ಹೈದರಾಬಾದ್: ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿಗೆ ಗುದ್ದಿ ಮೂವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಕಾಂಚಿಲಿ ಬಳಿ ಭಾನುವಾರ ನಡೆದಿದೆ. ನಾಗಮಣಿ (48), ಲಾವಣ್ಯ (23) ಚಾಲಕ ರೌತು ದ್ವಾರಕಾ (23) ಮೃತ ದುರ್ದೈವಿಗಳು.
ಮೃತರು ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಾದ (HSL) ಕ್ರೇನ್ ಅಪಘಾತದಲ್ಲಿ ಮೃತಪಟ್ಟ ಸಂಬಂಧಿಯೊಬ್ಬರ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ವಿಶಾಖಪಟ್ಟಣಂಗೆ ತೆರಳುತ್ತಿದ್ದರು. ಈ ವೇಳೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆ ಬಳಿ ಲಾರಿಗೆ ಗುದ್ದಿ ಮೃತಪಟ್ಟಿದ್ದಾರೆ.
ತನ್ನ ಅಳಿಯ ಪಿ.ಭಾಸ್ಕರ್ ರಾವ್ ಅವರ ಅಂತ್ಯಕ್ರಿಯೆಗಾಗಿ ವಿಶಾಖಪಟ್ಟಣಂಗೆ ಬರುತ್ತಿದ್ದ ನಾಗಮಣಿ (48), ಸೊಸೆ ಲಾವನ್ಯಾ (23) ಮತ್ತು ಕಾರ್ ಚಾಲಕ ರೌತು ದ್ವಾರಕಾ (23) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಉಳಿದ ನಾಗಮಣಿಯ ಇಬ್ಬರು ಪುತ್ರರು ಮತ್ತು ಇನ್ನೊಬ್ಬ ಅಳಿಯ ಗಾಯಗೊಂಡಿದ್ದು, ಆರಂಭದಲ್ಲಿ ಗಾಯಾಳುಗಳನ್ನು ಸೊಂಪೇಟದಲ್ಲಿರುವ ಸರ್ಕಾರಿ ಆಸ್ಪತ್ರೆಗೆ, ನಂತರ ಶ್ರೀಕಾಕುಲಂಗೆ ಸ್ಥಳಾಂತರಿಸಲಾಗಿದೆ. ಆಕೆಯ ಒಬ್ಬ ಮಗನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
Published On - 10:38 am, Tue, 4 August 20