AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಥ ಚಟರ್ಜಿ ವಜಾ ನಂತರ ಬುಧವಾರ ಸಚಿವ ಸಂಪುಟ ಪುನರ್​​ರಚನೆ ಮಾಡಲಿದ್ದಾರೆ ಮಮತಾ ಬ್ಯಾನರ್ಜಿ

ಸಚಿವರ ವಜಾ ಬೆನ್ನಲ್ಲೇ  ಬುಧವಾರ (ಆಗಸ್ಟ್ 3)ರಂದು ಮಮತಾ ಸಚಿವ ಸಂಪುಟ ಪುನರ್ ರಚನೆ ಮಾಡಲಿದ್ದು ನಾಲ್ಕರಿಂದ ಐದು ಹೊಸ ಮುಖಗಳನ್ನು ಸಚಿವ ಸಂಪುಟಕ್ಕೆ ಸೇರಿಸಲಿದ್ದಾರೆ.

ಪಾರ್ಥ ಚಟರ್ಜಿ ವಜಾ ನಂತರ ಬುಧವಾರ ಸಚಿವ ಸಂಪುಟ ಪುನರ್​​ರಚನೆ ಮಾಡಲಿದ್ದಾರೆ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Aug 01, 2022 | 5:48 PM

Share

ದೆಹಲಿ:  ಪಶ್ಚಿಮ ಬಂಗಾಳದಲ್ಲಿ(West Bengal) ಸಚಿವರಾಗಿದ್ದ ಪಾರ್ಥ ಚಟರ್ಜಿ (Partha Chatterjee) ಮತ್ತು ಅವರ ಆಪ್ತ ಸಹಾಯಕಿ ನಿವಾಸದ ಮೇಲೆ ದಾಳಿ ನಡೆಸಿ ಕೋಟಿಗಟ್ಟಲೆ ಹಣವನ್ನು ಇಡಿ ವಶಪಡಿಸಿಕೊಂಡ ನಂತರ ಮಮತಾ ಬ್ಯಾನರ್ಜಿ (Mamata Banerjee) , ಸಚಿವ ಚಟರ್ಜಿಯನ್ನು ಜುಲೈ 28ರಂದು ವಜಾ ಮಾಡಿದ್ದರು. ಸಚಿವರ ವಜಾ ಬೆನ್ನಲ್ಲೇ  ಬುಧವಾರ (ಆಗಸ್ಟ್ 3)ರಂದು ಮಮತಾ ಸಚಿವ ಸಂಪುಟ ಪುನರ್ ರಚನೆ ಮಾಡಲಿದ್ದು ನಾಲ್ಕರಿಂದ ಐದು ಹೊಸ ಮುಖಗಳನ್ನು ಸಚಿವ ಸಂಪುಟಕ್ಕೆ ಸೇರಿಸಲಿದ್ದಾರೆ.  ನಾವು ಸಪಬ್ರತಾ ಮುಖರ್ಜಿ, ಸಾಧನ್ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಪಾರ್ಥ ಜೈಲಿನಲ್ಲಿದ್ದಾರೆ. ಅವರ ಕೆಲಸಗಳನ್ನು  ಮಾಡಬೇಕಿದೆ. ಇವೆಲ್ಲವನ್ನೂ ನನಗೊಬ್ಬಳಿಗೇ ಸಂಭಾಳಿಸಲು ಸಾಧ್ಯವಿಲ್ಲ ಎಂದು ಮಮತಾ ಹೇಳಿದ್ದಾರೆ.

ನಾವು ಸಚಿವ ಸಂಪುಟವನ್ನು ವಿಲೀನಗೊಳಿಸಿ ಹೊಸತೊಂದನ್ನು ರಚಿಸಲು ತೀರ್ಮಾನಿಸಿಲ್ಲ. ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ  23ರಿಂದ30ಕ್ಕೇರಿದೆ. ಹಲವಾರು ಮಂದಿ ನನಗೆ ಪತ್ರ ಬರೆಯುತ್ತಿದ್ದಾರೆ.  ಈ ಹಿಂದೆ ಬಂಗಾಳದಲ್ಲಿ 23 ಜಿಲ್ಲೆಗಳಿದ್ದು ಈಗ 30ಕ್ಕೇರಿದೆ. ಹೊಸತಾಗಿ ಸುಂದರ್ ಬನ್, ಇಚ್ಚೆಮಟಿ, ರಾಣಾಘಾಟ್, ಬಿಷ್ಣುಪುರ್, ಜಂಗೀಪುರ್, ಬೆಹ್ರಾಂಪುರ್ ಮತ್ತ ಬಸೀರ್ ಹಟ್ ಎಂಬ ಹೊಸ 7 ಜಿಲ್ಲೆಗಳನ್ನು ರಚಿಸಲಾಗಿದೆ ಎಂದು ಮಮತಾ ಹೇಳಿದ್ದಾರೆ.

ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ ಪಾರ್ಥ ಚಟರ್ಜಿ ಅವನ್ನು ಬಂಧಿಸಿತ್ತು.  ಇಡಿ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಿಂದ ರಾಶಿ ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದು, ಅದು ನನ್ನ ಹಣ ಅಲ್ಲ ಎಂದು ಚಟರ್ಜಿ ಹೇಳಿದ್ದಾರೆ.

Published On - 4:59 pm, Mon, 1 August 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ