ಡೆಹ್ರಾಡೂನ್ ದೆಹಲಿ ಶತಾಬ್ಧಿ ಎಕ್ಸ್​ಪ್ರೆಸ್​ನ ಕೋಚ್​ಗೆ ಬೆಂಕಿ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

|

Updated on: Mar 13, 2021 | 3:53 PM

ಡೆಹ್ರಾಡೂನ್ ದೆಹಲಿ ಮಾರ್ಗಮಧ್ಯದ ಕಾನ್ಸ್ರೋ ಪ್ರದೇಶದ ಸಮೀಪ ಈ ಘಟನೆ ನಡೆದಿದ್ದು ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಬೆಂಕಿ ಅವಘಡ ಸಂಭವಿಸಿದ ಕೋಚ್​ನ್ನು ರೈಲಿನಿಂದ ಬೇರ್ಪಡಿಸಲಾಗಿದೆ.

ಡೆಹ್ರಾಡೂನ್ ದೆಹಲಿ ಶತಾಬ್ಧಿ ಎಕ್ಸ್​ಪ್ರೆಸ್​ನ ಕೋಚ್​ಗೆ ಬೆಂಕಿ; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ರೈಲ್ವೇ ಬೋಗಿಗೆ ಹೊತ್ತಿಕೊಂಡ ಬೆಂಕಿ (ಚಿತ್ರಕೃಪೆ: ಎಎನ್​ಐ)
Follow us on

ದೆಹಲಿ: ಡೆಹ್ರಾಡೂನ್ ದೆಹಲಿ ಶತಾಬ್ಧಿ ಎಕ್ಸ್​ಪ್ರೆಸ್​ ರೈಲಿನ C5 ಕೋಚ್​ನಲ್ಲಿ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೋಚ್​ನಲ್ಲಿದ್ದ ಎಲ್ಲಾ 35 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಬೆಂಕಿ ಅವಘಡ ಸಂಭವಿಸಿದ ಕೋಚ್​ನ್ನು ರೈಲಿನಿಂದ ಬೇರ್ಪಡಿಸಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿ ಹೆಚ್ಚಿನ ಅಪಾಯ ಸಂಭವಿಸದಂತೆ ತಡೆದಿದ್ದಾರೆ. 

ಡೆಹ್ರಾಡೂನ್ ದೆಹಲಿ ಶತಾಬ್ಧಿ ಎಕ್ಸ್​ಪ್ರೆಸ್​ ರೈಲಿನ C5 ಕೋಚ್​ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಡೆಹ್ರಾಡೂನ್ ದೆಹಲಿ ಮಾರ್ಗಮಧ್ಯದ ಕಾನ್ಸ್ರೋ ಪ್ರದೇಶದ ಸಮೀಪ ಈ ಘಟನೆ ನಡೆದಿದ್ದು ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು,ಬೆಂಕಿ ಅವಘಡ ಸಂಭವಿಸಿದ ಕೋಚ್​ನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿ ಹೆಚ್ಚಿನ ಅಪಾಯ ಸಂಭವಿಸದಂತೆ ತಡೆದಿದ್ದಾರೆ. ಯಾರಿಗೂ ಗಾಯ ಅಥವಾ ಕೊಂಚವೂ ಹಾನಿ ಉಂಟಾಗಿಲ್ಲ ಎಂದು ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಅಧಿಕೃತ ಹೇಳಿಕೆ ನೀಡಿದ್ದಾರೆ.

 

ಇದನ್ನೂ ಓದಿ: ಉಡುಪಿ ಪೇಜಾವರ ಮಠದಲ್ಲಿ ಬೆಂಕಿ ಆಕಸ್ಮಿಕ: ತಪ್ಪಿದ ಅನಾಹುತ

Delhi Chalo: ದೆಹಲಿ ಚಲೋಗೆ ನೂರು ದಿನ; ಕರ್ನಾಟಕದಲ್ಲೂ ನಡೆಯಲಿದೆ ರೈತ ಪಂಚಾಯತ್, ಬರ್ತಾರೆ ರಾಕೇಶ್ ಟಿಕಾಯತ್

Published On - 3:44 pm, Sat, 13 March 21