ಮೆಡಿಕಲ್​ ಶಾಪ್​ಗೆಂದು ಹೋದ ರೈತರೊಬ್ಬರಿಗೆ ಖುಲಾಯಿಸಿತು 2.5 ಕೋಟಿ ರೂ. ಬಂಪರ್ ಲಾಟರಿ

|

Updated on: Nov 08, 2023 | 11:40 AM

ಯಾರಿಗೆ ಗೊತ್ತು ಯಾರ ಅದೃಷ್ಟ ಯಾವಾಗ ಖುಲಾಯಿಸುತ್ತೆಂದು, ಹೌದು ವ್ಯಕ್ತಿಯೊಬ್ಬರಿಗೆ 2.5 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಪಂಜಾಬ್‌ನ ಹೋಶಿಯಾರ್‌ಪುರದ ಹಿರಿಯ ರೈತರೊಬ್ಬರು 2.5 ಕೋಟಿ ಮೌಲ್ಯದ ಲಾಟರಿ ಗೆದ್ದಿದ್ದಾರೆ. ಶೀತಲ್ ಸಿಂಗ್ ಎಂಬ ವ್ಯಕ್ತಿ ನಗರದ ಮಹಿಲ್‌ಪುರ ನಿವಾಸಿಯಾಗಿದ್ದು, ಕುಟುಂಬದ ಸದಸ್ಯರಿಗೆ ಔಷಧಿ ಖರೀದಿಸಲು ಮೆಡಿಕಲ್ ಸ್ಟೋರ್‌ಗೆ ಭೇಟಿ ನೀಡಿದ್ದರು.

ಮೆಡಿಕಲ್​ ಶಾಪ್​ಗೆಂದು ಹೋದ ರೈತರೊಬ್ಬರಿಗೆ ಖುಲಾಯಿಸಿತು 2.5 ಕೋಟಿ ರೂ. ಬಂಪರ್ ಲಾಟರಿ
ಪಂಜಾಬ್ ರೈತ
Image Credit source: India Today
Follow us on

ಯಾರಿಗೆ ಗೊತ್ತು ಯಾರ ಅದೃಷ್ಟ ಯಾವಾಗ ಖುಲಾಯಿಸುತ್ತೆಂದು, ಹೌದು  ಪಂಜಾಬ್​ನ ರೈತರೊಬ್ಬರು 2.5 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಪಂಜಾಬ್‌ನ ಹೋಶಿಯಾರ್‌ಪುರದ ಹಿರಿಯ ರೈತರೊಬ್ಬರು 2.5 ಕೋಟಿ ಮೌಲ್ಯದ ಲಾಟರಿ ಗೆದ್ದಿದ್ದಾರೆ. ಶೀತಲ್ ಸಿಂಗ್ ಎಂಬ ವ್ಯಕ್ತಿ ನಗರದ ಮಹಿಲ್‌ಪುರ ನಿವಾಸಿಯಾಗಿದ್ದು, ಕುಟುಂಬದ ಸದಸ್ಯರಿಗೆ ಔಷಧಿ ಖರೀದಿಸಲು ಮೆಡಿಕಲ್ ಸ್ಟೋರ್‌ಗೆ ಭೇಟಿ ನೀಡಿದ್ದರು.

ಅಂಗಡಿಗೆ ಭೇಟಿ ನೀಡಿದಾಗ, ವ್ಯಕ್ತಿ ಲಾಟರಿ ಟಿಕೆಟ್ ಅನ್ನು ಸಹ ಖರೀದಿಸಿದ್ದರು.ಸುಮಾರು ನಾಲ್ಕು ಗಂಟೆಗಳ ನಂತರ ತನಗೆ ಲಾಟರಿ ಕುರಿತು ಕರೆ ಬಂದಿದ್ದು, ತಾನು 2.5 ಕೋಟಿ ಗೆದ್ದಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

ಲಾಟರಿಯಲ್ಲಿ ಗೆದ್ದ ಮೊತ್ತವನ್ನು ಹೇಗೆ ಬಳಸಬೇಕೆಂದು ಅವರು ಮತ್ತು ಅವರ ಕುಟುಂಬ ನಿರ್ಧರಿಸುತ್ತದೆ ಎಂದು ಸಿಂಗ್ ಹೇಳಿದರು.
ರೈತನಾಗಿ ಕೆಲಸ ಮಾಡುವ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಬ್ಬರೂ ಮದುವೆಯಾಗಿದ್ದಾರೆ.

ಮತ್ತಷ್ಟು ಓದಿ: ಲಾಟರಿ ಗೆದ್ದಿರುವುದಾಗಿ ಹೇಳಿದ್ದರು, ಮುಂದೆ ಆ ನಿವೃತ್ತ ಮಹಿಳೆ ತಮ್ಮ ಜೀವಮಾನ ಉಳಿತಾಯದ 72 ಲಕ್ಷ ಕಳೆದುಕೊಂಡರು!

ಏತನ್ಮಧ್ಯೆ, ಲಾಟರಿ ಸ್ಟಾಲ್‌ನ ಮಾಲೀಕರು ಕಳೆದ 15 ವರ್ಷಗಳಿಂದ ಈ ಉದ್ಯೋಗದಲ್ಲಿದ್ದು, ಮೂರನೇ ಬಾರಿಗೆ ಗ್ರಾಹಕರೊಬ್ಬರಿಗೆ ಕೋಟಿಗಟ್ಟಲೆ ಹಣದ ಲಾಟರಿ ಬಂದಿದೆ ಎಂದು ಹೇಳಿದ್ದಾರೆ.

ಅಮೆರಿಕದ ವ್ಯಕ್ತಿಯೊಬ್ಬರಿಗೆ ಕುಟುಂಬ ಸದಸ್ಯರ ಜನ್ಮದಿನಾಂಕದಿಂದ ಒಲಿದು ಬಂದ ಅದೃಷ್ಟ
ಏಳು ವರ್ಷಗಳಿಂದ ಒಂದೇ ರೀತಿಯ ಸಂಖ್ಯೆಯನ್ನು ಬಳಸಿಕೊಂಡು ಲಾಟರಿ (Lottery) ಖರೀದಿ ಮಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಭಾರೀ ಮೊತ್ತದ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಬಹುಮಾನ ಪಡೆದ ವ್ಯಕ್ತಿಯನ್ನು ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಎಂದು ಗುರುತಿಸಲಾಗಿದ್ದು, ಅವರು ಎರಡು ಕಡೆ ಬೇರೆ ಬೇರೆ ಲಾಟರಿಯನ್ನು ಆಯ್ಕೆ ಮಾಡಿದ್ದು, ಇದೀಗ ಎರಡು ಕಡೆಯಲ್ಲೂ ಅವರಿಗೆ ಬಹುಮಾನ ಬಂದಿದೆ. ಶುಕ್ರವಾರ ನಡೆದ ‘ಲಕ್ಕಿ ಫಾರ್ ಲೈಫ್’ ಡ್ರಾದಲ್ಲಿ, ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ತಮ್ಮ ಕುಟುಂಬದ ಸದಸ್ಯರ ಜನ್ಮದಿನಾಂಕದ ಸಂಖ್ಯೆಯನ್ನು ಬಳಸಿಕೊಂಡು, ಲಾಟರಿಯನ್ನು ಆಯ್ಕೆ ಮಾಡಿದ್ದಾರೆ. ಇದೀಗ ವರ್ಷಕ್ಕೆ 25,000 ಡಾಲರ್ (₹ 2078243.75) ಎಂಬಂತೆ​​ ಬಹುಮಾನ ಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ