನ್ನು ಮಾಡಲಾಗಿತ್ತು.
ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಜಂ ಖಾನ್ (Azam Khan) ಸೇರಿದಂತೆ ಅವರ ಪತ್ನಿ ತಂಝೀಮ್ ಫಾತಿಮಾ ಮತ್ತು ಅವರ ಪುತ್ರ ಅಬ್ದುಲ್ಲಾ ಅಜಮ್ ಖಾನ್ ಅವರನ್ನು ದೋಷಿ ಎಂದು ಉತ್ತರ ಪ್ರದೇಶದ ರಾಮ್‌ಪುರದ ನ್ಯಾಯಾಲಯವು ಇಂದು (ಅ.18)ಘೋಷಿಸಿ, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಜಂ ಖಾನ್ ಅವರ ಮಗ ಅಬ್ದುಲ್ಲಾ ಅಜಮ್ ಖಾನ್ ಎರಡು ಪ್ರಮಾಣ ಪತ್ರವನ್ನು ನೀಡಿದ್ದಾರೆ ಎಂಬ ಆರೋಪವನ್ನು ಮಾಡಲಾಗಿತ್ತು. ಇದೀಗ ಈ ಆರೋಪ ಸಾಬೀತಾಗಿದ್ದು. 7 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡಲಾಗಿದೆ.
ಅಜಂ ಖಾನ್ ಅವರ ಮಗ ಅಬ್ದುಲ್ಲಾ ಅಜಂ ಖಾನ್ ಅವರು ಎರಡು ಜನನ ಪ್ರಮಾಣಪತ್ರ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಒಂದನ್ನು ತಾನು ವಿದೇಶಗಳಿಗೆ ಭೇಟಿ ನೀಡಲು ಪಾಸ್ಪೋರ್ಟ್ಗಾಗಿ ಬಳಸುತ್ತಿದ್ದರು. ಇನ್ನೊಂದನ್ನು ರಾಜಕೀಯ ವಿಚಾರಗಳಿಗೆ ಬಳಸಿದ್ದರು ಎಂದು ಹೇಳಲಾಗಿದೆ. ಅಬ್ದುಲ್ಲಾ ಅಜಂ ಖಾನ್ ಉತ್ತರಪ್ರದೇಶದ ವಿಧಾನಸಭೆಯಲ್ಲಿ ಸ್ಪರ್ಧಿಸಲು ಈ ಪ್ರಮಾಣ ಪತ್ರವನ್ನು ಬಳಸಿದ್ದರು ಎಂದು ಹೇಳಲಾಗಿದೆ. ಒಂದು ಜನನ ಪ್ರಮಾಣಪತ್ರವನ್ನು ರಾಂಪುರ ಪುರಸಭೆಯಿಂದ ನೀಡಲಾಗಿದೆ. ಇನ್ನೊಂದು ಲಕ್ನೋದಿಂದ ನೀಡಲಾಗಿದೆ ಎಂದು ತನಿಖೆಯಲ್ಲಿ ತಿಳಿಸಲಾಗಿದೆ.
ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ಅವರು ಅಜಂ ಖಾನ್ ಅವರ ಕುಟುಂಬದ ವಿರುದ್ಧ ನಕಲಿ ಜನನ ಪ್ರಮಾಣಪತ್ರ ನೀಡಿದ್ದಾರೆ ಎಂದು ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ರಾಮ್‌ಪುರದ ನ್ಯಾಯಾಲಯ ತೀರ್ಪು ನೀಡಿದೆ. ತನಿಖಾ ವರದಿ ಪ್ರಕಾರ ಜೂನ್ 28, 2012 ರಂದು ರಾಂಪುರ್ ನಗರ ಪಾಲಿಕಾ ನೀಡಿದ ಮೊದಲ ಜನನ ಪ್ರಮಾಣಪತ್ರದಲ್ಲಿ ಅಬ್ದುಲ್ಲಾ ಅಜಂ ಖಾನ್ ಅವರ ಜನ್ಮಸ್ಥಳ ರಾಂಪುರ ತೋರಿಸುತ್ತದೆ. ಜನವರಿ 2015ರಲ್ಲಿ, ನೀಡಲಾದ ಎರಡನೇ ಜನನ ಪ್ರಮಾಣಪತ್ರದಲ್ಲಿ ಜನ್ಮಸ್ಥಳ ಲಕ್ನೋ ಎಂದು ತೋರಿಸಿದೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ಲಾ ಅಜಂ ಖಾನ್ ಮತ್ತು ಆತನ ತಂದೆ-ತಾಯಿಯ ವಿರುದ್ಧ ಸೆಕ್ಷನ್ 420, 467, 468 ಮತ್ತು 471 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಯೋಗಿ ವಿರುದ್ಧ ಉದ್ರೇಕಕಾರಿ ಭಾಷಣ, ಅಜಂ ಖಾನ್ಗೆ 3 ವರ್ಷ ಜೈಲು ಶಿಕ್ಷೆ
ಅಜಂ ಖಾನ್ಗೆ ಸಂಕಷ್ಟದ ಮೇಲೆ ಸಂಕಷ್ಟ
ಅಜಂ ಖಾನ್ ಈ ಹಿಂದೆ ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷದ ಭಾಷಣ ಮಾಡಿದ್ದಾರೆ ಎಂದು ಶಿಕ್ಷೆ ಒಳಗಾಗಿದ್ದರು. ಈ ಪ್ರಕರಣದಲ್ಲೂ ಅವರನ್ನು ದೋಷಿ ಎಂದು ಘೋಷಣೆ ಮಾಡಲಾಗಿತ್ತು. ಇದರ ಜತೆಗೆ ಅಜಂ ಖಾನ್ ಅವರ ಮಗನ ವಿರುದ್ಧ ಭೂಕಬಳಿಕೆ ಆರೋಪವು ಕೂಡ ಇವರ ತಲೆಗೆ ಸುತ್ತಿಕೊಂಡಿತು ಎಂದು ಹೇಳಲಾಗಿದೆ. ಅಜಂ ಖಾನ್ ಮತ್ತು ಅಬ್ದುಲ್ಲಾ ಅಜಂ ಖಾನ್ ವಿರುದ್ಧ ಅನೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳಿದೆ ಎಂದು ಹೇಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ