ಜನವರಿ 27ರಂದು ಶಶಿಕಲಾ ಜೈಲಿನಿಂದ ಬಿಡುಗಡೆ ಸಾಧ್ಯತೆ -ಮದ್ರಾಸ್ ಹೈಕೋರ್ಟ್ಗೆ ವಕೀಲರಿಂದ ಮಾಹಿತಿ
ಜನವರಿ 27ರಂದು ವಿ.ಕೆ.ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮದ್ರಾಸ್ ಹೈಕೋರ್ಟ್ಗೆ ಶಶಿಕಲಾ ಪರ ವಕೀಲರಿಂದ ಮಾಹಿತಿ ನೀಡಲಾಗಿದೆ. ಅಕ್ರಮ ಆಸ್ತಿ ಹೊಂದಿದ್ದ ಕೇಸ್ನಲ್ಲಿ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಚೆನ್ನೈ: ಜನವರಿ 27ರಂದು ವಿ.ಕೆ.ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮದ್ರಾಸ್ ಹೈಕೋರ್ಟ್ಗೆ ಶಶಿಕಲಾ ಪರ ವಕೀಲರಿಂದ ಮಾಹಿತಿ ನೀಡಲಾಗಿದೆ. ಅಕ್ರಮ ಆಸ್ತಿ ಹೊಂದಿದ್ದ ಕೇಸ್ನಲ್ಲಿ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಸದ್ಯ, ಶಶಿಕಲಾ ವಿರುದ್ಧ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ IT ಇಲಾಖೆ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ನ್ಯಾ.ದೊರೆಸ್ವಾಮಿ ಹಾಗೂ ನ್ಯಾ.ತಮಿಳುಸೆಲ್ವಿ ಅವರ ಪೀಠವು ಅರ್ಜಿಯ ವಿಚಾರಣೆಗೆ ಮುಂದಾದ ವೇಳೆ ಶಶಿಕಲಾ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ಜೊತೆಗೆ, ಶಶಿಕಲಾ ಬಿಡುಗಡೆಯಾಗಲಿರುವ ಜನವರಿ 27 ರ ನಂತರ ಅರ್ಜಿ ವಿಚಾರಣೆಯನ್ನು ಮುಂದುವರಿಸಲು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.
ಉಗ್ರ ಮಸೂದ್ ಅಜರ್‌ಗೆ ಬಂಧನ ಭೀತಿ: ಪಾಕ್ ಕೋರ್ಟ್‌ನಿಂದ ಅರೆಸ್ಟ್ ವಾರಂಟ್ ಜಾರಿ
Published On - 11:25 pm, Thu, 7 January 21