ದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜನವರಿ 1, 2021ರಿಂದ ಎಲ್ಲಾ ನಾಲ್ಕು ಚಕ್ರ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಮೋಟಾರು ವಾಹನ ನಿಯಮ 1989ಕ್ಕೆ ತಿದ್ದುಪಡಿಯನ್ನು ಮಾಡುವ ಮೂಲಕ ಸಚಿವಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಹೊಸದಾಗಿ ತೃತೀಯ ವಿಮೆಯನ್ನು (ಥರ್ಡ್ ಪಾರ್ಟಿ ವಿಮೆ) ಪಡೆಯುವಾಗ ಮಾನ್ಯ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದ್ದು, ಈ ಅಧಿಸೂಚನೆಯು ಎಲೆಕ್ಟ್ರಾನಿಕ್ ಹಣ ಪಾವತಿ ಪದ್ಧತಿ ಮೂಲಕ ಮಾತ್ರ ಟೋಲ್ ಪ್ಲಾಜಾನಲ್ಲಿ ಶೇಕಡಾ 100ರಷ್ಟು ಶುಲ್ಕವನ್ನು ಪಾವತಿ ಮಾಡಬೇಕು. ವಾಹನಗಳು ಮನಬಂದಂತೆ ಟೋಲ್ ಪ್ಲಾಜಾನಲ್ಲಿ ಹಾದುಹೋಗುವುದನ್ನು ಖಚಿತಪಡಿಸಿಕೊಳ್ಳಲು ಇದು ಒಂದು ಪ್ರಮುಖ ಹೆಜ್ಜೆಯಾಗಿರುತ್ತದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂಬಂಧ ಅನೇಕ ವಾಹಿನಿಗಳ ಮೂಲಕ ಫಾಸ್ಟ್ಟ್ ಟ್ಯಾಗ್ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವ ಭೌತಿಕ ಸ್ಥಳಗಳು ಮತ್ತು ಆನ್ಲೈನ್ ಕಾರ್ಯವಿಧಾನದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಈ ಮೂಲಕ ನಾಗರೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮುಂದಿನ ಎರಡು ತಿಂಗಳಲ್ಲಿ ಈ ಫಾಸ್ಟ್ ಟ್ಯಾಗ್ನ ತಮ್ಮ ವಾಹನಗಳಿಗೆ ಜೋಡಿಸಲು ಸಾಧ್ಯವಾಗುತ್ತದೆ.
ಡಿಸೆಂಬರ್ 1, 2017 ರಿಂದ, ಹೊಸ ನಾಲ್ಕು ಚಕ್ರ ವಾಹನಗಳ ಎಲ್ಲಾ ನೋಂದಣಿಗೆ ಫಾಸ್ಟ್ ಟ್ಯಾಗ್ನ ಕಡ್ಡಾಯಗೊಳಿಸಲಾಗಿದ್ದು, ಇದನ್ನು ತಯಾರಕರು ಮತ್ತು ವಿತರಕರು ಪೂರೈಸುತ್ತಿದ್ದಾರೆ. ಕೇಂದ್ರ ಮೋಟಾರು ವಾಹನ ನಿಯಮ1989ರ ಪ್ರಕಾರ, ಡಿಸೆಂಬರ್ 1, 2017ರಿಂದ ಹೊಸ ನಾಲ್ಕು ಚಕ್ರ ವಾಹನಗಳ ಎಲ್ಲಾ ನೋಂದಣಿಗೆ ಫಾಸ್ಟ್ ಟ್ಯಾಗ್ನ ಕಡ್ಡಾಯಗೊಳಿಸಲಾಗಿದೆ. ಸಾರಿಗೆ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಿದ ನಂತರವೇ ಫಿಟ್ ನೆಸ್ ಪ್ರಮಾಣಪತ್ರವನ್ನು ನವೀಕರಿಸಲಾಗುವುದು ಎಂದು ಆದೇಶಿಸಲಾಗಿದೆ. ಅದರಂತೆ ರಾಷ್ಟ್ರೀಯ ಪರವಾನಿಗೆ ಇರುವ ವಾಹನಗಳಿಗೆ ಫಾಸ್ಟ್ ಟ್ಯಾಗ್ನ ಫಿಟ್ಮೆಂಟ್ನ ಅಕ್ಟೋಬರ್ 1, 2019ರಿಂದ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ.
ಫಾರ್ಮ್ 51(ವಿಮಾ ಪ್ರಮಾಣಪತ್ರ)ರ ತಿದ್ದುಪಡಿಯ ಮೂಲಕ ಹೊಸ 3ನೇ ವ್ಯಕ್ತಿಯು ವಿಮೆಯನ್ನು ಪಡೆಯುವಾಗ ಮಾನ್ಯ ಫಾಸ್ಟ್ ಟ್ಯಾಗ್ ಐಡಿಯ ವಿವರಗಳನ್ನು ಸೆರೆಹಿಡಿಯಲಾಗುತ್ತದೆ. ಈ ನಿಬಂಧನೆಯು ಏಪ್ರಿಲ್ 1, 2021ರಿಂದ ಅನ್ವಯವಾಗುತ್ತದೆ.
Published On - 4:51 pm, Mon, 9 November 20