ಕೇವಲ 160 ರೂ.ಗೆ 16 ಜಿಬಿ ಡೇಟಾ ಬಳಸ್ತಿರೋದು ದುರಂತ: AirTel Boss ಮಿತ್ತಲ್‌

ನವೆದೆಹಲಿ: ಕೇವಲ 160 ರೂಪಾಯಿಗಳನ್ನು ಕೊಟ್ಟು ತಿಂಗಳಿಗೆ 16 ಜಿಬಿ ಡೇಟಾ ಬಳಸುತ್ತಿರೋದು ನಿಜಕ್ಕೂ ಒಂದು ದುರಂತವೇ ಸರಿ ಎಂದು ಏರ್‌ಟೆಲ್‌ ಮಾಲೀಕ ಸುನೀಲ್‌ ಮಿತ್ತಲ್‌ ಕಿಡಿಕಾರಿದ್ದಾರೆ. ಕನಿಷ್ಟ 200-250 ರೂ. ಇರಬೇಕು, ಇಲ್ಲವಾದ್ರೆ ಕಷ್ಟದ ದಿನಗಳು ಬರಲಿವೆ ದೆಹಲಿಯಲ್ಲಿ ಏರ್‌ಟೆಲ್‌ ಎಕ್ಸಿಕ್ಯೂಟಿವ್‌ ಒಬ್ಬರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುನೀಲ್‌ ಮಿತ್ತಲ್‌, ನಾವು ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳಲ್ಲಿರುವಂತೆ ತಿಂಗಳಿಗೆ 50 ರಿಂದ 60 ಡಾಲರ್‌ ಕೇಳುತ್ತಿಲ್ಲ. ಬದಲು ಬಳಸುವ 16 ಜಿಬಿ ಡೇಟಾಕ್ಕೆ […]

ಕೇವಲ 160 ರೂ.ಗೆ 16 ಜಿಬಿ ಡೇಟಾ ಬಳಸ್ತಿರೋದು ದುರಂತ: AirTel Boss ಮಿತ್ತಲ್‌
Follow us
Guru
| Updated By: ಸಾಧು ಶ್ರೀನಾಥ್​

Updated on:Aug 25, 2020 | 12:52 PM

ನವೆದೆಹಲಿ: ಕೇವಲ 160 ರೂಪಾಯಿಗಳನ್ನು ಕೊಟ್ಟು ತಿಂಗಳಿಗೆ 16 ಜಿಬಿ ಡೇಟಾ ಬಳಸುತ್ತಿರೋದು ನಿಜಕ್ಕೂ ಒಂದು ದುರಂತವೇ ಸರಿ ಎಂದು ಏರ್‌ಟೆಲ್‌ ಮಾಲೀಕ ಸುನೀಲ್‌ ಮಿತ್ತಲ್‌ ಕಿಡಿಕಾರಿದ್ದಾರೆ.

ಕನಿಷ್ಟ 200-250 ರೂ. ಇರಬೇಕು, ಇಲ್ಲವಾದ್ರೆ ಕಷ್ಟದ ದಿನಗಳು ಬರಲಿವೆ ದೆಹಲಿಯಲ್ಲಿ ಏರ್‌ಟೆಲ್‌ ಎಕ್ಸಿಕ್ಯೂಟಿವ್‌ ಒಬ್ಬರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುನೀಲ್‌ ಮಿತ್ತಲ್‌, ನಾವು ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳಲ್ಲಿರುವಂತೆ ತಿಂಗಳಿಗೆ 50 ರಿಂದ 60 ಡಾಲರ್‌ ಕೇಳುತ್ತಿಲ್ಲ. ಬದಲು ಬಳಸುವ 16 ಜಿಬಿ ಡೇಟಾಕ್ಕೆ ಕನಿಷ್ಟ 200 ರೂಪಾಯಿ ಅಥವಾ 250 ರೂ.ಗಳಾದ್ರೆ ಟೆಲಿಕಾಂ‌ ಇಂಡಸ್ಟ್ರಿ ಉಳಿಯುತ್ತೆ. ಇಲ್ಲವಾದ್ರೆ ಕಷ್ಟದ ದಿನಗಳು ಬರಲಿವೆ ಎಂದು ಎಚ್ಚರಿಸಿದ್ದಾರೆ.

ಜಾಗತಿಕ ಸಂಕಷ್ಟದ ಸಮಯದಲ್ಲಿ ಟೆಲಿಕಾಂ‌ ಕಂಪನಿಗಳು ಸಾಕಷ್ಟು ಸಹಕಾರ ನೀಡಿವೆ. ಆದ್ರೆ ಕೇವಲ 160 ರೂ.ಗಳನ್ನು ಕೊಟ್ಟು ತಿಂಗಳಿಗೆ 16 ಜಿಬಿ ಡೇಟಾ ಬಳಸಲಾಗುತ್ತಿದೆ. ಅದೂ ಕೂಡಾ ಕೇವಲ ಮನರಂಜನೆ ಅಥವಾ ಸಿನೆಮಾ ನೋಡುವುದಕ್ಕಾಗಿ. ಇದರಿಂದಾಗಿ ಟೆಲಿಕಾಂ‌ ನೆಟ್‌ವರ್ಕ್‌ಗಳು ನೀಡುವ ಇತರೆ ಸೇವೆಗಳನ್ನು ಬಳಸಲಾಗುತ್ತಿಲ್ಲ.

ಬಳಕೆದಾರರ ಈ ವರ್ತನೆಯಿಂದ ಟೆಲಿಕಾಂ‌ ಕಂಪನಿಗಳಿಗೆ ನಷ್ಟವಂಟಾಗುತ್ತಿದೆ. 16 ಜಿಬಿಯಷ್ಟು ಡೇಟಾವನ್ನು ಕೇವಲ ಸಿನೆಮಾಕ್ಕಾಗಿ ಬಳಸುವುದಾದರೇ ಇನ್ನೂ ಹೆಚ್ಚಿನ ಹಣ ನೀಡಿ. ಇದು ಟೆಲಿಕಾಂ‌ ಕಂಪನಿಗಳ ಉಳಿವು-ಬಾಳಿಕೆಗೆ ಸಹಕಾರಿಯಾಗುತ್ತೆ. ಯಾಕಂದ್ರೆ ಇನ್ನೂ ಹೆಚ್ಚಿನ ಫೈಬರ್‌ ಹಾಗೂ ಸಬ್‌ಮೆರಿನ್‌ ಕೇಬಲ್‌ಗಳನ್ನು ಹಾಕಬೇಕಿದೆ. ಜೊತೆಗೆ 5G ನೆಟ್‌ವರ್ಕ್‌ ನೀಡಬೇಕಿದೆ. ಇಲ್ಲವಾದರೆ ಜಾಗತಿಕವಾಗಿ ನಾವು ಹಿಂದುಳಿಯಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.

Published On - 12:51 pm, Tue, 25 August 20

ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ