ಸೆಲ್ಫಿ ಚಟ: ಆಕಸ್ಮಿಕವಾಗಿ ಪಿಸ್ತೂಲಿನಿಂದ ಹಾರಿದ ಗುಂಡು ತಲುಪಿದೆಲ್ಲಿಗೆ?
ನೋಯ್ಡಾ: 22 ವರ್ಷದ ಯುವಕನೊಬ್ಬ ತನ್ನ ಪಿಸ್ತೂಲಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಪಿಸ್ತೂಲಿನಿಂದ ಗೂಂಡು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಧರ್ಮಪುರ ಗ್ರಾಮದ ನಿವಾಸಿಯಾದ ಸೌರಭ್ ಮಾವಿ ಎಂದು ಗುರುತಿಸಲಾಗಿದ್ದು, ಅವನು ಮತ್ತು ಅವನ ಸ್ನೇಹಿತ ನಕುಲ್ ಶರ್ಮಾ ಎಂಬ ಇಬ್ಬರು ಸ್ನೇಹಿತನ ಮದುವೆಗಾಗಿ ತೆರಳುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ಸೌರಭ್ ಮಾವಿ ದಾರಿಯಲ್ಲಿ ಪಿಸ್ತೂಲನ್ನು ತೆಗೆದುಕೊಂಡು ಸೆಲ್ಫಿಗೆ ಪೋಸ್ […]
ನೋಯ್ಡಾ: 22 ವರ್ಷದ ಯುವಕನೊಬ್ಬ ತನ್ನ ಪಿಸ್ತೂಲಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಪಿಸ್ತೂಲಿನಿಂದ ಗೂಂಡು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಧರ್ಮಪುರ ಗ್ರಾಮದ ನಿವಾಸಿಯಾದ ಸೌರಭ್ ಮಾವಿ ಎಂದು ಗುರುತಿಸಲಾಗಿದ್ದು, ಅವನು ಮತ್ತು ಅವನ ಸ್ನೇಹಿತ ನಕುಲ್ ಶರ್ಮಾ ಎಂಬ ಇಬ್ಬರು ಸ್ನೇಹಿತನ ಮದುವೆಗಾಗಿ ತೆರಳುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.
ಸೌರಭ್ ಮಾವಿ ದಾರಿಯಲ್ಲಿ ಪಿಸ್ತೂಲನ್ನು ತೆಗೆದುಕೊಂಡು ಸೆಲ್ಫಿಗೆ ಪೋಸ್ ನೀಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಿಸ್ತೂಲಿಂದ ಹಾರಿದ ಗುಂಡು ಸೌರಭ್ ಮಾವಿಯ ಎದೆಗೆ ತಗುಲಿದೆ. ಮಾವಿಯ ಸ್ನೇಹಿತ ಶರ್ಮಾ ತಕ್ಷಣ ಆತನನ್ನು ಶಾರದಾ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ತೀವ್ರ ಗಾಯಗಳಿಂದ ಬಳಲುತ್ತಿದ್ದ ಸೌರಭ್ ಮಾವಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
Published On - 3:58 pm, Mon, 9 November 20