ಮುಂದಿನ ವರ್ಷದಿಂದ Take Home Salaryಗೆ ಬೀಳಲಿದೆ ಕತ್ತರಿ! ಹೊಸ ನಿಯಮ ಜಾರಿಗೆ ಕೇಂದ್ರದ ಚಿಂತನೆ

ಸದ್ಯದ ನಿಯಮದ ಪ್ರಕಾರ ಯಾವುದೇ ವ್ಯಕ್ತಿಗೆ ಸ್ಯಾಲರಿ ನೀಡುವಾಗ ಮೂಲ ವೇತನವನ್ನು ಇಷ್ಟೇ ನಿಗದಿ ಮಾಡಬೇಕೆಂಬ ನಿಯಮ ಇಲ್ಲ. ಹೊಸ ನಿಯಮ ಜಾರಿಗೆ ಬಂದರೆ, ಮೂಲ ವೇತನದಲ್ಲಿ ಬದಲಾವಣೆ ಆಗಲಿದೆ.

ಮುಂದಿನ ವರ್ಷದಿಂದ Take Home Salaryಗೆ ಬೀಳಲಿದೆ ಕತ್ತರಿ! ಹೊಸ ನಿಯಮ ಜಾರಿಗೆ ಕೇಂದ್ರದ ಚಿಂತನೆ
ಸಾಂದರ್ಭಿಕ ಚಿತ್ರ
Rajesh Duggumane

| Edited By: sadhu srinath

Dec 09, 2020 | 5:07 PM

ಮುಂಬೈ: ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಈ ನಿಯಮ ಜಾರಿಗೆ ಬಂದರೆ, ಮುಂದಿನ ಹಣಕಾಸು ವರ್ಷದಿಂದ ಉದ್ಯೋಗಿಗಳ ಟೇಕ್​ ಹೋಂ ಸ್ಯಾಲರಿ (ಕೈಗೆ ಸಿಗುವ ವೇತನ Take Home Salary) ಕಡಿಮೆ ಆಗಲಿದೆ! ಹಾಗಾದರೆ, ಇದು ಉದ್ಯೋಗಿಗಳಿಗೆ ಹೇಗೆ ಲಾಭದಾಯಕವಾಗಲಿದೆ? ಈ ನಿಯಮಗಳಲ್ಲಿ ಏನಿದೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಹೊಸ ನಿಯಮದ ಪ್ರಕಾರ ಉದ್ಯೋಗಿ ಸಂಬಳದಲ್ಲಿ ಭತ್ಯೆಯು ಶೇ. 50 ಮೀರಬಾರದು. ಅಂದರೆ, ಮೂಲ ಸಂಬಳ (ಬೇಸಿಕ್​ ಸ್ಯಾಲರಿ) ಶೇ. 50 ಇರಲೇಬೇಕು. ಮೂಲ ವೇತನ ಹೆಚ್ಚಾದರೆ, ಉದ್ಯೋಗಿ ಗ್ರ್ಯಾಚ್ಯುವಿಟಿ ಹಾಗೂ ಭವಿಷ್ಯ ನಿಧಿಗೆ ನೀಡುವ ಕೊಡುಗೆ ಕೂಡ ಹೆಚ್ಚಾಗಲಿದೆ. ಹೀಗಾಗಿ, ಸಹಜವಾಗಿಯೇ ಕೈಗೆ ಸಿಗುವ ಸಂಬಳ ಕೂಡ ಕಡಿಮೆ ಆಗಲಿದೆ.

ಉದ್ಯೋಗಿಗಳಿಗೆ ಸಿಗಲಿದೆ ಲಾಭ: ಕೈಯಲ್ಲಿ ಹಣ ಇದ್ದರೆ ಅದನ್ನು ಹೇಗೆ ಖರ್ಚು ಮಾಡಬೇಕು ಎಂದು ಯೋಚಿಸುವವರೇ ಹೆಚ್ಚು. ಒಂದೊಮ್ಮೆ ಹೆಚ್ಚು ಹಣ ಪಿಎಫ್​ಗೆ ಕಡಿತಗೊಂಡರೆ ಉದ್ಯೋಗಿಗೆ ಹೆಚ್ಚು ಹಣ ಉಳಿತಾಯವಾಗಲಿದೆ. ಭವಿಷ್ಯ ನಿಧಿಯಲ್ಲಿರುವ ಹಣಕ್ಕೆ ಸರ್ಕಾರ ಬಡ್ಡಿ ಕೂಡ ನೀಡಲಿದೆ. ಹೀಗಾಗಿ, ಇದು ನೌಕರರಿಗೆ ಸಹಕಾರಿಯಾಗಲಿದೆ.

ಸದ್ಯದ ನಿಯಮ ಏನು?:

ಸದ್ಯದ ನಿಯಮದ ಪ್ರಕಾರ ಯಾವುದೇ ಉದ್ಯೋಗಿಗೆ ಸ್ಯಾಲರಿ ನೀಡುವಾಗ ಮೂಲ ವೇತನವನ್ನು ಇಷ್ಟೇ ನಿಗದಿ ಮಾಡಬೇಕೆಂದಿಲ್ಲ. ಉದಾಹರಣೆಗೆ, ಓರ್ವ ಉದ್ಯೋಗಿಗೆ 40 ಸಾವಿರ ವೇತನ ಇದ್ದರೆ, ಮೂಲ ವೇತನ 17 ಸಾವಿರ ಎಂದು ನಿಗದಿ ಮಾಡಿ, ಉಳಿದ ಹಣವನ್ನು ಭತ್ಯೆ ರೀತಿಯಲ್ಲಿ ಕಂಪೆನಿ ನೀಡಬಹುದು. ಹೊಸ ನಿಯಮ ಬಂದರೆ, ಮೂಲ ವೇತನವನ್ನು 20 ಸಾವಿರ ಮಾಡೋದು ಸಂಸ್ಥೆಗಳಿಗೆ ಅನಿವಾರ್ಯ ಆಗಲಿದೆ.  ಆಗ ಪಿಎಫ್​ ಹಣ 17 ಸಾವಿರದ ಬದಲು 20 ಸಾವಿರಕ್ಕೆ ಕಡಿತಗೊಳ್ಳುತ್ತದೆ.

ಈ ನಿಯಮ ಜಾರಿಗೆ ಬರುತ್ತಾ?

ಸದ್ಯ, ಸರ್ಕಾರ ಈ ಕರಡನ್ನು ಪ್ರಕಟಣೆ ಮಾಡಿದೆ. ಈ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗುತ್ತದೆ. ಜನರು ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದರೆ ನಿಯಮವನ್ನು ಕೇಂದ್ರ ಜಾರಿಗೊಳಿಸಲಿದೆ.

ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada