ಲಾಕ್‌ಡೌನ್ 3 ಅನಿವಾರ್ಯತೆ? ವಾರಾಂತ್ಯ ದೇಶವನ್ನುದ್ದೇಶಿಸಿ ಮೋದಿ ಭಾಷಣ ಸಾಧ್ಯತೆ!

ಲಾಕ್‌ಡೌನ್ 3 ಅನಿವಾರ್ಯತೆ? ವಾರಾಂತ್ಯ ದೇಶವನ್ನುದ್ದೇಶಿಸಿ ಮೋದಿ ಭಾಷಣ ಸಾಧ್ಯತೆ!

ಮೇ 3ರಂದು ದೇಶದಲ್ಲಿ ಲಾಕ್‌ಡೌನ್ 2.0 ಅಂತ್ಯವಾಗುವ ಹಿನ್ನೆಲೆ ವಾರಾಂತ್ಯದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ಸಾಧ್ಯತೆಯಿದೆ.

ಕೊರೊನಾ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮೋದಿ 4ನೆಯ ಬಾರಿಗೆ ಭಾಷಣ‌ ಮಾಡಲಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಲಾಕ್‌ಡೌನ್ 2.0 ಅಂತ್ಯಗೊಳಿಸುವ ಘೋಷನೆ ಮಾಡುವ ಸಾಧ್ಯತೆಯಿದೆ. ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಅವಧಿ ವಿಸ್ತರಿಸುವ ಅನಿವಾರ್ಯತೆಯನ್ನು ಅವರು ಮನದಟ್ಟುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಸಿಎಂಗಳ ಜೊತೆಗಿನ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಕೆಲ ರಾಜ್ಯಗಳು ಮನವಿ ಮಾಡಿರೋದನ್ನು ನೋಡಿದ್ರೆ ಲಾಕ್​ಡೌನ್ ಎರಡು ವಾರಗಳ ಮಟ್ಟಿಗಾದ್ರೂ ಮುಂದುವರಿಸಿದ್ರೂ ಅಚ್ಚರಿ ಇಲ್ಲ.

ಎರಡನೇ ಹಂತದ ಲಾಕ್​ಡೌನ್ ಜಾರಿಯಾಗಿ ಇಂದಿಗೆ 11 ದಿನಗಳಾಗಿವೆ. ಆದ್ರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶಾದ್ಯಂತ 25 ಸಾವಿರಕ್ಕೂ ಅಧಿಕ ಮಂದಿಗೆ ಮಹಾಮಾರಿ ಅಟ್ಯಾಕ್ ಮಾಡಿದೆ. 826 ಮಂದಿಯನ್ನು ಡ್ರ್ಯಾಗನ್ ವೈರಸ್ ಬಲಿ ಪಡೆದಿದೆ. ಹೆಮ್ಮಾರಿ ಕೊರೊನಾ ತನ್ನ ಬಾಹುವನ್ನು ಕ್ಷಣಕ್ಷಣಕ್ಕೂ ಚಾಚುತ್ತಿದೆ.

Click on your DTH Provider to Add TV9 Kannada