ವಿಶ್ವಕ್ಕೆಲ್ಲಾ ಕೊರೊನಾ ಹಂಚಿದ ಚೀನಾ, ಈಗ ಭಾರತದಲ್ಲಿ ಜೈವಿಕ ವಾರ್​ ಶುರು ಮಾಡಿದೆ

ಗದಗ:ವಿಶ್ವಕ್ಕೆಲ್ಲಾ ಕೊರೊನಾ ಸೋಂಕು ಹರಡಿದ ಚೀನಾ, ಈಗ ಭಾರತದಾದ್ಯಂತ ಜೈವಿಕ ವಾರ್​ ನಡೆಸಲು ಸಂಚು ರೂಪಿಸಿದೆ. ಚೀನಾದಿಂದ ಭಾರತದ ರಾಜ್ಯಗಳಿಗೆ ನಕಲಿ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಈ ಹಿನ್ನೆಲೆಯಿಂದಾಗಿ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದ್ದು, ಅನಾಮಧೇಯರು ಮನೆಗೆ ತಂದು ಕೊಡುವ ಪಾರ್ಸೆಲ್​ಗಳನ್ನು ರೈತರು ತೆಗೆದುಕೊಳ್ಳಬಾರದೆಂದು ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಚೀನಾದಿಂದ ಸರಬರಾಜಾಗಿರುವ ಬಿತ್ತನೆ ಬೀಜಗಳಲ್ಲಿ, ಹಲವು […]

ವಿಶ್ವಕ್ಕೆಲ್ಲಾ ಕೊರೊನಾ ಹಂಚಿದ ಚೀನಾ, ಈಗ ಭಾರತದಲ್ಲಿ ಜೈವಿಕ ವಾರ್​ ಶುರು ಮಾಡಿದೆ

Updated on: Aug 25, 2020 | 11:05 AM

ಗದಗ:ವಿಶ್ವಕ್ಕೆಲ್ಲಾ ಕೊರೊನಾ ಸೋಂಕು ಹರಡಿದ ಚೀನಾ, ಈಗ ಭಾರತದಾದ್ಯಂತ ಜೈವಿಕ ವಾರ್​ ನಡೆಸಲು ಸಂಚು ರೂಪಿಸಿದೆ.

ಚೀನಾದಿಂದ ಭಾರತದ ರಾಜ್ಯಗಳಿಗೆ ನಕಲಿ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಈ ಹಿನ್ನೆಲೆಯಿಂದಾಗಿ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದ್ದು, ಅನಾಮಧೇಯರು ಮನೆಗೆ ತಂದು ಕೊಡುವ ಪಾರ್ಸೆಲ್​ಗಳನ್ನು ರೈತರು ತೆಗೆದುಕೊಳ್ಳಬಾರದೆಂದು ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.

ಚೀನಾದಿಂದ ಸರಬರಾಜಾಗಿರುವ ಬಿತ್ತನೆ ಬೀಜಗಳಲ್ಲಿ, ಹಲವು ರೀತಿಯ ವೈರಲ್ ರೋಗಗಳು ಹರಡುವ ಸಾಧ್ಯತೆಗಳಿವೆ. ಹೀಗಾಗಿ ರೈತರ ಮನೆಗೆ ಯಾವುದಾದರೂ ಅನುಮಾನಸ್ಪದ ವಸ್ತುಗಳು ಪಾರ್ಸೆಲ್ ಬಂದರೆ ಕೂಡಲೇ ರೈತರು, ಕೃಷಿ ಇಲಾಖೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೃಷಿ ಇಲಾಖೆ ಮನವಿ ಮಾಡಿದೆ.