Kisan Mahapanchayat: ರೈತರು ಒಗ್ಗಟ್ಟಾಗಿದ್ದಾರೆ, ಪ್ರತಿಭಟನೆ ಮುಗಿಯುವುದಿಲ್ಲ: ರಾಕೇಶ್ ಟಿಕಾಯತ್

|

Updated on: Mar 14, 2024 | 6:19 PM

ನಾಡಿನ ರೈತರು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸರ್ಕಾರಕ್ಕೆ ಬಂದಿದ್ದು, ಸರ್ಕಾರ ಮಧ್ಯಸ್ಥಿಕೆ ವಹಿಸಿ ಪರಿಹಾರ ನೀಡದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದರು. "ಸರ್ಕಾರವು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು, ಈ ಆಂದೋಲನವು ಕೊನೆಗೊಳ್ಳುವುದಿಲ್ಲ ಎಂದು ಗುರುವಾರ ನಡೆದ ರೈತ ಸಮಾವೇಶದ ಕುರಿತು ಮಾಹಿತಿ ನೀಡಿದ ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

Kisan Mahapanchayat: ರೈತರು ಒಗ್ಗಟ್ಟಾಗಿದ್ದಾರೆ, ಪ್ರತಿಭಟನೆ ಮುಗಿಯುವುದಿಲ್ಲ: ರಾಕೇಶ್ ಟಿಕಾಯತ್
ಕಿಸಾನ್ ಮಹಾಪಂಚಾಯತ್
Image Credit source: X/@RakeshTikaitBKU
Follow us on

ದೆಹಲಿ ಮಾರ್ಚ್ 14: ಕನಿಷ್ಠ ಬೆಂಬಲ ಬೆಲೆ (MSP) ಕುರಿತ ಕಾನೂನು ಸೇರಿದಂತೆ ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ (SKM) ಗುರುವಾರ ಆಯೋಜಿಸಿದ್ದ ‘ಕಿಸಾನ್ ಮಹಾಪಂಚಾಯತ್’ನಲ್ಲಿ (Kisan Mahapanchayat) ಪಾಲ್ಗೊಳ್ಳಲು ಪಂಜಾಬ್ ರೈತರು ದೆಹಲಿಯ ರಾಮಲೀಲಾ ಮೈದಾನದಲ್ಲಿ (Ramlila Maidan) ಜಮಾಯಿಸಿದ್ದಾರೆ. ದೆಹಲಿ ಪೊಲೀಸರು ಪ್ರತಿಭಟನಾ ನಿರತ ರೈತರಿಗೆ 5,000ಕ್ಕಿಂತ ಹೆಚ್ಚು ಜನರು ಸೇರಬಾರದು, ಟ್ರ್ಯಾಕ್ಟರ್ ಟ್ರಾಲಿಗಳು ಮತ್ತು ಮೈದಾನದಲ್ಲಿ ಮೆರವಣಿಗೆ ಮಾಡಬಾರದು ಎಂಬ ಷರತ್ತಿನೊಂದಿಗೆ ‘ಮಹಾಪಂಚಾಯತ್’ ನಡೆಸಲು ಅನುಮತಿ ನೀಡಿದ್ದರು.

ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರೊಬ್ಬರು ಪ್ರತಿಭಟನೆಯ ಪ್ರಮುಖ ಬೇಡಿಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಎಂದಿದ್ದಾರೆ.”ನಮ್ಮ ಮುಖ್ಯ ಬೇಡಿಕೆ ಕಾನೂನುಬದ್ಧವಾಗಿ ಖಾತರಿಪಡಿಸಿದ ಕನಿಷ್ಠ ಬೆಂಬಲ ಬೆಲೆ” ಎಂದು ಪಶ್ಚಿಮ ಬಂಗಾಳದ 39 ವರ್ಷದ ಉತ್ಪಲ್ ಬಿಸ್ವಾಸ್ ಹೇಳಿದರು. “ಇಂದಿನ ಪ್ರತಿಭಟನೆಯು ಒಂದು ದಿನದವರೆಗೆ ಇರುತ್ತದೆ. ಆದರೆ ಅದು ಹೇಗೆ ಮುಂದುವರಿಯುತ್ತದೆ ಎಂಬುದನ್ನು ನೋಡೋಣ ಎಂದಿದ್ದಾರೆ ಅವರು.

ನಮ್ಮ ಗುರಿ ತಲುಪಲು ದೂರವಿಲ್ಲ: ದರ್ಶನ್ ಪಾಲ್

ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಗುರುವಾರದ ರೈತರ ಸಭೆ ರೈತರ ಶಕ್ತಿಯ ಪ್ರತೀಕವಾಗಿದೆ. “ಈ ಸಭೆಯ ಮೂಲಕ, ನಾವು ನಮ್ಮ ಗುರಿಗಳನ್ನು ತಲುಪಲು ಹೆಚ್ಚು ದೂರವಿಲ್ಲ ಎಂದು ಸರ್ಕಾರಿ ಅಧಿಕಾರಿಗಳಿಗೆ ತೋರಿಸಲು ನಾವು ಬಯಸುತ್ತೇವೆ” ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ (SKM) ನ ದರ್ಶನ್ ಪಾಲ್ ಹೇಳಿದ್ದಾರೆ.

ಟಿಕಾಯತ್ ಮಾತು

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ರೈತರು ಒಗ್ಗಟ್ಟಾಗಿದ್ದಾರೆ: ಟಿಕಾಯತ್

ಗುರುವಾರ ನಡೆದ ರೈತ ಸಮಾವೇಶದ ಕುರಿತು ಮಾಹಿತಿ ನೀಡಿದ ರೈತ ಮುಖಂಡ ರಾಕೇಶ್ ಟಿಕಾಯತ್ , ನಾಡಿನ ರೈತರು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸರ್ಕಾರಕ್ಕೆ ಬಂದಿದ್ದು, ಸರ್ಕಾರ ಮಧ್ಯಸ್ಥಿಕೆ ವಹಿಸಿ ಪರಿಹಾರ ನೀಡದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದರು. “ಸರ್ಕಾರವು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು, ಈ ಆಂದೋಲನವು ಕೊನೆಗೊಳ್ಳುವುದಿಲ್ಲ ಎಂದು ಟಿಕಾಯತ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಶರದ್ ಪವಾರ್ ಹೆಸರು, ಚಿತ್ರ ಬಳಸಿದ್ದಕ್ಕೆ ಅಜಿತ್ ಪವಾರ್ ಬಣವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

ದೆಹಲಿಯಲ್ಲಿ ಸಂಚಾರ ದಟ್ಟಣೆ

ರೈತರ ಪ್ರತಿಭಟನೆಯಿಂದಾಗಿ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗಿದ್ದರೂ ವಾಹನಗಳು ಮುಂದೆ ಸಾಗುವಂತೆ ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು. “ನಾವು ವಾಹನಗಳನ್ನು ಬೇರೆಡೆಗೆ ತಿರುಗಿಸುವ ಯೋಜನೆಗಳ ಬಗ್ಗೆ ಟ್ರಾಫಿಕ್ ಪೊಲೀಸರೊಂದಿಗೆ ಮಾತನಾಡಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಆದಾಗ್ಯೂ ದೆಹಲಿ ಟ್ರಾಫಿಕ್ ಪೋಲೀಸರು ಸಂಚಾರ ನಿಯಮಗಳು ಮತ್ತು ಮಾರ್ಗದ ತಿರುವುಗಳ ಬಗ್ಗೆ ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ