ಕೊಲೆಗಾರನಿಗೆ ಅವನು ಕಳಿಸಿದ ಮೆಸೆಜೇ ಮುಳುವಾಯ್ತು! ಪೊಲೀಸರ ಚಾಣಾಕ್ಷತೆಗೆ ಶಹಬಾಸ್ ಅನ್ನಿ..
ಉತ್ತರ ಪ್ರದೇಶ: ಹರ್ಡೊಯ್ ಮೂಲದ 22 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯಾದ ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕಿಬೀಳಲು ಮೃತ ಬಾಲಕನ ಪೋಷಕರಿಗೆ ಆತ ಕಳುಹಿಸಿದ್ದ ಮೆಸೆಜೇ ಉರುಳಾಯಿತು ಅಂದರೆ ನಂಬುತ್ತೀರಾ? ಇಲ್ಲಿದೆ ಆ ರೋಚಕ ಕಥೆ.. ರಾಮ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ, ಸ್ಯಾಂಡಿಲಾ ನಿವಾಸಿಯಾದ ಎಂಟು ವರ್ಷದ ಬಾಲಕನನ್ನು ಅಕ್ಟೋಬರ್ 26 ರಂದು ತನ್ನ ಅಜ್ಜಿಯ ಮನೆಯಿಂದ ಅಪಹರಿಸಿದ್ದ. […]
ಉತ್ತರ ಪ್ರದೇಶ: ಹರ್ಡೊಯ್ ಮೂಲದ 22 ವರ್ಷದ ಯುವಕನೊಬ್ಬ ತನ್ನ ಸೋದರ ಸಂಬಂಧಿಯಾದ ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕಿಬೀಳಲು ಮೃತ ಬಾಲಕನ ಪೋಷಕರಿಗೆ ಆತ ಕಳುಹಿಸಿದ್ದ ಮೆಸೆಜೇ ಉರುಳಾಯಿತು ಅಂದರೆ ನಂಬುತ್ತೀರಾ? ಇಲ್ಲಿದೆ ಆ ರೋಚಕ ಕಥೆ..
ರಾಮ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ, ಸ್ಯಾಂಡಿಲಾ ನಿವಾಸಿಯಾದ ಎಂಟು ವರ್ಷದ ಬಾಲಕನನ್ನು ಅಕ್ಟೋಬರ್ 26 ರಂದು ತನ್ನ ಅಜ್ಜಿಯ ಮನೆಯಿಂದ ಅಪಹರಿಸಿದ್ದ. ಅದೇ ದಿನ ಅವನು ಕದ್ದ ಫೋನ್ ಬಳಸಿ ಬಾಲಕನ ತಂದೆಗೆ ಆತನ ಬಿಡುಗಡೆಗಾಗಿ 2 ಲಕ್ಷ ರೂ. ನೀಡಬೇಕೆಂದು ಸಂದೇಶ ಕಳುಹಿಸಿದ್ದಾನೆ.
ಜೊತೆಗೆ ಸಂದೇಶದಲ್ಲಿ ಅವನು 2 ಲಕ್ಷ ರೂಪಾಯಿಯನ್ನು ಸೀತಾ-ಪುರ್ಗೆ ತೆಗೆದುಕೊಂಡು ಬನ್ನಿ. ಆದ್ರೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಬಾರದು. ತಿಳಿಸಿದರೆ ನಿಮ್ಮ ಮಗನನ್ನು ಕೊಲೆ ಮಾಡಲಾಗುತ್ತದೆ ಎಂದು ಹೆದರಿಸಿದ್ದಾನೆ. ಇದರಿಂದ ಭಯಭೀತರಾದ ಕುಟುಂಬಸ್ಥರು ನವೆಂಬರ್ 4 ರಂದು ಬೆನಿಗಂಜ್ ಪೊಲೀಸ್ ಠಾಣೆಯಲ್ಲಿ ಬಾಲಕ ಕಾಣೆಯಾದ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆಯಲ್ಲಿ ಸೂಪರ್ ಪ್ಲಾನ್ ಮಾಡಿದ ಪೊಲೀಸರು.. ತನಿಖೆ ಚುರುಕುಗೊಳಿಸಿದ ಪೊಲೀಸರು ಒಟ್ಟಾರೆಯಾಗಿ 10 ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಯಲ್ಲಿ ಸೂಪರ್ ಪ್ಲಾನ್ ಮಾಡಿದ ಪೊಲೀಸರು 10 ಶಂಕಿತರಿಗೂ ನನಗೆ ಪೊಲೀಸ್ ಕೆಲಸ ಬೇಕು. ಹಾಗೂ ನನಗೆ ಹಾರ್ಡೋಯಿಯಿಂದ ಸೀತಾಪುರಕ್ಕೆ ಓಡುವ ಸಾಮರ್ಥ್ಯ ಇದೆ ಎಂಬುದನ್ನು ಬರೆಯಲು ತಿಳಿಸಿದ್ದಾರೆ.
10 ಶಂಕಿತರೂ ಬರೆದಿರುವುದನ್ನು ಅಪಹರಣಕಾರನು ಪೋಷಕರಿಗೆ ಕಳುಹಿಸಿದ್ದ ಸಂದೇಶದೊಂದಿಗೆ ತಾಳೆ ಮಾಡಿ ನೋಡಿದ್ದಾರೆ. ಅದರಲ್ಲಿ ರಾಮ್ ಪ್ರತಾಪ್ ಸಿಂಗ್ ಎಂಬಾತ ಪೊಲೀಸ್ ಪದವನ್ನು ಪುಲಿಷ್ (pulish) ಎಂದೂ ಹಾಗೂ ಸೀತಾಪುರವನ್ನು ಸೀತಾ-ಪುರ್ (Seeta-pur) ಎಂದು ಬರೆದಿದ್ದ! ಇದನ್ನು ಗಮನಿಸಿದ ಪೊಲೀಸರಿಗೆ ಆರೋಪಿ ಯಾರು ಎಂಬುದು ತಕ್ಷಣ ಅರಿವಿಗೆ ಬಂದಿದೆ. ಕೂಡಲೇ ರಾಮ್ ಪ್ರತಾಪ್ ಸಿಂಗ್ನನ್ನು ಬಂಧಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪಾಪಿ ಯುವಕ ಅಪಹರಣ ಮಾಡಿದ್ದ ಬಾಲಕನನ್ನು ಕೊಂದು ಮುಗಿಸಿದ್ದ.
Published On - 2:32 pm, Mon, 9 November 20