ಜೈಪುರ: ಪ್ರತಿಭಟನಾನಿರತ ರೈತರು ಪಕ್ಷಿ ಜ್ವರವನ್ನು ಹಬ್ಬಿಸಲು ಕೋಳಿ ಬಿರಿಯಾನಿ ತಿನ್ನುತ್ತಿದ್ದಾರೆ. ಪಕ್ಷಿ ಜ್ವರ ರಾಷ್ಟ್ರವ್ಯಾಪಿ ಪಸರಿಸಲು ಇದು ಕಾರಣವಾಗಬಹುದು ಎನ್ನುವ ರಾಜಸ್ಥಾನ ಬಿಜೆಪಿ ಶಾಸಕನ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ರಾಜಸ್ಥಾನದ ರಾಮಗಂಜ್ ಮಂಡಿ ಶಾಸಕ ಮದನ್ ದಿಲಾವರ್ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ರೈತರನ್ನು ಹಾಗೂ ಅವರ ಪ್ರತಿಭಟನೆಯನ್ನು ತೆಗಳಿದ್ದಾರೆ.
ರೈತ ಪ್ರತಿಭಟನಾಕಾರರು ಬಿರಿಯಾನಿ ಆಸ್ವಾದಿಸುತ್ತಿದ್ದಾರೆ. ನಿತ್ಯ ಸಾಕಷ್ಟು ಒಣ ಹಣ್ಣುಗಳನ್ನು ತಿನ್ನುತ್ತಿದ್ದಾರೆ. ಹೀಗಾಗಿ, ಪ್ರತಿಭಟನೆಯನ್ನು ಅವರು ಸಂಪೂರ್ಣವಾಗಿ ಆನಂದದಿಂದ ಕಳೆಯುತ್ತಿದ್ದಾರೆ. ಇದು ಅವರಿಗೆ ಒಂದು ರೀತಿ ಪಿಕ್ನಿಕ್ ಇದ್ದಂತೆ. ಪ್ರತಿಭಟನಾಕಾರರ ಮಧ್ಯೆ ಸಾಕಷ್ಟು ಭಯೋತ್ಪಾದಕರೂ, ಕಳ್ಳರು, ದರೋಡೆಕೋರರು ಇರಬಹುದು. ಅವರು ರೈತರ ಶತ್ರುಗಳಾಗಬಹುದು ಎಂದು ದಿಲಾವರ್ ಅಭಿಪ್ರಾಯಪಟ್ಟಿದ್ದಾರೆ.
ರೈತರ ಪ್ರತಿಭಟನೆಯಿಂದ ಹಕ್ಕಿ ಜ್ವರ ಹೆಚ್ಚಲಿದೆ ಎನ್ನುವುದನ್ನು ಒತ್ತಿ ಹೇಳಿರುವ ಮದನ್, ಮುಂದಿನ ಕೆಲ ದಿನಗಳಲ್ಲಿ ಪ್ರತಿಭಟನಾ ಸ್ಥಳದಿಂದ ರೈತರನ್ನು ತೆರವು ಮಾಡದಿದ್ದರೆ ತುಂಬಾನೇ ಕಷ್ಟವಾಗಲಿದೆ. ಪ್ರತಿಭಟನಾಕಾರರಿಂದ ಹಕ್ಕಿಜ್ವರ ಹೆಚ್ಚಲಿದೆ ಎಂದು ಹೇಳಿದ್ದಾರೆ.
ಇನ್ನು, ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮದನ್ ಹೇಳಿಕೆಯಿಂದ ಬಿಜೆಪಿ ನಾಯಕರ ಆಲೋಚನೆ ಏನು ಎನ್ನುವುದು ಗೊತ್ತಾಗುತ್ತಿದೆ ಎಂದು ಜರಿದಿದ್ದಾರೆ. ಶುಕ್ರವಾರ ರೈತರು ಹಾಗೂ ಕೇಂದ್ರ ಸರ್ಕಾರ ಸಭೆ ನಡೆಸಿತ್ತು. ಆದರೆ, ಸಭೆ ಯಶಸ್ವಿ ಆಗಿಲ್ಲ.
भाजपा, राजस्थान के विधायक मदन दिलावर जी का किसानों के लिए आतंकवादी, लुटेरे जैसे शब्दों का इस्तेमाल करना शर्मनाक है।
जिस अन्नदाता ने आपके पेट में अन्न पहुँचाया उनके आंदोलन को आप पिकनिक बता रहे हैं, बर्ड फ्लू के लिए ज़िम्मेदार बता रहे हैं ?
आपका यह बयान भाजपा की सोच दर्शाता है। pic.twitter.com/1oKKeZeaNu
— Govind Singh Dotasra (@GovindDotasra) January 9, 2021
Tv9 Kannada Facebook live | ರಾಜ್ಯದಲ್ಲಿ ಹಕ್ಕಿ ಜ್ವರ ಆತಂಕ: ಮುಂಜಾಗ್ರತಾ ಕ್ರಮಗಳೇನು?- ಇಲ್ಲಿದೆ ತಜ್ಞರ ಉತ್ತರ