ಎಪಿಎಂಸಿ ಕಾಯ್ದೆಗೆ 8 ತಿದ್ದುಪಡಿ ಮಾಡಲು ಸಿದ್ಧ ಎಂದ ಕೇಂದ್ರ ಸರ್ಕಾರ, ಪ್ರಸ್ತಾಪ ತಿರಸ್ಕರಿಸಿದ ರೈತ ನಾಯಕರು

|

Updated on: Dec 09, 2020 | 5:20 PM

ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ಲಿಖಿತ ರೂಪದ ಈ ಪ್ರಸ್ತಾಪವನ್ನು ಕೇಂದ್ರ ತಲುಪಿಸಿದೆ. ಕೇಂದ್ರದ ಈ ಪ್ರಸ್ತಾಪದ ಕುರಿತು ಚರ್ಚಿಸಲು ರೈತ ನಾಯಕರ ಸಭೆ ಸೇರಿದ್ದಾರೆ.

ಎಪಿಎಂಸಿ ಕಾಯ್ದೆಗೆ 8 ತಿದ್ದುಪಡಿ ಮಾಡಲು ಸಿದ್ಧ ಎಂದ ಕೇಂದ್ರ ಸರ್ಕಾರ, ಪ್ರಸ್ತಾಪ ತಿರಸ್ಕರಿಸಿದ ರೈತ ನಾಯಕರು
ರೈತ ನಾಯಕರ ಕೈ ಸೇರಿರುವ ಕೇಂದ್ರ ಸರ್ಕಾರದ ಪತ್ರ
Follow us on

ದೆಹಲಿ: ಎಪಿಎಂಸಿ ಕಾಯ್ದೆಗೆ ಒಟ್ಟು 8 ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಖಾಸಗಿ ವರ್ತಕರ ನೋಂದಣಿ ಕಡ್ಡಾಯವಾಗಿದ್ದು, ಎಪಿಎಂಸಿಗಳಷ್ಟೇ ತೆರಿಗೆ ಪಾವತಿಸಬೇಕು. ಜೊತೆಗೆ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಮುಂದುವರೆಸುವ ಪ್ರಸ್ತಾಪವನ್ನು ಕೇಂದ್ರ ರೈತರ ಮುಂದಿಟ್ಟಿದೆ.

ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ಲಿಖಿತ ರೂಪದ ಈ ಪ್ರಸ್ತಾಪವನ್ನು ಕೇಂದ್ರ ತಲುಪಿಸಿದೆ. ಕೇಂದ್ರದ ಈ ಪ್ರಸ್ತಾಪದ ಕುರಿತು ಚರ್ಚಿಸಲು ರೈತ ನಾಯಕರ ಸಭೆ ಸೇರಿದ್ದಾರೆ. ಕೇಂದ್ರದ ಪ್ರಸ್ತಾಪದ ಕುರಿತು ಸಮಗ್ರ ಚರ್ಚೆ ಮಾಡಲಿರುವ ರೈತರು ಈವರೆಗೆ ನೂತನ ಕೃಷಿ ಕಾಯ್ದೆಗಳ ರದ್ದತಿಯ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿರುವ ರೈತ ಒಕ್ಕೂಟಗಳ ನಿರ್ಧಾರ ಕುತೂಹಲ ಮೂಡಿಸಿತ್ತು..

ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ ಎಂಬ ಮಾಹಿತಿ ದೊರೆತಿದೆ. ಇತ್ತ ರಾಷ್ಟ್ರಪತಿ‌ ಭವನಕ್ಕೆ ಶರತ್ ಪವಾರ್ ನೇತೃತ್ವದ 5 ವಿಪಕ್ಷಗಳ ನಾಯಕರು ಭೇಟಿಯಿತ್ತಿದ್ದಾರೆ. ರಾಷ್ಟ್ರಪತಿಗಳ ಮಧ್ಯ ಪ್ರವೇಶ ಕೋರಿ ಮನವಿ ಸಲ್ಲಿಸುವ ಸಾಧ್ಯತೆಯಿದೆ.

Published On - 4:49 pm, Wed, 9 December 20