ಅರ್ನಬ್ಗೆ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್ | Bombay High Court denies bail to Arnab Goswami
ಅನ್ವಯ್ ನಾಯ್ಕ್ ಹೆಸರಿನ ಒಳಾಂಗಣ ವಿನ್ಯಾಸಕಾರನ(ಇಂಟೀರಿಯರ್ ಡಿಸೈನರ್) ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಆರ್ನಬ್ ಗೋಸ್ವಾಮಿಗೆ ಬಾಂಬೆ ಹೈ ಕೋರ್ಟ್ ಇಂದು ಜಾಮೀನು ನಿರಾಕಕರಿಸಿದ್ದು ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. 2018ರಲ್ಲಿ ಜರುಗಿದ ಅನ್ವಯ್ ನಾಯ್ಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ನವೆಂಬರ್ 4ರಂದು ಅರ್ನಬ್ ಗೋಸ್ವಾಮಿಯವರನ್ನು ಅಲಿಬಾಗ್ ಮತ್ತು ಮುಂಬೈ ಪೊಲೀಸರು ಬಂಧಿಸಿದ್ದರು. ಸಂಬಂಧಪಟ್ಟ ಕೋರ್ಟಿನ […]
ಅನ್ವಯ್ ನಾಯ್ಕ್ ಹೆಸರಿನ ಒಳಾಂಗಣ ವಿನ್ಯಾಸಕಾರನ(ಇಂಟೀರಿಯರ್ ಡಿಸೈನರ್) ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಆರ್ನಬ್ ಗೋಸ್ವಾಮಿಗೆ ಬಾಂಬೆ ಹೈ ಕೋರ್ಟ್ ಇಂದು ಜಾಮೀನು ನಿರಾಕಕರಿಸಿದ್ದು ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
2018ರಲ್ಲಿ ಜರುಗಿದ ಅನ್ವಯ್ ನಾಯ್ಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ನವೆಂಬರ್ 4ರಂದು ಅರ್ನಬ್ ಗೋಸ್ವಾಮಿಯವರನ್ನು ಅಲಿಬಾಗ್ ಮತ್ತು ಮುಂಬೈ ಪೊಲೀಸರು ಬಂಧಿಸಿದ್ದರು. ಸಂಬಂಧಪಟ್ಟ ಕೋರ್ಟಿನ ಅನುಮತಿ ಪಡೆಯದೆ ಮುಚ್ಚಿಹೋಗಿರುವ ಪ್ರಕರಣದಲ್ಲಿ ತನ್ನನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಬಾಂಬೆ ಹೈಕೋರ್ಟ್ಗೆ ಅರ್ನಬ್ ಮನವಿ ಸಲ್ಲಿಸಿದ್ದರು. ಮುಂಬೈ ಪೊಲೀಸರು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆಯೂ ಅವರು ಮನವಿಯಲ್ಲಿ ದೂರಿದ್ದರು.
ಅರ್ನಬ್ ಅವರ ಅರ್ಜಿಯನ್ನು ಎಸ್.ಎಸ್. ಶಿಂಧೆ ಮತ್ತು ಎಮ್.ಎಸ್.ಕಾರ್ಣಿಕ್ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಜಾಮೀನು ನಿರಾಕರಿಸುವುದರ ಜೊತೆಗೆ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಅರ್ನಬ್ ಈಗ ಜಾಮೀನಿಗಾಗಿ ಅಲಿಬಾಗ್ ಸೆಷನ್ಸ್ ಕೋರ್ಟ್ ಅರ್ಜಿ ಸಲ್ಲಿಸುವ ಪ್ರಮೇಯ ಎದುರಾಗಿದೆ.
ಇದಕ್ಕೆ ಮೊದಲು ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯ ವೇಳೆ, 2018ರ ಮುಚ್ಚಿಹೋಗಿದ್ದ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡ ಬಗ್ಗೆ, ಮುಂಬೈ ಪೊಲೀಸ್ ಮತ್ತು ಮುಂಬೈ ಸರ್ಕಾರದ ಬಗ್ಗೆ ಆರ್ನಬ್ ಹಲವು ಆಕ್ಷೇಪಣೆಗಳನ್ನು ಪೀಠದ ಗಮನಕ್ಕೆ ತಂದಿದ್ದರು. ಅವರ ಪರ ವಾದಿಸಿದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ, 2019ರಲ್ಲಿ ಮುಚ್ಚಿಹೋಗಿದ್ದ ಕೇಸನ್ನು ಮತ್ತೆ ತೆರೆದರೂ ತಮ್ಮ ಕಕ್ಷಿದಾರ ನ್ಯಾಯಾಂಗ ಬಂಧನದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ ಎಂದಿದ್ದರು. ಪತ್ರಕರ್ತನ ಮತ್ತೊಬ್ಬ ವಕೀ
ಲ ಆಬಾದ್ ಪೊಂಡಾ, ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬವಾಗಬಹುದೆಂಬ ಕಾರಣಕ್ಕೆ ಬಾಂಬೆ ಹೈ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲಾಗಿದೆಯೆಂದು ತಿಳಿಸಿದ್ದರು.
ಮುಂಬೈ ಪೊಲೀಸ್ ಮತ್ತು ಸರ್ಕಾರದ ಪರ ವಾದಿಸಿದ ಹಿರಿಯ ನ್ಯಾಯವಾದಿಗಳಾದ ಅಮಿತ್ ದೇಸಾಯಿ ಮತ್ತು ಶಿರೀಶ್ ಗುಪ್ತೆ, ಅರ್ನಬ್ ಅವರಿಗೇನಾದರೂ ಜಾಮೀನು ನೀಡಿದರೆ ಬಾಂಬೆ ಹೈ ಕೋರ್ಟ್ಗೆ ಜಾಮೀನು ಅರ್ಜಿಗಳ ಮಹಾಪೂರವೇ ಹರಿದು ಬರಬಹುದು. ಆರ್ನಬ್ ಜಾಮೀನು ಪಡೆದು ಹೊರಬಂದರೆ ಅನ್ವಯ್ ನಾಯ್ಕ್ ಕುಟುಂಬಕ್ಕೆ ಅಪಾಯವಿದೆ ಎಂಬ ವಾದಗಳನ್ನು ಮಂಡಿಸಿದ್ದರು.
ಏತನ್ಮಧ್ಯೆ, ಮೃತ ಅನ್ವಯ್ ನಾಯ್ಕ್ ಪತ್ನಿ ಅಕ್ಷತಾ ನಾಯ್ಕ್ ಹೇಳಿಕೆಯನ್ನು ಬಾಂಬೆ ಹೈಕೋರ್ಟ್ ದಾಖಲಿಸಿಕೊಂಡಿದೆ.
Published On - 10:09 pm, Mon, 9 November 20