AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ […]

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!
KUSHAL V
|

Updated on: Aug 02, 2020 | 3:36 PM

Share

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ ನುಗ್ಗಿದೆ. ಅದೃಷ್ಟವಶಾತ್​ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಕಾಲಿಗೆ ಮಾತ್ರ ಗಾಯಗಳಾಗಿವೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ಕೇಸ್​ ದಾಖಲಿಸಿದರು. ಅಚ್ಚರಿಯ ಸಂಗತಿಯೆಂದರೆ, ಮಹಿಳೆಯ ವಿಚಾರಣೆ ವೇಳೆ ನಾನು ಕಾರ್​ನಲ್ಲಿ ಕೂತು ಐಸ್​ಕ್ರೀಮ್ ತಿನ್ನುತ್ತಿದ್ದೆ. ಇದೇ ವೇಳೆ ನನ್ನ ನಾಯಿ ಗೇರ್​ ಮೇಲೆ ಕಾಲಿಟ್ಟು ಕಿಟಕಿಯಿಂದ ಹೊರಕ್ಕೆ ಜಿಗಿಯಿತು. ಹಾಗಾಗಿ, ನಿಂತಿದ್ದ ವಾಹನ ಮುನ್ನುಗ್ಗಿ ಅಪಘಾತ ಸಂಭವಿಸಿತು ಎಂದು ಹೇಳಿದ್ದಳಂತೆ.

ಸದ್ಯ ಮಹಿಳೆಯನ್ನ ಜಾಮೀನಿನ ಮೇಲೆ ರಿಲೀಸ್​ ಮಾಡಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ