Breaking ಭಾರತದ ಆರ್ಥಿಕತೆಯು ಹೆಚ್ಚು ಸದೃಢವಾಗುತ್ತಿದೆ: ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್

| Updated By: ರಶ್ಮಿ ಕಲ್ಲಕಟ್ಟ

Updated on: Aug 01, 2022 | 8:33 PM

ಸೋಮವಾರ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಬೆಲೆ ಏರಿಕೆ ಚರ್ಚೆಯಾಗಿದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸದನವನ್ನುದ್ದೇಶಿಸಿ ಮಾತನಾಡಿದ್ದಾರೆ.

Breaking ಭಾರತದ ಆರ್ಥಿಕತೆಯು ಹೆಚ್ಚು ಸದೃಢವಾಗುತ್ತಿದೆ: ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ದೆಹಲಿ: ಬೆಲೆ ಏರಿಕೆ ಬಗ್ಗೆ (Price rise) ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಎರಡು ವಾರ ಲೋಕಸಭೆಯಲ್ಲಿ (Lok sabha) ಕಲಾಪ ಸರಿಯಾಗಿಯೇ ನಡೆದೇ ಇಲ್ಲ.ಸೋಮವಾರ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಬೆಲೆ ಏರಿಕೆ ಚರ್ಚೆಯಾಗಿದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸದನವನ್ನುದ್ದೇಶಿಸಿ ಮಾತನಾಡಿದ್ದಾರೆ. ಚಿಲ್ಲರೆ ಹಣದುಬ್ಬರವನ್ನು ಶೇ.7ಕ್ಕೆ ಇಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ  ನಿರ್ಮಲಾ, ಭಾರತೀಯ ಆರ್ಥಿಕತೆಯು ಇನ್ನೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಭರವಸೆ ನೀಡಿದರು. ನಿರ್ಮಲಾ  ಸೀತಾರಾಮನ್ ತಮ್ಮ ಭಾಷಣದಲ್ಲಿ ಸರಕುಗಳ ಬೆಲೆ ಏರಿಕೆ ಕುರಿತು ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದರು. ಭಾರತವು ಸ್ಥಗಿತ ಅಥವಾ ಆರ್ಥಿಕ ಹಿಂಜರಿತಕ್ಕೆ ಸಿಲುಕುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಸಚಿವೆ. ಬ್ಯಾಂಕ್‌ಗಳ ಒಟ್ಟು ಎನ್‌ಪಿಎಗಳು ಆರು ವರ್ಷಗಳ ಕನಿಷ್ಠ ಶೇ5.9 ಆಗಿದೆ. 2022 ರಲ್ಲಿ ಜಿಡಿಪಿ ಅನುಪಾತ ಶೇ56.21 ಕ್ಕೆ ಭಾರತದ ಸಾಲವು ಅನೇಕ ರಾಷ್ಟ್ರಗಳಿಗಿಂತ ಕಡಿಮೆಯಾಗಿದೆ.

ಜಿಎಸ್‌ಟಿ ಮತ್ತು ಮ್ಯಾಕ್ರೋ ಡೇಟಾವನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, ಭಾರತದ ಆರ್ಥಿಕತೆಯು ಹೆಚ್ಚು ಸದೃಢವಾಗುತ್ತಿದೆ.”ಇಂದು ಬೆಳಿಗ್ಗೆ ನಾವು ಜುಲೈ ತಿಂಗಳ ಸಂಪೂರ್ಣ ಜಿಎಸ್‌ಟಿ ಸಂಗ್ರಹವನ್ನು ಘೋಷಿಸಿದ್ದೇವೆ. ಜುಲೈ 2022 ರಲ್ಲಿ, ಜಿಎಸ್‌ಟಿಯನ್ನು ಪರಿಚಯಿಸಿದ ನಂತರ ನಾವು ಎರಡನೇ ಅತ್ಯಧಿಕ ಮಟ್ಟವನ್ನು ಗಳಿಸಿದ್ದೇವೆ – ಇದು ರೂ 1.49 ಲಕ್ಷ ಕೋಟಿ. ಇದು ಸತತ ಐದನೇ ತಿಂಗಳಿನಲ್ಲಿ ರೂ. 1.4 ಲಕ್ಷ ಕೋಟಿಗಿಂತ  ಕ್ಕಿಂತ ಹೆಚ್ಚಿನ ಸಂಗ್ರಹವಾಗಿದೆ ಎಂದಿದ್ದಾರೆ.

ಈ ರೀತಿಯ ಸಾಂಕ್ರಾಮಿಕ ರೋಗವನ್ನು ನಾವು ಎಂದಿಗೂ ನೋಡಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಜನರಿಗೆ ಹೆಚ್ಚುವರಿ ಸಹಾಯವನ್ನು ನೀಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಪ್ರತಿಯೊಬ್ಬ ಸಂಸದರು ಮತ್ತು ರಾಜ್ಯ ಸರ್ಕಾರಗಳು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.ಇಲ್ಲದೇ ಇದ್ದಿದ್ದರೆ ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಎಲ್ಲಿಯ ಇರುವುದಿಲ್ಲ ಎಂದು ಹೇಳಿದ್ದಾರೆ.

 

Published On - 7:09 pm, Mon, 1 August 22