ಕೃಷಿ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆಯಿದೆ: ನರೇಂದ್ರ ಸಿಂಗ್ ತೋಮರ್
ದೆಹಲಿ ಪೊಲೀಸರ ಮೂಲಕ ಟ್ರ್ಯಾಕ್ಟರ್ ಪರೇಡ್ ರದ್ದತಿ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ.

ದೆಹಲಿ: ಸುಪ್ರೀಂಕೋರ್ಟ್ ತಡೆಯಾಜ್ಞೆ ಇರುವ ಕಾರಣ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಸಾಧ್ಯವಾಗದು. ಆದರೆ, ದೇಶದ ಬಹುತೇಕ ರೈತರು ಮತ್ತು ರೈತ ಸಂಘಟನೆಗಳು ಕೃಷಿ ಕಾಯ್ದೆಗಳ ಪರವಾಗಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಜನವರಿ 19 ರಂದು 10ನೇ ಸುತ್ತಿನ ಮಾತುಕತೆಯಲ್ಲಿ ಕೃಷಿ ಕಾಯ್ದೆಗಳ ರದ್ದತಿ ಹೊರತುಪಡಿಸಿ ಬೇರೆ ಏನು ಬಯಸುತ್ತೀರೆಂದು ಕೇಳುತ್ತೇವೆ. ಎಪಿಎಂಸಿ ಮಾರುಕಟ್ಟೆಗಳ ಕುರಿತು ಅವರ ಬೇಡಿಕೆಗಳನ್ನು ಈಗಾಗಲೇ ಒಪ್ಪಿದ್ದೇವೆ ಎಂದು ಅವರು ತಿಳಿಸಿದರು. ದೆಹಲಿ ಪೊಲೀಸರ ಮೂಲಕ ಟ್ರ್ಯಾಕ್ಟರ್ ಪರೇಡ್ ರದ್ದತಿ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ.
ಸುಪ್ರೀಂಕೋರ್ಟ್ ರಚಿಸಿದ ಸಮಿತಿಯೆದುರು ಹಾಜರಾಗುವುದಿಲ್ಲ. ಕೇಂದ್ರ ಸರ್ಕಾರದ ಜತೆ ಮಾತ್ರ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್ ಈಗಾಗಲೇ ತಿಳಿಸಿದ್ದಾರೆ. 9ನೇ ಸುತ್ತಿನ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಂದಿನ ಸಭೆಯಲ್ಲಿ ಒಮ್ಮತ ಮೂಡದಿದ್ದರೆ ನ್ಯಾಯಾಲಯ ರಚಿಸಿದ ತಜ್ಞರ ಸಮಿತಿ ಜತೆ ಮಾತುಕತೆ ನಡೆಸಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಪೆರೇಡ್ಗೆ ಹರಿಯಾಣ ಯುವತಿಯರ ಸಿದ್ಧತೆ; ಗಣರಾಜ್ಯೋತ್ಸವದಂದು ಇವರೂ ದೆಹಲಿಗೆ ಧಾವಿಸಲಿದ್ದಾರೆ



