ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್ ಗಣರಾಜ್ಯೋತ್ಸವದ ಮುಖ್ಯ ಅತಿಥಿ
ಇಂಗ್ಲೆಂಡ್ನಲ್ಲಿ ರೂಪಾಂತರಿ ಕೊರೊನಾ ಕಾಣಿಸಿಕೊಂಡಿತ್ತು. ಇದನ್ನು ಕೊರೊನಾ ಎರಡನೇ ಅಲೆ ಎಂದೇ ಬಣ್ಣಿಸಲಾಗಿತ್ತು. ಅಲ್ಲದೆ, ಈ ಸಮಯದಲ್ಲಿ ಇಂಗ್ಲೆಡ್ ಪ್ರಧಾನಿ ಭಾರತಕ್ಕೆ ಬರೋದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಕೂಡ ಅನೇಕರು ಕೇಳಿದ್ದರು.
ನವದೆಹಲಿ: ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್ ಸಂತೋಕಿ ಅವರು ಈ ಬಾರಿ ದೇಶದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇಂಗ್ಲೆಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ ರದ್ದು ಮಾಡಿದ ಹಿನ್ನೆಲೆಯಲ್ಲಿ ಚಂದ್ರಿಕಾಪ್ರಸಾದ್ಗೆ ಆಹ್ವಾನ ನೀಡಲಾಗಿತ್ತು.
ಇಂಗ್ಲೆಂಡ್ನಲ್ಲಿ ರೂಪಾಂತರಿ ಕೊರೊನಾ ಕಾಣಿಸಿಕೊಂಡಿತ್ತು. ಇದನ್ನು ಕೊರೊನಾ ಎರಡನೇ ಅಲೆ ಎಂದೇ ಬಣ್ಣಿಸಲಾಗಿತ್ತು. ಅಲ್ಲದೆ, ಈ ಸಮಯದಲ್ಲಿ ಇಂಗ್ಲೆಡ್ ಪ್ರಧಾನಿ ಭಾರತಕ್ಕೆ ಬರೋದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಕೂಡ ಅನೇಕರು ಕೇಳಿದ್ದರು. ಈ ಬೆನ್ನಲ್ಲೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರುವುದಿಲ್ಲ ಎಂದು ಬೋರಿಸ್ ಜಾನ್ಸನ್ ಸ್ಪಷ್ಟನೆ ನೀಡಿದ್ದರು.
ಈ ವಾರದ ಆರಂಭದಲ್ಲಿ, ವಿದೇಶಾಂಗ ಸಚಿವಾಲಯ ಆಯೋಜಿಸಿದ್ದ ಪ್ರವಾಸಿ ಭಾರತೀಯ ದಿವಸ್ ಸಮಾವೇಶದಲ್ಲಿ ಚಂದ್ರಿಕಾಪ್ರಸಾದ್ ಮುಖ್ಯ ಅತಿಥಿಯಾಗಿದ್ದರು. ಚಂದ್ರಿಕಾಪ್ರಸಾದ್ ಭಾರತ ಮೂಲದವರು. ಇವರು 2020ರ ಜುಲೈನಲ್ಲಿ ಸುರಿನಾಮ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಪಕ್ಷವಾದ ಪ್ರೋಗ್ರೆಸ್ಸಿವ್ ರಿಫಾರ್ಮ್ ಪಾರ್ಟಿ ಚುನಾವಣೆಯಲ್ಲಿ 51 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆದ್ದಿತು. ಅವರ ಗೆಲುವು ದಾಸಿ ಬೌಟರ್ಸೆ ಅವರ ಸರ್ವಾಧಿಕಾರಿ ಆಡಳಿತವನ್ನು ಕೊನೆಗೊಳಿಸಿತ್ತು.
ಹೇಗೂ ಮುಖ್ಯ ಅತಿಥಿಗಳಿಲ್ಲ.. ಗಣರಾಜ್ಯೋತ್ಸವ ಸಮಾರಂಭ ಆಚರಿಸುವುದೂ ಬೇಡ: ಶಶಿ ತರೂರ್