ಹೈದರಾಬಾದ್ ಎನ್ಕೌಂಟರ್ ಪ್ರಕರಣ: ನ್ಯಾಯಕ್ಕಾಗಿ ಅತ್ಯಾಚಾರಿಗಳ ಕುಟುಂಬಸ್ಥರು ಕೋರ್ಟ್ ಮೊರೆ
ಹೈದರಾಬಾದ್: ದೇಶಕ್ಕೆ ದೇಶವೇ ಮೆಚ್ಚುಗೆ ಸಾರಿದ ದಿನ.. ದಿಶಾಳನ್ನ ಗ್ಯಾಂಗ್ರೇಪ್ ಮಾಡಿ ಹತ್ಯೆಗೈದ ರಾಕ್ಷಸರನ್ನ ಹುಟ್ಟಡಗಿಸಿದ ಕ್ಷಣ.. ಖಾಕಿ ಕಣ್ತಪ್ಪಿಸಿ ಎಸ್ಕೇಪ್ ಆಗೋಕೆ ಹೊರಟ ದುರುಳರನ್ನ ಹೆಡೆಮುರಿ ಕಟ್ಟಿದ ಸಮಯ. ಎನ್ಕೌಂಟರ್ ಪ್ರಕರಣದಲ್ಲಿ ಖಾಕಿಗೆ ಹೊಸ ಸಂಕಷ್ಟ! ಹೈದರಾಬಾದ್ನಲ್ಲಿ ದಿಶಾ ಗ್ಯಾಂಗ್ರೇಪ್ ಮಾಡಿದ್ದ ಅತ್ಯಾಚಾರಿಗಳಿಗೆ ಖಾಕಿ ಪಡೆ ಗುಂಡಿನ ರುಚಿ ತೋರಿಸಿತ್ತು. ಎಸ್ಕೇಪ್ ಆಗೋಕೆ ಹೊರಟಿದ್ದ ಕಾಮುಕರ ಮೇಲೆ ತೆಲಂಗಾಣ ಪೊಲೀಸರ ಬಂದೂಕಿನಿಂದ ಸಿಡಿದ ಗುಂಡು ನರರಾಕ್ಷಸರ ಎದೆ ಸೀಳಿತ್ತು. ಅಂದು ತೆಲುಗು ಪೊಲೀಸರ ಕಾರ್ಯಕ್ಕೆ ದೇಶಕ್ಕೆ […]
ಹೈದರಾಬಾದ್: ದೇಶಕ್ಕೆ ದೇಶವೇ ಮೆಚ್ಚುಗೆ ಸಾರಿದ ದಿನ.. ದಿಶಾಳನ್ನ ಗ್ಯಾಂಗ್ರೇಪ್ ಮಾಡಿ ಹತ್ಯೆಗೈದ ರಾಕ್ಷಸರನ್ನ ಹುಟ್ಟಡಗಿಸಿದ ಕ್ಷಣ.. ಖಾಕಿ ಕಣ್ತಪ್ಪಿಸಿ ಎಸ್ಕೇಪ್ ಆಗೋಕೆ ಹೊರಟ ದುರುಳರನ್ನ ಹೆಡೆಮುರಿ ಕಟ್ಟಿದ ಸಮಯ.
ಎನ್ಕೌಂಟರ್ ಪ್ರಕರಣದಲ್ಲಿ ಖಾಕಿಗೆ ಹೊಸ ಸಂಕಷ್ಟ! ಹೈದರಾಬಾದ್ನಲ್ಲಿ ದಿಶಾ ಗ್ಯಾಂಗ್ರೇಪ್ ಮಾಡಿದ್ದ ಅತ್ಯಾಚಾರಿಗಳಿಗೆ ಖಾಕಿ ಪಡೆ ಗುಂಡಿನ ರುಚಿ ತೋರಿಸಿತ್ತು. ಎಸ್ಕೇಪ್ ಆಗೋಕೆ ಹೊರಟಿದ್ದ ಕಾಮುಕರ ಮೇಲೆ ತೆಲಂಗಾಣ ಪೊಲೀಸರ ಬಂದೂಕಿನಿಂದ ಸಿಡಿದ ಗುಂಡು ನರರಾಕ್ಷಸರ ಎದೆ ಸೀಳಿತ್ತು. ಅಂದು ತೆಲುಗು ಪೊಲೀಸರ ಕಾರ್ಯಕ್ಕೆ ದೇಶಕ್ಕೆ ದೇಶವೇ ಶಹಬಾಸ್ ಗಿರಿ ತೋರಿದ್ರು.
ಆದ್ರೆ, ಕ್ರಿಮಿಗಳನ್ನ ಎನ್ಕೌಂಟರ್ ಮಾಡಿರೋ ಖಾಕಿ ತಂಡಕ್ಕೆ ಸಂಕಷ್ಟ ಅನ್ನೋದು ಬೇತಾಳದಂತೆ ಕಾಡ್ತಿದೆ. ಎನ್ಕೌಂಟರ್ ಮಾಡಿರೋ ಬಗ್ಗೆ ಸುಪ್ರೀಂಕೋರ್ಟ್ ಮಾಹಿತಿ ನೀಡುವಂತೆ ಪೊಲೀಸರಿಗೆ ಮಾಹಿತಿ ಕೇಳಿದ್ರೆ, ಇತ್ತ ಮತ್ತೊಂದು ಪ್ರಕರಣದ ಚೆಂಡು ಕೋರ್ಟ್ ಅಂಗಳಕ್ಕೆ ಬಂದು ಬಿದ್ದಿದೆ.
ನ್ಯಾಯಕ್ಕಾಗಿ ಅತ್ಯಾಚಾರಿಗಳ ಕುಟುಂಬಸ್ಥರು ಕೋರ್ಟ್ ಮೊರೆ! ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಆರೋಪಿಗಳಾದ ಮೊಹಮ್ಮದ್ ಆರಿಫ್, ಚನ್ನಕೇಶವುಲು, ಜೊಲ್ಲು ನವೀನ್, ಜೊಲ್ಲು ಶಿವ ಎಂಬ ನಾಲ್ವರು ರಾಕ್ಷಸರನ್ನ ತೆಲಂಗಾಣ ಪೊಲೀಸರು ಎನ್ಕೌಂಟರ್ ಮಾಡಿದ್ರು. ಇದೀಗ ಎನ್ಕೌಂಟ್ ಆಗಿರೋ ಆರೋಪಿಗಳ ಕುಟುಂಬಸ್ಥರು ತೆಲಂಗಾಣ ಪೊಲೀಸರ ವಿರುದ್ಧ ಕ್ಯಾತೆ ತೆಗೆದಿದ್ದಾರೆ.
ಪೊಲೀಸರು ತಮ್ಮ ಮಕ್ಕಳನ್ನು ಎನ್ಕೌಂಟರ್ನಲ್ಲಿ ಕೊಂದಿದ್ದು ಮಹಾ ಅನ್ಯಾಯ. ಅಸಲಿಗೆ ಅದೊಂದು ಫೇಕ್ ಎನ್ಕೌಂಟರ್. ಈ ಬಗ್ಗೆ ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ಆಗ್ಬೇಕು. ಪೊಲೀಸರ ಮೇಲೆ ಎಫ್ಐಆರ್ ದಾಖಲಿಸ್ಬೇಕು ಅಂತ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ಮಕ್ಕಳು ನ್ಯಾಯಾಂಗ ಬಂಧನದಲ್ಲಿದ್ದು ಖಾಕಿ ವಶದಲ್ಲಿದ್ದಾಗ ಮೃತಪಟ್ಟಿದ್ದಾರೆ. ಆದ್ದರಿಂದ ಮೃತರ ಪ್ರತಿ ಕುಟುಂಬಕ್ಕೂ ತಲಾ 50ಲಕ್ಷ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಹತ್ಯಾಚಾರಿಗಳ ಕುಟುಂಬಸ್ಥರ ಪರ ನ್ಯಾಯವಾದಿಗಳಾದ ಸತೀಶ್, ಪಿ.ವಿ. ಕೃಷ್ಣಮಾಚಾರಿ ವಾದ ಮಂಡಿಸಲಿದ್ದಾರೆ.
ಇನ್ನು, ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ದುಷ್ಟರ ಎನ್ಕೌಂಟರ್ ಮಾಡಿದ್ರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈಗಾಗಲೇ ಎನ್ಕೌಂಟರ್ ಮಾಡಿರೋ ಬಗ್ಗೆ ಸುಪ್ರೀಂಕೋರ್ಟ್ ಸಂಪೂರ್ಣ ಸ್ಪಷ್ಟನೆ, ವರದಿ ಕೇಳಿದೆ. ಈ ಹೊತ್ತಲ್ಲೇ ಮತ್ತೊಂದು ತಲೆನೋವು ಖಾಕಿ ಟೀಂಗೆ ಎದುರಾಗಿದೆ.
Published On - 7:12 am, Fri, 20 December 19