ಜೆಕೆಸಿಎ ಹಣ ದುರುಪಯೋಗ ಪ್ರಕರಣ: ಫರೂಕ್ ಅಬ್ದುಲ್ಲಾರ ರೂ. 11.86 ಕೋಟಿ ಮೌಲ್ಯದ ಆಸ್ತಿ ಜಪ್ತಿ

|

Updated on: Dec 19, 2020 | 9:27 PM

2006-2012ರವರೆಗೆ ಜೆಕೆಸಿಎಯ ಅಧ್ಯಕ್ಷರಾಗಿದ್ದ ಫರೂಕ್ ತಮ್ಮ ಹುದ್ದೆಯ ದುರ್ಲಾಭ ಪಡೆದು ಸುಮಾರು 45 ಕೋಟಿ ರೂಪಾಯಿಗಳ ಅವ್ಯವಹಾರ ಎಸಗಿರುವುದು ತಾನು ನಡೆಸಿರುವ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಈಡಿ ಹೇಳಿದೆ.

ಜೆಕೆಸಿಎ ಹಣ ದುರುಪಯೋಗ ಪ್ರಕರಣ: ಫರೂಕ್ ಅಬ್ದುಲ್ಲಾರ ರೂ. 11.86 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಫರೂಕ್ ಅಬ್ದುಲ್ಲಾ
Follow us on

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ (ಜೆಕೆಸಿಎ) ಹಣ ದುರುಪಯೋಗಪಡಿಸಿಕೊಂಡಿರುವ ಆರೋಪ ಎದುರಿಸುತ್ತಿರುವ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಮತ್ತು ಸಂಸದ ಫರೂಕ್ ಅಬ್ದುಲ್ಲಾ ಅವರ ರೂ.11.86 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಈಡಿ) ಶನಿವಾರದಂದು ಜಪ್ತಿ ಮಾಡಿದೆ.

ಈ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ) ಜೆಕೆಸಿಎಯಲ್ಲಿ 2002 ಮತ್ತು 2011ರ ಮಧ್ಯೆದ ಅವಧಿಯಲ್ಲಿ ರೂ 43.69 ಕೋಟಿಗಳ ಅವ್ಯವಹಾರ ನಡೆದಿದೆಯೆಂದು ತಾನು ಸಲ್ಲಿಸಿದ ದೋಷಾರೋಪಣೆ ಪಟ್ಟಿಯಲ್ಲಿ ಇತರ ಮೂವರೊದಿಗೆ ಫರೂಕ್ ಅಬ್ದುಲ್ಲಾ ಅವರ ಹೆಸರನ್ನೂ ಉಲ್ಲೇಖಿಸಿತ್ತು.

2006-2012ರವರೆಗೆ ಜೆಕೆಸಿಎಯ ಅಧ್ಯಕ್ಷರಾಗಿದ್ದ ಫರೂಕ್ ತಮ್ಮ ಹುದ್ದೆಯ ದುರ್ಲಾಭ ಪಡೆದು ಸುಮಾರು 45 ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿರುವುದು ತಾನು ನಡೆಸಿರುವ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಈಡಿ ಹೇಳಿದೆ.

ಜಾರಿ ನಿರ್ದೇಶನಾಲಯ

 

ಜೆಕೆಸಿಎ

ಹಣಕಾಸಿನ ಅವ್ಯವಹಾರಗನ್ನು ತನಿಖೆ ಮಾಡುವ ಈಡಿ ಇಂದು ಮುಟ್ಟುಗೋಲು ಹಾಕಿಕೊಂಡಿರುವ ಫರೂಕ್ ಆಸ್ತಿಗಳಲ್ಲಿ 3 ಗೃಹ ನಿವೇಶನಗಳು, ಒಂದು ವಾಣಿಜ್ಯ ನಿವೇಶನ ಮತ್ತು ನಾಲ್ಕು ಜಮೀನಿನ ಭಾಗಗಳು ಸೇರಿವೆ. ಈಡಿ ಮೂಲಗಳ ಪ್ರಕಾರ ಸದರಿ ಆಸ್ತಿಗಳ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 60 ರಿಂದ 79 ಕೋಟಿ ರೂಪಾಯಿಗಳಷ್ಟಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರದಲ್ಲಿ ಅಕ್ಟೋಬರ್ ತಿಂಗಳು ಎರಡು ಬಾರಿ ಈಡಿ ಅಧಿಕಾರಿಗಳೆದರು ವಿಚಾರಣೆಗೆ ಹಾಜರಾಗಿದ್ದ ಫರೂಕ್ ಮತ್ತು ನ್ಯಾಶನಲ್ ಕಾನ್ಫರೆನ್ಸ್, ಜೆಕೆಸಿಎಯಲ್ಲಿನ ಹಣ ದುರುಪಯೋಗದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾವನ್ನು ವಾಪಸ್ಸು ಪಡೆಯಲು ತಾವು ರಾಜ್ಯದ ವಿರೋಧ ಪಕ್ಷಗಳನ್ನು ಒಂದುಗೂಡಿಸಲು ಪ್ರಯತ್ನಿಸುವುದರಿಂದ ತಮ್ಮನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದು ಫರೂಕ್ ಹೇಳಿದ್ದಾರೆ.

ಏತನ್ಮಧ್ಯೆ, ಫರೂಕ್ ಅವರ ಪುತ್ರ ಒಮರ್ ಅಬ್ದುಲ್ಲಾ ಅವರು ಟ್ವೀಟ್ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳು ಪಿತ್ರಾರ್ಜಿತ ಎಂದು ಹೇಳಿದ್ದಾರೆ.

‘‘1970ರಷ್ಟು ಹಿಂದಿನಿಂದ ನಾವು ಹೊಂದಿರುವ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ, ಅವುಗಳಲ್ಲಿ ಒಂದು ಇತ್ತೀಚಿಗೆ ಅಂದರೆ 2003ರಲ್ಲಿ ನಿರ್ಮಿಸಿರುವ ಕಟ್ಟಡವಾಗಿದೆ. ಆಸ್ತಿಗಳನ್ನು ಜಪ್ರಿ ಮಾಡುವುದಕ್ಕೆ ಅವರಲ್ಲಿ ಯಾವುದೇ ಸಮರ್ಥನೆ ಇಲ್ಲ ಯಾಕೆಂದರೆ, ಅವರು ತನಿಖೆ ಮಾಡುತ್ತಿರುವ ‘ಅಪರಾಧ’ದ ಹಣದಿಂದ ಖರೀದಿಸಿದ್ದು

ಒಮರ್ ಅಬ್ದುಲ್ಲಾ

ಎನ್ನುವ ಪ್ರಾಥಮಿಕ ಪರೀಕ್ಷಣೆಯೇ ಇಲ್ಲಿ ವಿಫಲವಾಗಿದೆ,’’ ಎಂದು ಒಮರ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಮೊದಲು ಮಾಧ್ಯಮಗಳೊಂದಿಗೆ ಮಾತಾಡಿದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಬಾತ್ಮೀದಾರೊಬ್ಬರು, ‘‘ಗುಪ್ಕರ್ ಘೋಷಣೆಯ ನಂತರ ಈಡಿಯಿಂದ ಪತ್ರ ಬಂದಿದೆ. ಕಾಶ್ಮೀರ್​ನಲ್ಲಿ ಪೀಪಲ್ಸ್ ಅಲಯನ್ಸ್ ರೂಪಿಸಿದ ಹಿನ್ನೆಲೆಯಲ್ಲಿ ಇದೊಂದು ರಾಜಕೀಯ ಷಡ್ಯಂತ್ರ ಎನ್ನುವುದು ಇದರಿಂದ ಸಾಬೀತಾಗುತ್ತದೆ,’’ ಎಂದರು.

ಕಳೆದ ವರ್ಷ ಜುಲೈ ತಿಂಗಳಲ್ಲಿ ಅಂದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಕೆಲವೇ ದಿನ ಮೊದಲು ಫರೂಕ್ ಅವರನ್ನು ಈಡಿ ವಿಚಾರಣೆಗೆ ಕರೆಸಿತ್ತು.