ಜನವರಿ 1ರಿಂದ ವಿದ್ಯಾಗಮ ಶಿಕ್ಷಣ ತರಗತಿ ಆರಂಭ: ನಿಯಮಗಳೇನು ಗೊತ್ತೇ?

| Updated By: ಆಯೇಷಾ ಬಾನು

Updated on: Dec 20, 2020 | 8:03 AM

ಜನವರಿ 1ರಿಂದ ವಿದ್ಯಾಗಮ ಶಿಕ್ಷಣ ಆರಂಭಗೊಳ್ಳಲಿದೆ. ಮಕ್ಕಳಿಗೆ ವಿದ್ಯಾಗಮ ತರಗತಿಗೆ ಬರಲು ಯಾವುದೇ ಒತ್ತಡ ಹೇರುವಂತಿಲ್ಲ. ಹಾಜರಾತಿ ಕಡ್ಡಾಯವಿಲ್ಲ. ಮೂರು ಪಾಳಿಯಲ್ಲಿ ವಿದ್ಯಾಗಮ ನಡೆಯಲಿದ್ದು, ವಾರದಲ್ಲಿ ಮೂರು ದಿನ ಮಾತ್ರ ಒಂದು ಮಗುವಿಗೆ ತರಗತಿ ತೆಗೆದುಕೊಳ್ಳಲಾಗುವುದು.

ಜನವರಿ 1ರಿಂದ ವಿದ್ಯಾಗಮ ಶಿಕ್ಷಣ ತರಗತಿ ಆರಂಭ: ನಿಯಮಗಳೇನು ಗೊತ್ತೇ?
ವಿದ್ಯಾಗಮ ಶಿಕ್ಷಣ ತರಗತಿ ಆರಂಭ
Follow us on

ಬೆಂಗಳೂರು: ಸರಕಾರ ವಿದ್ಯಾಗಮ ಶಿಕ್ಷಣವನ್ನು ಜಾರಿಗೆ ತರಲು ತೀರ್ಮಾನಿಸಿದೆ. ಜನವರಿ 1ರಿಂದ ದ್ವಿತೀಯ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಕಾಲೇಜುಗಳು ಆರಂಭಗೊಳ್ಳಲಿದೆ. ಕೊರೊನಾ ವೈಸರ್​ನಿಂದಾಗಿ ಸರಕಾರ ಹೆಚ್ಚು ಎಚ್ಚೆತ್ತೆಕೊಳ್ಳಲೇ ಬೇಕಿದೆ. ಪರಿಸ್ಥಿತಿ‌ಯನ್ನು ನೋಡಿಕೊಂಡು ಸ್ಥಳೀಯ ಶಾಲೆಗಳನ್ನು ಆರಂಭ ಮಾಡುವ ಅಧಿಕಾರವನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಬಿಇಒಗಳಿಗೆ ನೀಡಲಾಗಿದೆ ಎಂದು ಸರಕಾರ ತಿಳಿಸಿದೆ.

ವಿದ್ಯಾಗಮ ಶಿಕ್ಷಣದ ನಿಯಮಗಳು:
ಮಕ್ಕಳಿಗೆ ವಿದ್ಯಾಗಮ ತರಗತಿಗೆ ಬರಲು ಯಾವುದೇ ಒತ್ತಡ ಹೇರುವಂತಿಲ್ಲ. ಹಾಜರಾತಿ ಕಡ್ಡಾಯವಿಲ್ಲ. ಮೂರು ಪಾಳಿಯಲ್ಲಿ ವಿದ್ಯಾಗಮ ನಡೆಯಲಿದ್ದು, ವಾರದಲ್ಲಿ ಮೂರು ದಿನ ಮಾತ್ರ ಒಂದು ಮಗುವಿಗೆ ತರಗತಿ ತೆಗೆದುಕೊಳ್ಳಲಾಗುವುದು. ಹಾಗೂ ದಿನಕ್ಕೆ 3ಗಂಟೆ ಮಾತ್ರ ವಿದ್ಯಾಗಮ ತರಗತಿ ನಡೆಸಲಾಗುವುದು. ಶಾಲೆಯಲ್ಲಿ ಊಟದ ವಿತರಣೆ ಇರುವುದಿಲ್ಲ. ಹಾಗೂ ರೇಷನ್​ನನ್ನು ಮಕ್ಕಳ ಮನೆಗೆ ಕಳುಹಿಸಲು ಸರ್ಕಾರ ತೀರ್ಮಾನಿಸಿದೆ.

ಮಕ್ಕಳ ಶಾಲೆಯ ಫೀಸ್ ಎಷ್ಟು?
ಫೀಸ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ, ಖಾಸಗಿ ಶಾಲೆಗಳು ಆಯಾ ಪೋಷಕರ ಜೊತೆ ಚರ್ಚೆ ಮಾಡಿ ಫೀಸ್ ಅಂತಿಮ ಮಾಡಬೇಕು. ನಿರ್ಧಾರವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಸರಕಾರ ಫೀಸ್ ನಿಗದಿ ಮಾಡುತ್ತೆ.

8- 9 ಗಂಟೆ ನಂತರ ಶಾಲೆಗಳ ಆರಂಭ:
ಬೆಳ್ಳಂಬೆಳಗ್ಗೆ ಶಾಲೆಗಳನ್ನು ಪ್ರಾರಂಭಿಸುವ ಬದಲು 8-9 ಗಂಟೆ ನಂತರ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಬೆಳಗ್ಗೆ ತಂಪು ವಾತಾವರಣ ಇರುವುದರಿಂದ ಮಕ್ಕಳು ಶೀತ, ನೆಗಡಿಗೆ ಬೇಗ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಕೊಂಚ ವಿಳಂಬವಾಗಿ ಶಾಲೆಗಳ ಆರಂಭಕ್ಕೆ ಇಲಾಖೆ ಸೂಚಿಸಿದೆ.

ವಿದ್ಯಾಗಮ ಕಾರ್ಯಕ್ರಮ ಬೇಕಾ? ಬೇಡವಾ?