ದೆಹಲಿ: ಕೇಂದ್ರ ಸರ್ಕಾರ ಮತ್ತು ರೈತ ಒಕ್ಕೂಟಗಳ ನಡುವೆ ಇಂದು 8ನೇ ಸುತ್ತಿನ ಸಭೆ ನಡೆಯಲಿದೆ. ಈ ನಡುವೆ ಪಂಜಾಬ್ನ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
‘ರೈತ ನಾಯಕರು ಯಾವುದೇ ಪರಿಹಾರಕ್ಕೆ ಸಿದ್ಧವಿಲ್ಲ. ಕೇಂದ್ರ ಸರ್ಕಾರ ನೀಡಿದ ಯಾವುದೇ ಪ್ರಸ್ತಾಪವನ್ನೂ ಒಪ್ಪದ ರೈತ ಒಕ್ಕೂಟಗಳ ಪ್ರತಿಭಟನೆ ಹಿಂದೆ ಬೇರೆ ಯಾವುದೋ ಉದ್ದೇಶವಿದ್ದಂತೆ ತೋರುತ್ತದೆ’ ಎಂದು ಪಂಜಾಬ್ ಬಿಜೆಪಿ ನಾಯಕ ಸುರ್ಜಿತ್ ಕುಮಾರ್ ಜ್ಞಾನಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸುದೀರ್ಘ ಎರಡು ಘಂಟೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಪರಿಹರಿಸುತ್ತಾರೆ
ಪಂಜಾಬ್ ಬಿಜೆಪಿಯ ಕಿಸಾನ್ ಕೋರ್ಡಿನೇಶನ್ ಕಮಿಟಿಯ ಅಧ್ಯಕ್ಷರೂ ಆಗಿರುವ ಪಂಜಾಬ್ ಬಿಜೆಪಿ ನಾಯಕ ಸುರ್ಜಿತ್ ಕುಮಾರ್ ಜ್ಞಾನಿ ಕೃಷಿ ಕಾಯ್ದೆಗಳು ಮಂಡನೆಯಾಗುವ ಮುನ್ನ ರೈತರ ಜೊತೆ ಸಂವಾದ ನಡೆಸಿದ್ದರು. ‘ಪ್ರಧಾನಿ ನರೇಂದ್ರ ಮೋದಿಯವರು ಈ ಸಮಸ್ಯೆಯನ್ನು ಪರಿಹರಿಸುತ್ತಾರೆ. ಪಂಜಾಬ್ನ ಉದ್ದಗಲಕ್ಕೂ ಓಡಾಡಿರುವ ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಅರಿವಿದೆ. ಪ್ರಧಾನಿಯವರ ಜೊತೆಗಿನ ಮಾತುಕತೆಯ ವಿವರವನ್ನು ತಕ್ಷಣವೇ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ಟ್ರ್ಯಾಕ್ಟರ್ಗಳ ಗುಡುಗು ಕೇಂದ್ರ ಸರ್ಕಾರಕ್ಕೆ ಕೇಳುವುದೇ? ರೈತ ಚಳುವಳಿಕಾರರ ಪ್ರಶ್ನೆ